Advertisement
ಟ್ಯಾಕ್ಸಿಕ್ಯಾಬ್ ಬಾಡಿಗೆ ನಡೆಸುತ್ತಿದ್ದ ಈತ ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ಬಿಡುವ ಕೆಲಸ ಮಾಡುತ್ತಿದ್ದನು. 2020ರ ಎ.18ರಂದು ಈತ ನೊಂದ ಬಾಲಕಿಯ ಸಂಬಂಧಿಕರ ಮನೆಗೆ ಶುಭ ಸಮಾರಂಭಕ್ಕೆ ತನ್ನ ಕ್ಯಾಬ್‌ನೊಂದಿಗೆ ಬಾಡಿಗೆಗೆ ಬಂದಿದ್ದ. ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದ್ದ. ಅನಂತರ ಆಕೆಯನ್ನು ಹೆದರಿಸಿ ಸಂತೆಕಟ್ಟೆ -ಪೆರ್ಡೂರು ರಸ್ತೆ ಬದಿಯಲ್ಲಿ ತನ್ನ ವಾಹನದಲ್ಲಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಅನಂತರ ಆಕೆ ಶಾಲೆಗೆ ಹೋಗುತ್ತಿರುವಾಗ ತನ್ನ ಕ್ಯಾಬ್ ನಲ್ಲಿ ಕರೆದೊಯ್ದು ಬಾರಕೂರು-ಹಾಲಾಡಿ ರಸ್ತೆ ಬದಿ ಮತ್ತು ಆಲ್ತಾರು ಕ್ರಾಸ್ ಬಳಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದ.
ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 28 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಪ್ರಾಸಿಕ್ಯೂಶನ್ ಪರ ಉಡುಪಿ ಪೋಕ್ಸೋ ನ್ಯಾಯಾಲಯ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.