ಬಾಗೇಪಲ್ಲಿ: ನ.12ರಂದು ನಡೆಯುಲಿರುವ ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡು ನ್ಯಾಯಾಲಯದ ಮೇಲಿರುವ ಒತ್ತಡ ಕಡಿಮೆ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎಚ್. ಲಾವಣ್ಯಾ ತಿಳಿಸಿದರು.
ಪಟ್ಟಣದ ಕೋರ್ಟ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ನ್ಯಾಯಾಲಯ ಗಳಲ್ಲಿ ಪ್ರಕರಣಗಳು ದಾಖಲು ಮಾಡಿಕೊಂಡು ಸಮಯ, ಹಣ ವ್ಯರ್ಥ ಮಾಡಿಕೊಂಡು ಅಲೆಯವು ದನ್ನು ತಪ್ಪಿಸಲು ಅದಾಲತ್‌ನಲ್ಲಿ ನಿಮ್ಮ ವಕೀಲರ ಮೂಲಕ ರಾಜಿ ಸಂಧಾನ ಮಾಡಿಕೊಳ್ಳಬಹುದೆಂದರು.
ಕಡಿಮೆ ಖರ್ಚಿನಲ್ಲಿ ನ್ಯಾಯ: ಲೋಕ ಅದಾಲತ್‌ನಲ್ಲಿ ರಾಜಿಯಾದಂತಹ ಪ್ರಕರಣಗಳು ನ್ಯಾಯಾ ಲಯದಲ್ಲಿ ಇತ್ಯರ್ಥವಾದ ಪ್ರಕರಣಗಳಂತೆ ಇರುತ್ತದೆ. ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳ ಬಹುದು. ಇದರಿಂದ ಸಮ ಯವು ಉಳಿಯುತ್ತದೆ. ಕಕ್ಷಿದಾರರ ಸಂಬಂಧವು ಕೆಡು ವುದಿಲ್ಲ, ನ್ಯಾಯಾಲಯಕ್ಕೆ ಶುಲ್ಕ ಪಾವತಿಸ ಬೇಕಾಗಿಲ್ಲ ಎಂದು ಸಲಹೆ ನೀಡಿದರು. ನೆಮ್ಮದಿ ಜೀವನ ನಡೆಸಬಹುದು: ಅದಾಲತ್‌ನಲ್ಲಿ ಕಕ್ಷಿದಾರರು ನೇರವಾಗಿ ಭಾಗವಹಿಸ ಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ರಾಜಿಯಾದರೆ ಶೇ.100ರಷ್ಟು ಶುಲ್ಕ ಹಿಂದಿರುಗಿ ಲಾಗುವುದು. ಈ ಅವಕಾಶವನ್ನು ಕಕ್ಷಿದಾರರು ಸದ್ಬಳಕೆ ಮಾಡಿಕೊಂಡು, ಪ್ರಕರಣಗಳನ್ನು ರಾಜಿಯಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.
ಕೋರ್ಟ್‌ಗೆ ಅಲೆಯುವುದು ತಪ್ಪುತ್ತದೆ: ಪ್ರಥಮ ದರ್ಜೆ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ ಮಾತನಾಡಿ, ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ವ್ಯಾಜ್ಯಗಳನ್ನು ದಾಖಲು ಮಾಡಿಕೊಂಡು ಅನಗತ್ಯವಾಗಿ ಹಣ, ಸಮಯ ವ್ಯರ್ಥ ಮಾಡಿಕೊಂಡು ಕಕ್ಷಿದಾರರು ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಲೋಕ ಅದಾಲತ್ ಕಾರ್ಯಕ್ರಮ ಜಾರಿಗೆ ತಂದಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳ ಬೇಕಾಗಿದೆ ಎಂದು ವಿವರಿಸಿದರು.
ಸಮಯ ಉಳಿಸಿ: ನ್ಯಾಯಾಲಯದಲ್ಲಿ ದಾವೆ ಹಾಕಿದ ವರು ದೂರದ ಊರುಗಳಿಂದ ಸಮಯ, ಹಣ ಖರ್ಚು ಮಾಡಿಕೊಂಡು ಬಂದು ಒಂದು ದಿನ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಕಕ್ಷಿದಾರರು ಇಂತಹವುಗಳಿಗೆ ಅವಕಾಶ ನೀಡದೆ, ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ನಿಮ್ಮ ಪ್ರಕರಣಗಳನ್ನು ಸುಖಾಂತ್ಯವಾಗಿ ಇತ್ಯರ್ಥಪಡಿ ಸಿಕೊಳ್ಳಿ ಎಂದು ಸಲಹೆ ನೀಡಿದರು.
ಬಿಇಒ ಎಸ್. ಸಿದ್ದಪ್ಪ, ಎಎಸ್‌ಐ ನಾರಾಯಣ ಸ್ವಾಮಿ, ಕಂದಾಯ ಇಲಾಖೆಯ ಹರೀಶ್, ರಸ್ತೆಸಾರಿಗೆ ಸಂಸ್ಥೆ ವ್ಯವಸ್ಥಾಪಕ ಮನ್ಮಥನ್, ವಕೀಲರಾದ ನಂಜುಂಡಪ್ಪ, ಜೆ.ಎನ್. ನಂಜಪ್ಪ, ವೆಂಕಟೇಶ್, ಅಪ್ಪಸ್ವಾಮಿ, ಸತ್ಯನಾರಾಯಣ ರಾವ್, ಅರುಣ, ಬಾಲು, ನಾಗಭೂಷಣ ಇದ್ದರು.