Advertisement
ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆ ಸಲು ಬೇಕಾದ ಯಾವುದೇ ಸಿದ್ಧತೆ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರ ಇನ್ನೂ ಮಾಡಿ ಕೊಂಡಿಲ್ಲ. ಈ ಸಂಬಂಧ ಸರಕಾರದಿಂದ ಅಧಿಕೃತ ಆದೇಶ ಅಥವಾ ನಿರ್ದೇ ಶನವೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಲು ಪಿಲ್ಲ . ಪರೀಕ್ಷೆಗೆ ಕೇವಲ 4 ತಿಂಗಳಿದ್ದು ಈ ಹಂತದಲ್ಲಿ ಹೊಸ ಪದ್ಧತಿ ಅನುಷ್ಠಾನ ಗೊಂದಲಕ್ಕೆ ಕಾರಣ ವಾಗ ಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
Related Articles
ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಲು ಕಾನೂ ನಾತ್ಮಕವಾಗಿ ಅವಕಾಶ ಇದೆಯೇ ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಗಳು, ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಆರಂಭಿಸಿದ್ದಾರೆ. ಈಗಾಗಲೇ 1ರಿಂದ 9ನೇ ತರಗತಿವರೆಗೆ ಅನುತ್ತೀರ್ಣ ಮಾಡಬಾರದು ಎಂಬ ನಿಯಮವಿದೆ. ಹೊಸ ಶಿಕ್ಷಣ ನೀತಿ ಬಂದ ಅನಂತರ ಈಗಿನ ವ್ಯವಸ್ಥೆ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ಆಗಬಹುದಾದ ಅನುಕೂಲ ಮತ್ತು ಅನನುಕೂಲದ ಬಗ್ಗೆಯೂ ಚರ್ಚೆಗಳು ನಡೆದಿವೆ.
Advertisement
ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಏಳನೇ ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ರಾಜ್ಯ ಪಠ್ಯ ಕ್ರಮದ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ವಿದ್ಯಾರ್ಥಿಗಳು ಎಷ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಇಲಾಖೆಯಿಂದ ಇನ್ನೂ ಪಡೆದು ಕೊಂಡಿಲ್ಲ. ಒಟ್ಟಾರೆಯಾಗಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕ-ಪೋಷಕರು ಈ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.
ಪ್ರಶ್ನೆಪತ್ರಿಕೆಯೂ ಸಿದ್ಧವಾಗಿಲ್ಲಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಮತ್ತು ಅದರ ಫಲಿತಾಂಶ ಪ್ರಕಟನೆ ಕುರಿತು ಚಿಂತನೆ ನಡೆಸಿ ಕ್ರಮ ತೆಗೆದು ಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಇದುವರೆಗೆ ಪ್ರಶ್ನೆ ಪತ್ರಿಕೆ ತಯಾರಿಕೆಗಾಗಿ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಸ್ಪಷ್ಟ ನಿರ್ದೇಶನ ಹೋಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಪಬ್ಲಿಕ್ ಪರೀಕ್ಷೆ ಸಂಬಂಧ ಸರಕಾರ ದಿಂದ ಯಾವುದೇ ಆದೇಶ ಆಗಿಲ್ಲ ಮತ್ತು ಇಲಾಖೆಗೂ ಯಾವುದೇ ನಿರ್ದೇಶನ ಬಂದಿಲ್ಲ.
– ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ -ರಾಜು ಖಾರ್ವಿ ಕೊಡೇರಿ