Advertisement

ಯು.ಎಸ್. ಪಡೆಗಳಿರುವ ಇರಾಕ್ ವಾಯುನೆಲೆಯ ಮೇಲೆ ರಾಕೆಟ್ ದಾಳಿ ; ನಾಲ್ವರಿಗೆ ಗಾಯ

09:46 AM Jan 13, 2020 | Team Udayavani |

ಬಗ್ದಾದ್: ಇರಾಕ್ ನಲ್ಲಿ ಅಮೆರಿಕಾ ಯೋಧರ ನೆಲೆ ಇರುವ ಬಾಲಾದ್ ವಾಯುನೆಲೆಯ ಮೇಲೆ ರವಿವಾರ ರಾಕೆಟ್ ದಾಳಿ ನಡೆದಿದೆ. ಘಟನೆಯಲ್ಲಿ ಕನಿಷ್ಟ ನಾಲ್ಕು ಜನ ಯೋಧರು ಗಾಯಗೊಂಡಿರುವ ಕುರಿತಾಗಿ ಮಾಹಿತಿ ಲಭಿಸಿದೆ. ಒಟ್ಟು ಏಳು ಮಾರ್ಟರ್ ಬಾಂಬ್ ಗಳು ಈ ವಾಯುನೆಲೆಯ ಮೇಲೆ ಅಪ್ಪಳಿಸಿರುವುದಾಗಿ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

Advertisement

ಬಾಗ್ದಾದ್ ನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಬಾಲಾದ್ ವಾಯುನೆಲೆಯ ರನ್ ವೇ ಮೆಲೆ ಮಾರ್ಟರ್ ಬಾಂಬ್ ಗಳು ಅಪ್ಪಳಿಸಿರುವುದಾಗಿ ಮಿಲಿಟರಿ ಮೂಲಗಳು ತಿಳಿಸಿವೆ.

ಇರಾನ್ ಮತ್ತು ಅಮೆರಿಕಾ ನಡುವೆ ಬಿಗುವಿನ ವಾತಾವರಣ ನೆಲೆಸಿರುವ ಹಿನ್ನಲೆಯಲ್ಲಿ ಈ ವಾಯುನೆಲೆಯಲ್ಲಿದ್ದ ಬಹುತೇಕ ಅಮೆರಿಕಾ ಯೋಧರು ಕಳೆದ ಎರಡು ವಾರಗಳ ಅವಧಿಯಲ್ಲಿ ಇಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next