Advertisement

ರೈತರ ಪಂಪ್‌ಸೆಟ್‌ಗಳಿಗೆ ಏಳು ತಾಸು ತ್ರಿಫೇಸ್‌ ವಿದ್ಯುತ್‌

03:58 PM Jul 24, 2019 | Team Udayavani |

ಧಾರವಾಡ: ನೀರಾವರಿ ಪಂಪ್‌ಸೆಟ್ ಫೀಡರ್‌ಗಳಿಗೆ (ಮಾರ್ಗಗಳಿಗೆ) ಸರ್ಕಾರಿ ಆದೇಶದನ್ವಯ ತ್ರಿಫೇಸ್‌ ವಿದ್ಯುತ್‌ ಪೂರೈಕೆಯನ್ನು 7 ಗಂಟೆಗಳ ಕಾಲ ಎರಡು ಅಥವಾ ಒಂದೇ ಸರದಿಯಲ್ಲಿ ನೀಡಲಾಗುತ್ತಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಧಾರವಾಡ ಗ್ರಾಮೀಣ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ ಟಿಂಗರೀಕರ ಹೇಳಿದರು.

Advertisement

ನಿಗದಿ ಗ್ರಾಮ ಹಾಗೂ ಅಳ್ನಾವರ ಪಟ್ಟಣದಲ್ಲಿ ಪ್ರತ್ಯೇಕವಾಗಿ ಜರುಗಿದ ವಿದ್ಯುತ್‌ ಬಳಕೆಯಲ್ಲಿ ಸುರಕ್ಷತೆ ಮತ್ತು ಉಳಿತಾಯದ ಕುರಿತ ಗ್ರಾಹಕ ಜಾಗೃತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾತ್ರಿ ಹೊಲದಲ್ಲಿರುವ ಮನೆಗಳಿಗಾಗಿ ಓಪನ್‌ಡೆಲಾr (ಸಿಂಗಲ್ ಫೇಸ್‌) ನೀಡಲಾಗುತ್ತಿದೆ. ಈಗಾಗಲೇ ಎಲ್ಲ ಉಪಕೇಂದ್ರಗಳಲ್ಲಿ ನೀರಾವರಿ ಪಂಪ್‌ಸೆಟ್ ಮಾರ್ಗಗಳಿಗೆ ನ್ಯೂಮರಿಕಲ್ರಿಲೆ ಅಳವಡಿಸಲಾಗಿದ್ದು, ಉಳಿದಂತಹ ಮಾರ್ಗಗಳಿಗೆ ಆ. 1ರೊಳಗಾಗಿ ನ್ಯೂಮರಿಕಲ್ರಿಲೆ ಅಳವಡಿಸಲಾಗುತ್ತಿದೆ ಎಂದರು.

ಹೆಸ್ಕಾಂ ಗ್ರಾಹಕರು ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ತಮ್ಮ ಅಹವಾಲು ಸಲ್ಲಿಸಬಹುದು. ಪ್ರತಿ ತಿಂಗಳ 3ನೇ ಶನಿವಾರದಂದು ನಡೆಯುವ ವಿದ್ಯುತ್‌ ಅದಾಲತ್‌ ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ದೂರುಗಳನ್ನು ನೀಡಬಹುದು. ಒಂದು ವೇಳೆ ರೈತರು ಓಪನ್‌ ಡೆಲಾr(ಸಿಂಗಲ್ ಫೇಸ್‌ ಪೂರೈಕೆ) ಸಮಯದಲ್ಲಿ ಕೆಪ್ಯಾಸಿಟರ್‌ ಅಳವಡಿಸಿ ತಮ್ಮ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡಿದರೆ ಸಂಪೂರ್ಣ ಮಾರ್ಗ (ಫೀಡರ್‌) ಟ್ರಿಪ್‌ ಆಗಿ ಹೊಲದಲ್ಲಿರುವ ಮನೆಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತವಾಗುತ್ತದೆ. ರೈತರು ತ್ರಿಫೇಸ್‌ ವಿದ್ಯುತ್‌ ಪೂರೈಕೆ ಸಮಯದಲ್ಲಿ ಮಾತ್ರ ತಮ್ಮ ಪಂಪ್‌ಸೆಟ್‌ಗಳನ್ನು ಚಾಲನೆಯಲ್ಲಿಟ್ಟು ಸಹಕರಿಸಬೇಕು ಎಂದ ಮನವಿ ಮಾಡಿದರು.

ಗ್ರಾಮೀಣ ಶಾಖೆ-2ರ ಶಾಖಾಧಿಕಾರಿ ಸಹದೇವ ಇಂಗಳಗಿ ಹಾಗೂ ಅಳ್ನಾವರ ಶಾಖೆಯ ರೋಹಿತ್‌ ಸಾಳುಂಕೆ ಮಾತನಾಡಿದರು.

Advertisement

ಪ್ರಾಂಶುಪಾಲ ಸಿ.ಎನ್‌. ಹೆಬ್ಟಾಳ, ಶಿವು ಬಸನಕೊಪ್ಪ, ನಿಗದಿಯ ಮಲೆನಾಡು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಅಧ್ಯಕ್ಷ ಮಲ್ಲನಗೌಡ ಎಸ್‌. ಪಾಟೀಲ್ ಇನ್ನಿತರರಿದ್ದರು.

ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್‌ ಗ್ರಾಹಕರ ಜಾಗೃತಿ ಸಭೆ ಶುರು:

ವಿದ್ಯುತ್‌ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್ಇಡಿ ಬಳಕೆಯ ಪ್ರಯೋಜನಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಜು. 22ರಿಂದ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಭೆ ಆರಂಭವಾಗಿದ್ದು, ಆ. 10ರ ವರೆಗೆ ನಡೆಯಲಿದೆ. ಜಾಗೃತಿ ಕಾರ್ಯಕ್ರಮದೊಂದಿಗೆ ಗ್ರಾಹಕರ ಕುಂದು-ಕೊರತೆಗಳು, ಓಂಬುಡ್ಸಮನ್‌, ಅದಾಲತ್‌ ಹಾಗೂ ಗ್ರಾಹಕರ ಸಂವಾದ ಸಭೆ, ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕರಿಸಲಾಗುತ್ತದೆ. ಹೀಗಾಗಿ ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಖಾ ಕಚೇರಿಗಳಲ್ಲಿ ಎಸ್‌ಇ/ಇಇ/ಎಇಇ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆ ನಡೆಯುವ ದಿನ ಹಾಗೂ ಹೆಚ್ಚಿನ ಮಾಹಿತಿಗೆ ಸಮೀಪದ ಶಾಖಾ ಕಚೇರಿ ಸಂಪರ್ಕಿಸುವಂತೆ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next