ಅಂತಾರಾಷ್ಟ್ರೀಯ ಕ್ರಿಕಟ್ ನಲ್ಲಿ ಶನಿವಾರ ಅಘ್ಗಾನಿಸ್ತಾನದ ಆಟಗಾರರು ಹೊಸ ದಾಖಲೆಯನ್ನು ಮಾಡಿ ಸುದ್ದಿಯಾಗಿದ್ದಾರೆ.
ಶನಿವಾರ ರಾತ್ರಿ ಬಾಂಗ್ಲಾದೇಶದ ಶೇರ್-ಎ-ಬಾಂಗ್ಲಾ ಅಂಕಣದಲ್ಲಿ ನಡೆದ ಅಫ್ಗಾನಿಸ್ತಾನ ಹಾಗೂ ಜಿಂಬಾಬ್ಬೆ ನಡುವಿನ ದ್ವಿತೀಯ ಟ್ವಿ-ಟ್ವಿಂಟಿ ಪಂದ್ಯದಲ್ಲಿ ಅಘ್ಗಾನಿಸ್ತಾನದ ಮೊಹಮ್ಮದ್ ನಬಿ ಮತ್ತು ನಜಿಬುಲ್ಲಾ ಜೋರ್ಡಾನ್ 7 ಎಸೆತಗಳಲ್ಲಿ ಏಳು ಸಿಕ್ಸರ್ ಬಾರಿಸಿದ ದಾಖಲೆಯನ್ನು ಮಾಡಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಜಿಂಬಾಬ್ಬೆ ಆಟಗಾರರ ಎಸೆತಗಳಿಗೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಅಘ್ಗಾನ್ ಆಟಗಾರರು 20 ಓವರ್ ಗಳಲ್ಲಿ 197 ರನ್ ಗಳನ್ನು ದಾಖಲಿಸಿತ್ತು. ಈ ವೇಳೆಯಲ್ಲಿ ಅಘ್ಗಾನ್ ಪಡೆಯಲ್ಲಿ ಜೊತೆಯಾಟ ನಡೆಸಿದ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜೋರ್ಡಾನ್ 17ನೇ ಓವರ್ ಮಾಡಿದ ಟೆಂಡೈ ಚಾಟರ ಬೌಲಿಂಗ್ ನಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ್ದರು. ಓವರ್ ಮುಕ್ತಾಯದ ಬಳಿಕ ಕ್ರಿಸ್ ಗೆ ಬಂದ ನಜಿಬುಲ್ಲಾ ಸಹ ನೆವಿಲ್ಲೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಸತತ 7 ಎಸತೆಗಳಲ್ಲಿ ಏಳು ಸಿಕ್ಸರ್ ಬಾರಿಸಿದ ನೂತನ ದಾಖಲೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಚ್ಚಾಗಿಸಿದರು.
ಈ ಪಂದ್ಯದಲ್ಲಿ ಅಘ್ಗಾನಿಸ್ಥಾನ 28 ರನ್ ಗಳ ಅಂತರದಿಂದ ಗೆಲುವು ದಾಖಲಿಸಿತ್ತು. ಅಂದಹಾಗೆ ಇದು ತ್ರಿಕೋನ ಸರಣಿಯಾಗಿದ್ದು ಅಘ್ಗಾನಿಸ್ಥಾನ,ಜಿಂಬಾಬ್ಬೆಯ ಜೊತೆ ಬಾಂಗ್ಲಾದೇಶವೂ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.