Advertisement

ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ ಹೆಸರಿಡಿ

03:29 PM Nov 26, 2019 | Suhan S |

ಕೊಪ್ಪಳ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್‌ ಮಹಾರಾಜರ ಹೆಸರು ನಾಮಕರಣ ಮಾಡಬೇಕೆಂದು ತಾಲೂಕಿನ ಬಂಜಾರ ಸಮುದಾಯ ಆಲ್‌ ಇಂಡಿಯಾ ಬಂಜಾರ್‌ ಸೇವಾ ಸಂಘವು ತಹಶೀಲ್ದಾರ್‌ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿತು.ತಾಲೂಕ ಅಧ್ಯಕ್ಷ ಪಂಪಣ್ಣ ಪೂಜಾರ ಮತ್ತು ತಾಪಂ ಸದಸ್ಯ ಚಂದ್ರಕಾಂತ ನಾಯ್ಕನೇತೃತ್ವದಲ್ಲಿ ನಗರದ ತಹಶೀಲ್ದಾರ್‌ ಕಚೇರಿಗೆ ತೆರಳಿ ತಹಶೀಲ್ದಾರ್‌ ಜಿ.ಬಿ. ಮಜ್ಜಿಗೆ ಅವರಿಗೆ ಮನವಿಸಲ್ಲಿಸಲಾಯಿತು.

Advertisement

ಈ ವೇಳೆ ಪಂಪಣ್ಣ ಪೂಜಾರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆಗೆ ಬಂಜಾರ ಸಮುದಾಯದ ಎರಡು ತಾಂಡಾಗಳನ್ನು ಸರಕಾರ ವಶಪಡಿಸಿಕೊಂಡಿದೆ. 600ಕ್ಕೂ ಅ ಧಿಕ ಮನೆಗಳನ್ನು ನೆಲಸಮಮಾಡಿದ್ದಾರೆ. 769 ಎಕರೆ ಜಮೀನುಗಳನ್ನು ನಮ್ಮ ಬಂಜಾರ ಸಮಾಜ ಬಾಂಧವರು ಕಳೆದುಕೊಂಡಿರುತ್ತಾರೆ. ಮತ್ತು ಸಂತ ಶ್ರೀ ಸೇವಾಲಾಲ್‌ ಮತ್ತು ಶ್ರೀ ಮರಿಯಮ್ಮ ದೇವಸ್ಥಾನಗಳನ್ನು ನೆಲಸಮ ಮಾಡಿದ್ದಾರೆ. ಮನೆ ಮತ್ತು ಜಮೀನುಕಳೆದುಕೊಂಡಿರುವ ನಮ್ಮ ಬಂಜಾರ ಸಮಾಜದವರಿಗೆ ಯಾವುದೇ ರೀತಿಯಉದ್ಯೋಗ ಮತ್ತು ಪರಿಹಾರ ಕೊಟ್ಟಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್‌ ಹೆಸರಿಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್‌ ಹೆಸರಿಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಮೇಶ ಪೂಜಾರ, ರಮೇಶ, ಶರಣಪ್ಪ ಪೂಜಾರ ತುಕಾರಾಮ ನಾಯ್ಕ, ನಾಗರಾಜ ಅಬ್ಬಿಗೇರಿ, ಪರಶುರಾಮನಾಯ್ಕ ಹೊಸಳ್ಳಿ, ನಾಗರಾಜ ಕಲಕೇರಿ, ಶಂಕರ ಗಿಣಿಗೇರಿ, ಶರಣು ಕಾರಬಾರಿ, ಶಂಕರ ನಾಯ್ಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next