Advertisement
ಬಿಜೆಪಿಯು ವಾರಾಣಸಿಯ ಭಾರತ್ ಮಾತಾ ದೇಗುಲದಲ್ಲಿ 71 ಸಹಸ್ರ ದೀಪಗಳನ್ನು ಬೆಳಗಿಸಲಿದೆ ಮತ್ತು ವಿವಿಧೆಡೆ ಒಟ್ಟು 14 ಕೋಟಿ ಪಡಿತರ ಚೀಲಗಳನ್ನು ವಿತರಿಸಲಿದೆ. ದೇಶಾದ್ಯಂತದ ಅಂಚೆ ಕಚೇರಿಗಳಿಂದ ಮೋದಿ ಚಿತ್ರವಿರುವ 5 ಕೋಟಿ ಪೋಸ್ಟ್ ಕಾರ್ಡ್‌ಗಳನ್ನು ಪ್ರಧಾನಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
Related Articles
Advertisement
ಕರ್ನಾಟಕದಲ್ಲಿ ಶುಕ್ರವಾರ 30 ಲಕ್ಷ ಮಂದಿಗೆ ಕೊರೊನಾ ಮುನ್ನೆ ಚ್ಚರಿಕೆಯೊಂದಿಗೆ ಲಸಿಕೆ ವಿತರಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
ನವಭಾರತ ಮೇಳ :
- ಸೆ. 17ರಿಂದ ಅ. 7ರ ವರೆಗೆ 20 ದಿನಗಳ ಕಾಲ “ಸೇವೆ ಮತ್ತು ಸಮರ್ಪಣೆ ಅಭಿಯಾನ’.
- ದೇಶಾದ್ಯಂತ “ನವ ಭಾರತ ಮೇಳ’ ಆಯೋಜನೆ. 7 ವರ್ಷಗಳಲ್ಲಿ ಮೋದಿ ಸರಕಾರ ಮಾಡಿದ ಸಾಧನೆಯನ್ನು ಜನರಿಗೆ ವಿವರಿಸುವ ಯತ್ನ.
- ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ ಮತ್ತು ರಸಪ್ರಶ್ನೆಗಳ ಆಯೋಜನೆ.
- ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳ ಫಲಾನುಭವಿ ಗಳಾಗಲು ಇಚ್ಛಿಸುವವರ ನೋಂದಣಿಗೆ ಕೇಂದ್ರಗಳ ಸ್ಥಾಪನೆ.
- ಜನರು ನಮೋ ಆ್ಯಪ್ ಡೌನ್‌ಲೋಡ್ ಮಾಡಿ ಕೊಳ್ಳುವಂತೆ ಪ್ರೇರಣೆ ನೀಡಲು ವಿಶೇಷ ಕೇಂದ್ರ.
- ಅ. 2ರಂದು “ಸ್ವತ್ಛತಾ ಸೇ ಸಮ್ಮಾನ್’ ಅಭಿಯಾನ ಆಯೋಜನೆ. ಸ್ವತ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ.
- ಸೆ. 17- ಅ. 7: ಸೇವೆ ಮತ್ತು ಸಮರ್ಪಣೆ ಅಭಿಯಾನ.
- ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಉಚಿತ ಆರೋಗ್ಯ ತಪಾಸಣ ಶಿಬಿರಗಳು.
- ಅಂಗವಿಕಲರಿಗೆ ನೆರವು.
- ಅ. 2ರಂದು ಸ್ವದೇಶಿ ವಸ್ತು ಖರೀದಿ ಅಭಿಯಾನ.
- ಮೋದಿಯವರಿಗೆ ಶುಭ ಹಾರೈಸಿ, ಅವರ ಕೊಡುಗೆಗಳಿಗೆ ಧನ್ಯವಾದ ಸಲ್ಲಿಸಿ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಜನರೇ ಬರೆಯುವಂತೆ ಪ್ರೇರೇಪಿಸುವುದು.
- ಪ್ರತೀ ಬೂತ್‌ನಿಂದ 10 ಅಂಚೆ ಕಾರ್ಡ್ ಬರೆಯುವ ಗುರಿ.