ನವದೆಹಲಿ: ಶವಾಗಾರ ಮತ್ತು ಸ್ಮಶಾನದ ಬಳಿ ಶವಗಳ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಉತ್ತರಪ್ರದೇಶದ ಬಾಗ್ ಪತ್ ನಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶವಾಗಾರ ಮತ್ತು ಸ್ಮಶಾನದಲ್ಲಿ ಶವಗಳ ಮೈಮೇಲಿದ್ದ ಬಟ್ಟೆಗಳನ್ನು ಕಳವು ಮಾಡಲು ಸ್ಥಳೀಯ ಬಟ್ಟೆ ಮರ್ಚಂಟ್ ಮತ್ತು ಆತನ ಸಂಗಡಿಗರು ಈ ಕೃತ್ಯ ಎಸಗುತ್ತಿದ್ದರು ಎಂದು ನೀಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಸರಣಿ: ವಿರಾಟ್, ರೋಹಿತ್, ಬುಮ್ರಾ ಸೇರಿ ಸೀನಿಯರ್ಸ್ ಗೆ ಇಲ್ಲ ಅವಕಾಶ!
ಶವಗಳ ಮೈಮೇಲಿದ್ದ ಬಟ್ಟೆಗಳನ್ನು ಕದ್ದು ತಂದ ನಂತರ ಮಾರುಕಟ್ಟೆಯಲ್ಲಿ ಅದಕ್ಕೆ ಕಂಪನಿಯ ಟ್ರೇಡ್ ಮಾರ್ಕ್ ಹಾಕಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಈ ಬಟ್ಟೆ ಕಳವು ಮಾಡುವ ಕೃತ್ಯ ನಡೆಸುತ್ತಿದ್ದು, ಇದಕ್ಕೆ ಬಟ್ಟೆ ವ್ಯಾಪಾರಿ ದಿನಂಪ್ರತಿ 300 ರೂಪಾಯಿ ಸಂಬಳ ನೀಡುತ್ತಿದ್ದ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಬಾರೌತ್ ಅಲೋಕ್ ಸಿಂಗ್ ತಿಳಿಸಿದ್ದಾರೆ.
ಬಂಧಿತ ಏಳು ಮಂದಿಯಲ್ಲಿ ಮೂವರು ಒಂದೇ ಕುಟುಂಬದವರು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆರೆಹಿಡಿಯಲ್ಪಟ್ಟ ಏಳೂ ಜನರ ವಿರುದ್ಧ ಕಳ್ಳತನ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉತ್ತರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 12,54,045ಕ್ಕೆ ಏರಿಯಾಗಿದ್ದು, ಕೋವಿಡ್ ತಡೆಗಾಗಿ ಮೇ 17ರವರೆಗೆ ಲಾಕ್ ಡೌನ್ ಅನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.