ಉಳ್ಳಾಲ: ಮುಕ್ಕಚ್ಚೇರಿ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರು ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟರೆ, ಇನ್ನೋರ್ವ ಗಾಯಗಳಿಂದ ಪಾರಾಗಿದ್ದಾರೆ.
ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಜುಬೈರ್ (39) ಹತ್ಯೆಯಾದವರು. ಅವರ ಜತೆಗಿದ್ದ ಮಾರ್ಗತಲೆ ನಿವಾಸಿ ಇಲ್ಯಾಸ್ ಕೈಗೆ ತಲವಾರಿನ ಗಾಯವಾಗಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆ ಯಲ್ಲಿ ಚೇತರಿಸುತ್ತಿದ್ದಾರೆ.
ಘಟನೆಯ ವಿವರ: ಉಳ್ಳಾಲದ ಮೀನಿನ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಜುಬೈರ್ ಮತ್ತು ಮಂಗಳೂರಿನ ದಕ್ಕೆಯಲ್ಲಿ ಕೆಲಸ ಮಾಡುವ ಇಲ್ಯಾಸ್ ಮುಕ್ಕಚ್ಚೇರಿ ಬಳಿಯ ಮಸೀದಿಯ ಎದುರು ನಿಂತಿದ್ದರು. ಆಗ ಬೈಕ್‌ನಲ್ಲಿ ಬಂದಿದ್ದ ತಂಡವೊಂದು ತಲವಾರಿನಿಂದ ಜುಬೈರ್‌ನ ಅವರ ತಲೆ, ಕೈ ಮತ್ತು ಕಾಲಿನ ಭಾಗಕ್ಕೆ ತಲವಾರಿನಿಂದ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಟ್ಟಿಗಿದ್ದ ಇಲ್ಯಾಸ್ ಪರಾರಿಯಾಗುತ್ತಿದ್ದವನ್ನು ಹಿಡಿಯಲು ಯತ್ನಿಸಿದಾಗ ತಲವಾರು ಇಲ್ಯಾಸ್‌ಅವರ ಕೈಗೆ ತಾಗಿ ಗಂಭೀರವಾದ ಏಟು ಬಿದ್ದಿತ್ತು. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯ ಗೊಂಡಿದ್ದ ಜುಬೈರ್ ಅವನನ್ನು ಮಂಗಳೂರಿನ ಆಸ್ಪ ತ್ರೆಗೆ ದಾಖಲಿಸಿದರೂ ಮೃತಪಟ್ಟರು.
ಅಪಘಾತವಾಯಿತೆಂದು ತಿಳಿದಿದ್ದರು: ಮುಕ್ಕಚ್ಚೇರಿ ಬಳಿ ಘಟನೆ ನಡೆದಾಗ ಜನರಿದ್ದರೂ ಅವರಿಗೆ ತಲವಾರಿನಿಂದ ಹಲ್ಲೆ ನಡೆದಿದೆ ಎಂದು ಗೊತ್ತಾಗಿಲ್ಲ. ಅಪಘಾತ ಮಾಡಿ ಬೈಕ್‌ನವರು ಪರಾರಿಯಾಗಿದ್ದಾರೆಂದು ತಿಳಿದಿದ್ದರು. ಆದರೆ, ಘಟನಾ ಸ್ಥಳಕ್ಕೆ ಬಂದಾಗ ಹಲ್ಲೆಗೊಳಗಾಗಿದ್ದ ಜುಬೈರ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಆ ಹೊತ್ತಿಗಾಗಗಲೇ ಹಂತಕರು ಪರಾರಿಯಾಗಿದ್ದರು.
ಬಿಜೆಪಿ ಕಾರ್ಯಕರ್ತನಾಗಿದ್ದ : ಹತ್ಯೆಗೀಡಾದ ಜುಬೈರ್ ಯಾವುದೇ ಪ್ರಕರಣಗಳಲ್ಲಿ ಇರಲಿಲ್ಲ. ಬಿಜೆಪಿ ಕಾರ್ಯಕರ್ತನಾಗಿದ್ದ ಈತ ಹೆಚ್ಚಾಗಿ ದರ್ಗಾ ಸಮೀಪವಿರುವ ಹೊಸಪಳ್ಳಿಗೆ ನಮಾಝ್ಗೆ ಹೋಗುತ್ತಿದ್ದರು. ಆದರೆ ಬುಧವಾರ ಮನೆ ಸಮೀಪದ ಮುಕ್ಕಚ್ಚೇರಿ ಬಳಿಯ ಮಸೀದಿಗೆ ನಮಾಝ್ಗೆ ತರೆಳಿದ್ದು, ನಮಾಝ್ ಮುಗಿಸಿ ಹೊರಗೆ ಬಂದಾಗ ಈ ಘಟನೆ ಸಂಭವಿಸಿದೆ. ಜುಬೈರ್ ತಾಯಿ, ತಂದೆ, ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಗಾಂಜಾ ತಂಡದ ಕೃತ್ಯ: ವರ್ಷದ ಹಿಂದೆ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಗಾಂಜಾ ಸಹಿತ ಅಪರಾಧ ಪ್ರಕರಣಗಳಲ್ಲಿ ಆರೋಪಿ ಯಾಗಿರುವ ರೌಡಿಯೊಬ್ಬನ ವಿರುದ್ಧ ದೂರು ನೀಡಿದ ವಿಚಾರದಲ್ಲಿ ತಂಡವೊಂದು ಜೀವ ಬೆದರಿಕೆ ಹಾಕಿತ್ತು. ವೈಯಕ್ತಿವಾಗಿ ದೂರು ನೀಡದಿದ್ದರೂ ದೂರು ನೀಡಿದ ತಂಡಕ್ಕೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಆ ತಂಡ ಜೀವಬೆದರಿಕೆ ಹಾಕಿತ್ತು. ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿ ಪ್ರಕರಣವನ್ನು ಇತ್ಯರ್ಥಗೊಂಡಿತ್ತು. ಇದೇ ತಂಡ ಹತ್ಯೆ ನಡೆಸಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್, ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.