Advertisement

Udupi: ಪೇಜಾವರ ಶ್ರೀಗಳಿಂದ ನೀಲಾವರ ಗೋಶಾಲೆಗೆ ಏಳನೇ ವರ್ಷದ ಪಾದಯಾತ್ರೆ

05:08 PM Nov 26, 2023 | Team Udayavani |

ಉಡುಪಿ: ಅಯೋಧ್ಯಾ ರಾಮಮಂದಿರ ವಿಶ್ವಸ್ಥರಾದ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾನುವಾರ ತಮ್ಮ ಮುನ್ನೂರಕ್ಕೂ ಅಧಿಕ ಶಿಷ್ಯರು ಭಕ್ತರೊಂದಿಗೆ ಉಡುಪಿ ಶ್ರೀ ಕೃಷ್ಣಮಠದಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ ನಡೆಸಿದರು.

Advertisement

ಈ ಕುರಿತು ಮಾತನಾಡಿದ ಶ್ರೀಗಳು ನಮ್ಮ ಬದುಕು ತಾಪವಾಗದೇ ತಪಸ್ಸಾಗಬೇಕು..ನಿತ್ಯ ಜೀವನದಲ್ಲಿ ನಮ್ಮ ನಮ್ಮ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳಲು ಹೆಣಗಾಡ್ತೇವೆ ..ಇದೇ ತಾಪ ..ಅದೇ ಕಾಡಿನಲ್ಲಿ ಋಷಿಮುನಿಗಳು ಲೋಕದ ಒಳಿತಿಗಾಗಿ ತಾವು ಕಷ್ಟಪಟ್ಟ ಲೋಕದೊಳಿತಿಗೆ ಹಂಬಲಿಸಿದರು ಅದೇ ತಪಸ್ಸು . ನಮ್ಮ ಜೀವನವೂ ತಪಸ್ಸಾಗಬೇಕು .ಹಾಗಾಗಬೇಕಾದರೆ ಕೇವಲ ನಮ್ಮ ಹಿತಕ್ಕಾಗಿ ಮಾತ್ರವಲ್ಲದೇ ಪರರ ಹಿತದ ಬಗ್ಗೆಯೂ ಚಿಂತಿಸಿ ಶ್ರಮಿಸಲು ಯತ್ನಿಸಬೇಕು. ಅಂಥ ಮನಸ್ಥಿತಿ ನಮ್ಮದಾಗಲು ಸಾತ್ವಿಕ ಚಿಂತನೆ ಸಾತ್ವಿಕ ಕಾರ್ಯಗಳಲ್ಲಿ ಪ್ರವೃತ್ತಿ ಭಗವಂತನಲ್ಲಿ ಭಕ್ತಿ ಬೇಕು ಎಂದು ಹೇಳಿದರು.

ಪಾದಯಾತ್ರೆಯಂಥವುಗಳನ್ನು ಮಾಡೋದ್ರಿಂದ ಭಗವದ್ಭಕ್ತಿ ಸಾತ್ವಿಕರ ಸಹವಾಸ ನಮ್ಮ ಸುತ್ತಮುತ್ತಲ ಪರಿಸರ ಪ್ರಕೃತಿಗಳ ಬಗ್ಗೆ ತಿಳಿವು, ವಿವಿಧ ತೀರ್ಥಕ್ಷೇತ್ರಗಳ ಸಂದರ್ಶನದಿಂದ ಸತ್ಫಲ ಪ್ರಾಪ್ತಿ, ಸಾತ್ವಿಕ ಪ್ರಜ್ಞೆಯ ಜಾಗೃತಿ, ವಿವಿಧ ಬಗೆಯ ಜನ ಜನಜೀವನದ ಪರಿಚಯ ಇತ್ಯಾದಿಗಳು ಸಾಧ್ಯ. ಹಾಗಾದಾಗ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರವಾಗಿ, ನಮಗೆ ಒಳಿತಿಗಾಗಿ ಮಾತ್ರವೇ ಪರರ ಒಳಿತಿಗಾಗಿಯೂ ಪ್ರವೃತ್ತರಾಗುವ ಅಪೇಕ್ಷೆಗಳು ಮೂಡಲು ಸಾಧ್ಯವಾಗ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಭಕ್ತರು ಶಿಷ್ಯರೊಂದಿಗೆ ದೇಶದ ನೂರಾರು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: PCB; ಭಾರತ ಕ್ರಿಕೆಟ್ ತಂಡ ಪಾಕ್ ಗೆ ಬರಲು ನಿರಾಕರಿಸಿದರೆ ಪರಿಹಾರವನ್ನು ನೀಡಿ

Advertisement

Udayavani is now on Telegram. Click here to join our channel and stay updated with the latest news.

Next