Advertisement

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

12:17 PM Sep 19, 2020 | Nagendra Trasi |

ಬೈಲಹೊಂಗಲ: ಯಾವುದೇ ತರಬೇತಿ ಪಡೆಯದೇ ಮನೆಯಲ್ಲೇ ಅಧ್ಯಯನ ಮಾಡಿದ ಗ್ರಾಮೀಣ ಪ್ರದೇಶದ ರೈತನ ಮಗಳಿಗೆ 7 ಸರಕಾರಿ ಹುದ್ದೆಗಳ ಅವಕಾಶ ಬಂದಿದ್ದು, ಅವರು ಎಸ್‌ಐ ಹುದ್ದೆಯನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ.

Advertisement

ಬೈಲಹೊಂಗಲ ತಾಲೂಕಿನ ಉಡಕೇರಿಯ ಮಧ್ಯಮ ವರ್ಗದ ಕುಟುಂಬದ ಜ್ಯೋತಿ ಮಹಾಬಳೇಶ್ವರ ಗೂಳಪ್ಪನವರ (25) ಅವರು ಬೆಳಗಾವಿಯ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಮುಗಿಸಿದ್ದಾರೆ. ಐಪಿಎಸ್‌, ಐಎಎಸ್‌ ಅಧಿಕಾರಿಯಾಗುವ ಕನಸು ಹೊಂದಿದ್ದ ಜ್ಯೋತಿಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಪೊಲೀಸ್‌ ಇಲಾಖೆಯಲ್ಲಿ ಹಿರಿಯ, ಕಿರಿಯ ಬೋಧಕ (ಇನ್‌ಸ್ಟ್ರಕ್ಟರ್‌) ಹುದ್ದೆ ಅರಸಿ ಬಂದಿದ್ದವು.

ಸರಕಾರ ನಡೆಸುವ ಐಎಎಸ್‌, ಕೆಎಎಸ್‌ ಉಚಿತ ತರಬೇತಿಗೂ ಆಯ್ಕೆಯಾಗಿದ್ದರು. ಈ ನಡುವೆ ಪಿಎಸ್‌ಐ ಹುದ್ದೆಗೆ ಆದೇಶ ಪತ್ರ ಸಿಕ್ಕಿದ್ದು, ಅವರು ಸೆ. 21ರಂದು ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಪ್ರೊಬೆಷನರಿ ಹುದ್ದೆಗೆ ಸೇರ್ಪಡೆಯಾಗಲಿದ್ದಾರೆ.

ವಾರಿಯರ್ ಕಾರ್ಯ ಶ್ಲಾಘನೀಯ
ಜಮಖಂಡಿ: ಕೊರೊನಾ ಯೋಧರಾಗಿ, ವಾರಿಯರ್ಗಳಾಗಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಆಶಾ ಕಾರ್ಯಕರ್ತೆಯರು ಜೀವನ ಹಂಗು ತೊರೆದು ಹಗಲಿರಳು ಶ್ರಮಿಸಿದ್ದಾರೆ ಎಂದು ಟಿಎಪಿಎಂಸ್‌ ಸೊಸೈಟಿ ಅಧ್ಯಕ್ಷ ಯೋಗಪ್ಪ ಸವದಿ ಹೇಳಿದರು.

ನಗರದ ಟಿಎಪಿಎಂಸ್‌ ಸೊಸೈಟಿ ಸಭಾಭವನದಲ್ಲಿ ಕೊರೊನಾ ವಾರಿಯರ್ ಹಾಗೂ ಆಶಾ ಕಾರ್ಯಕರ್ತಯರಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸನ್ಮಾನ
ಸಮಾರಂಭದಲ್ಲಿ ಅವರು ಮಾತನಾಡಿದರು. ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ 35 ಆಶಾ ಕಾರ್ಯಕರ್ತೆಯರಿಗೆ ತಲಾ ಒಬ್ಬರಿಗೆ 3 ಸಾವಿರ ರೂ. ಪ್ರೋತ್ಸಾಹ ಧನವನ್ನು ಟಿಎಪಿಎಂಸ್‌ ಸೊಸೈಟಿ ವಿತರಿಸಿದೆ ಎಂದರು.

Advertisement

ಉಪಾಧ್ಯಕ್ಷ ಅಮೃತಾ ದಾನಗೌಡ, ನಿರ್ದೇಶಕರಾದ ಬಿ.ಎಸ್‌.ಸಿಂಧೂರ, ಟಿ.ಎ.ಬಿರಾದಾರ, ಜಿ.ಎಲ್‌. ಮೋಪಗಾರ, ಎಂ.ಜಿ.ಹಟ್ಟಿ, ಎನ್‌.ಎನ್‌.ಕಡಪಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next