Advertisement

ಮತ್ತೆ ಏಳು ಹೊಸ ಕೋವಿಡ್ ಪ್ರಕರಣಗಳು: ರಾಜ್ಯದಲ್ಲಿ 415 ಸೋಂಕಿತರು

10:03 AM Apr 22, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ಮಂಗಳವಾರ ಹೊಸ ಏಳು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಓರ್ವ ನಿಧನರಾಗಿದ್ದಾರೆ.

Advertisement

ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ ಮೂರು ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರಕರಣ ದೃಢವಾಗಿದೆ.

ಕಲಬುರಗಿಯ 80 ವರ್ಷದ ವೃದ್ಧ ಸೋಮವಾರ ಮೃತರಾಗಿದ್ದು, ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢವಾಗಿದೆ. ಉಳಿದಂತೆ ಕಲಬುರಗಿಯ 29 ವರ್ಷ ಮತ್ತು 61 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.

ವಿಜಯಪುರದಲ್ಲಿ ಮೂವರು ಮಹಿಳೆಯರಿಗೆ ಸೋಂಕು ತಾಗಿದ್ದು, ಮೂವರಿಗೂ ಸೋಂಕಿತ ಸಂಖ್ಯೆ 306ರ ಸಂಪರ್ಕದಿಂದ ಸೋಂಕು ತಾಗಿರುವುದು ದೃಢವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 67 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

Advertisement

ರಾಜ್ಯದ್ಲಲಿ ಒಟ್ಟು ಸೋಂಕಿತರ ಸಂಖ್ಯೆ 415 ಆಗಿದ್ದು, 17 ಸೋಂಕಿತರು ನಿಧನರಾಗಿದ್ದಾರೆ. ಒಟ್ಟು 114 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next