Advertisement
ಭೂಕುಸಿತದಿಂದ ಇಳಿಜಾರು ಪ್ರದೇಶದಲ್ಲಿದ್ದ ಅನೇಕ ಬಹುಮಹಡಿ ಕಟ್ಟಡಗಳು ಕುಸಿದು ಬೀಳುವ ಭೀಕರ ದೃಶ್ಯ ಸೆರೆಯಾಗಿದೆ, ಅಲ್ಲದೆ ಕಟ್ಟಡ ಕುಸಿದು ಬಿದ್ದ ಸ್ಥಳದಲ್ಲಿ ದಟ್ಟ ಧೂಳು ಆವರಿಸಿದ್ದು ಮೈ ಜುಮ್ ಎನ್ನುವಂತಿದೆ.
Related Articles
Advertisement
ಹಿಮಾಚಲದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಭಾರತೀಯ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳ ಕಾಲ ಶಿಮ್ಲಾ ಸೇರಿದಂತೆ ಕಂಗ್ರಾ, ಕುಲು, ಮಂಡಿ, ಸೋಲನ್ ಮತ್ತು ಸಿರ್ಮೌರ್ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ “ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ. ಏತನ್ಮಧ್ಯೆ, ಶಿಮ್ಲಾ, ಸಿರ್ಮೌರ್, ಕಂಗ್ರಾ, ಚಂಬಾ, ಮಂಡಿ, ಹಮೀರ್‌ಪುರ್, ಸೋಲನ್, ಬಿಲಾಸ್‌ಪುರ್ ಮತ್ತು ಕುಲು ಒಂಬತ್ತು ಜಿಲ್ಲೆಗಳಲ್ಲಿ ಮಳೆಯಿಂದ ಅಧಿಕ ಪ್ರವಾಹ ಸಂಭವಿಸುವ ಎಚ್ಚರಿಕೆಯನ್ನು ನೀಡಿದೆ. ಶಾಲಾ ಕಾಲೇಜುಗಳಿಗೆ ರಜೆ:
ಭಾರೀ ಮಳೆಯ ಹಿನ್ನೆಲೆಯಲ್ಲಿ ಶಿಮ್ಲಾ, ಮಂಡಿ ಮತ್ತು ಸೋಲನ್ ಜಿಲ್ಲೆಗಳಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಾಲುಗಟ್ಟಿ ನಿಂತ ವಾಹನಗಳು:
ಕುಲು ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಿಂದಾಗಿ ಕುಲು-ಮಂಡಿ ರಸ್ತೆ ಹಾಳಾಗಿದ್ದರಿಂದ ನೂರಾರು ವಾಹನಗಳು ಸಿಲುಕಿಕೊಂಡಿವೆ. ಪಾಂಡೋ ಮೂಲಕ ಪರ್ಯಾಯ ಮಾರ್ಗವೂ ಹಾಳಾಗಿದೆ. ಡೆಬ್ರಿಸ್ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿಯ ಪ್ರಕಾರ ರಾಷ್ಟ್ರೀಯ ಹೆದ್ದಾರಿ 21 (ಮಂಡಿ-ಕುಲು ರಸ್ತೆ) ಮತ್ತು ಎನ್‌ಎಚ್ 154 (ಮಂಡಿ-ಪಠಾಣ್‌ಕೋಟ್) ಪೀಡಿತ ರಸ್ತೆಗಳು ಬಂದ್ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರಿ ಮಳೆಗೆ ರಾಜ್ಯದಲ್ಲಿ ಒಟ್ಟು 709 ರಸ್ತೆಗಳನ್ನು ಈಗಾಗಲೇ ಮುಚ್ಚಲಾಗಿದೆ, ಭೂ ಕುಸಿತದಿಂದ ಹಲವೆಡೆ ಮನೆಗಳು ಬಿರುಕು ಬಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಈ ತಿಂಗಳು ಮಳೆ ಸಂಬಂಧಿತ ಘಟನೆಗಳಲ್ಲಿ 120 ಜನರು ಸಾವನ್ನಪ್ಪಿದ್ದರೆ, ಜೂನ್ 24 ರಂದು ರಾಜ್ಯದಲ್ಲಿ ಮಾನ್ಸೂನ್ ಪ್ರಾರಂಭವಾದಾಗಿನಿಂದ ಒಟ್ಟು 238 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: Chandrayaan-3: ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ಕಾರ್ಯ ಆರಂಭಿಸಿದ ರೋವರ್