Advertisement
ಪ್ರಧಾನಿ ಮೋದಿಯವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 72 ಮಂದಿಯಲ್ಲಿ 7 ಮಂದಿ ಮಹಿಳೆಯರು ಸೇರಿದ್ದಾರೆ. ಹಿಂದಿನ ಸಚಿವ ಸಂಪುಟದಲ್ಲಿ ಒಟ್ಟು 10 ಮಹಿಳಾ ಸಚಿವರಿದ್ದರು. ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ, ರಾಜ್ಯ ಸಚಿವೆ ಡಾ.ಭಾರತಿ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಷ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೌಮಿಕ್ ಅವರಿಗೆ 18ನೇ ಲೋಕಸಭೆಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಈ ಬಾರಿ ಹೊಸ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿರುವ 7 ಮಹಿಳೆಯರು ಯಾರು ಅವರ ವಿವರ ಇಲ್ಲಿದೆ:
Related Articles
Advertisement
ನೀಮುಬೆನ್ ಬಂಬಾನಿಯಾ (ಬಿಜೆಪಿ): ಗುಜರಾತ್‌ನ ಭಾವನಗರದಲ್ಲಿ ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಉಮೇಶ್ ಮಕ್ವಾನಾ ಅವರನ್ನು 4.55 ಲಕ್ಷ ಮತಗಳ ಅಂತರದಿಂದ ಸೋಲಿಸಿದ ನೀಮುಬೆನ್ ಬಂಬಾನಿಯಾ ಅವರು ಮೋದಿ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಟಿಕೆಟ್‌ನಲ್ಲಿ ಗುಜರಾತ್‌ನಿಂದ ಗೆದ್ದ ಮೂವರು ಮಹಿಳೆಯರಲ್ಲಿ ಅವರು ಒಬ್ಬರು. ನೀಮುಬೆನ್ ಬಂಬಾಣಿಯವರು ಈ ಹಿಂದೆ ಬೋಧನಾ ಕ್ಷೇತ್ರದಲ್ಲಿದ್ದವರು. ಅವರು 2009-10 ಮತ್ತು 2015-18 ರ ನಡುವೆ ಎರಡು ಅವಧಿಗೆ ಭಾವನಗರದ ಮೇಯರ್ ಆಗಿ ಸೇವೆ ಸಲ್ಲಿಸಿದರು ಮತ್ತು 2013 ಮತ್ತು 2021 ರ ನಡುವೆ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದರು.
ರಕ್ಷಾ ಖಡ್ಸೆ (ಬಿಜೆಪಿ): ರಾಜ್ಯ ಸಚಿವ ರಕ್ಷಾ ಖಡ್ಸೆ ಮಾಜಿ ಬಿಜೆಪಿ ನಾಯಕ ಏಕನಾಥ್ ಖಡ್ಸೆ ಅವರ ಸೊಸೆ. ಮಹಾರಾಷ್ಟ್ರದಿಂದ ಮೂರು ಬಾರಿ ಸಂಸದ. 2013ರ ಮಹಾರಾಷ್ಟ್ರ ಲೆಜಿಸ್ಲೇಟ್ ಕೌನ್ಸಿಲ್ ಚುನಾವಣೆಯಲ್ಲಿ ಎನ್‌ಸಿಪಿ ನಾಯಕ ಮನೀಷ್ ಜೈನ್ ವಿರುದ್ಧದ ಸೋಲಿನ ನಂತರ ಅವರ ಪತಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡರು. ಇದಾದ ನಂತರ 2014ರಲ್ಲಿ ಜೈನ್ ವಿರುದ್ಧ ರೇವರ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. 2014ರಲ್ಲಿ ಮತ್ತೆ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿ ಶ್ರೀರಾಮ್ ಪಾಟೀಲ್ ವಿರುದ್ಧ 2.72 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಖಡ್ಸೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಶೋಭಾ ಕರಂದ್ಲಾಜೆ (ಬಿಜೆಪಿ): ಕರ್ನಾಟಕದ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿದ್ದರು. ರಾಜ್ಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದ ಕರಂದ್ಲಾಜೆ ಅವರು ಮೂರು ಬಾರಿ ಲೋಕಸಭೆ ಸದಸ್ಯರಾಗಿದ್ದರು. ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಎಂವಿ ರಾಜೀವ್ ಗೌಡ ಅವರನ್ನು ಸೋಲಿಸಿ 2,59,476 ಅಂತರದಿಂದ ಗೆದ್ದು ಬೆಂಗಳೂರಿನ ಮೊದಲ ಮಹಿಳಾ ಸಂಸದರಾದರು.
ಅನುಪ್ರಿಯಾ ಪಟೇಲ್ (ಅಪ್ನಾ ದಳ): ಕೇಂದ್ರ ಸಚಿವ ಸಂಪುಟಕ್ಕೆ ಮರಳಿದ ಅನುಪ್ರಿಯಾ ಪಟೇಲ್, ಇತರೆ ಹಿಂದುಳಿದ ವರ್ಗ (ಒಬಿಸಿ) ಕುರ್ಮಿ ಸಮುದಾಯದ ಪ್ರಮುಖ ನಾಯಕಿ ಮತ್ತು ಅಪ್ನಾ ದಳದ ಸಂಸ್ಥಾಪಕ, ದಿವಂಗತ ಡಾ. ಸೋನೆಲಾಲ್ ಪಟೇಲ್ ಅವರ ಪುತ್ರಿ. ಅವರು ಹಿಂದಿನ ಸರ್ಕಾರದಲ್ಲಿ ರಾಜ್ಯ ವಾಣಿಜ್ಯ ಸಚಿವರಾಗಿದ್ದರು. ಅವರು ಉತ್ತರ ಪ್ರದೇಶದ ಮಿರ್ಜಾಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ರಮೇಶ್ ಚಂದ್ ಬಿಂದ್ ಅವರನ್ನು 37,810 ಮತಗಳ ಅಂತರದಿಂದ ಸೋಲಿಸಿದರು.
ಇದನ್ನೂ ಓದಿ: Hunasuru: ಸ್ನೇಹಿತರ ಜೊತೆಗೂಡಿ ದೊಡ್ಡಪ್ಪನ ಮನೆಗೆ ಕನ್ನ… ಇಬ್ಬರ ಬಂಧನ