Advertisement

Disabled: ಅಂಗವಿಕಲರಿಗೆ ಅಗ್ಗದ ಬೆಲೆಯಲ್ಲಿ ವಿಶೇಷ ಸಾಧನ ಒದಗಿಸಲು 100 ಕೇಂದ್ರಗಳ ಸ್ಥಾಪನೆ?

01:24 AM Jan 11, 2024 | Team Udayavani |

ಪಣಜಿ: ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಕೈಗೆಟಕುವ ಬೆಲೆಯಲ್ಲಿ ವಿಶೇಷ ಸಾಧನಗಳನ್ನು ಒದಗಿಸಲು ಜೂನ್‌ ವೇಳೆಗೆ ದೇಶಾದ್ಯಂತ 100 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರದ(ಪಿಎಂಡಿಕೆ) ಅಡಿಯಲ್ಲಿ ಜೂನ್‌ ವೇಳೆಗೆ ಈ ಕೇಂದ್ರಗಳನ್ನು 100ಕ್ಕೆ ಏರಿಸಲಾಗುವುದು.

Advertisement

ಪಿಎಂಡಿಕೆ, ಆರ್ಟಿಫಿಶಿಯಲ್‌ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್‌ ಕಾರ್ಪೊರೇಶನ್‌ ಆಫ್ ಇಂಡಿಯಾದ ಉಪಕ್ರಮವಾಗಿದೆ. ಇದು ಪ್ರೋಸ್ಥೆಸಿಸ್‌ ಮತ್ತು ಆರ್ಥೋಸಿಸ್‌ ಫಿಟ್ಮೆಂಟ್‌, ಆಡಿಯೊಮೆಟ್ರಿ ಮೌಲ್ಯಮಾಪನ ಹಾಗೂ ಸಾಧನಗಳ ಮಾರಾಟ ಸೇವೆಗಳನ್ನು ಒದಗಿಸುತ್ತದೆ’ ಎಂದು ಅಂಗವಿಕಲರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರಾಜೇಶ್‌ ಅಗರ್‌ವಾಲ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next