Advertisement
ಸೋಮವಾರ ಬಿಬಿಎಂಪಿ ಸಭೆಯಲ್ಲಿ ಪಕ್ಷಾತೀತವಾಗಿ ಪಾಲಿಕೆಯ ಎಲ್ಲ ಸದಸ್ಯರು ಒಎಫ್ಸಿಯಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳು ಹಾಗೂ ಪಾಲಿಕೆಗೆ ಆಗುತ್ತಿರುವ ನಷ್ಟದ ಕುರಿತು ವಿಷಯ ಮಂಡಿಸಿದರು. ಆ ಹಿನ್ನೆಲೆಯಲ್ಲಿ ಒಎಫ್ಸಿ ವಿಭಾಗದಿಂದ ಪಾಲಿಕೆಗೆ ಬರಬೇಕಾದ ಆದಾಯ ಸಂಗ್ರಹಿಸಲು ಆಡಳಿತ ಪಕ್ಷ ನಾಯಕ ಸಮ್ಮುಖದಲ್ಲಿ ಸಮಿತಿ ರಚಿಸುವುದಾಗಿ ಮೇಯರ್ ಸಂಪತ್‌ರಾಜ್ ತಿಳಿಸಿದರು.
Related Articles
ಮುಂದಾಗಬೇಕು ಎಂದು ಒತ್ತಾಯಿಸಿದರು.
Advertisement
“ಏರೋ ಇಂಡಿಯಾ’ ಸ್ಥಳಾಂತರಿಸದಂತೆ ನಿರ್ಣಯ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಸಿಕೊಂಡು ಬಂದಿರುವ “ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಲಖೊ°àಗೆ ಸ್ಥಳಾಂತರಿಸದಂತೆ ಪ್ರಧಾನ ಮಂತ್ರಿಗಳು ಹಾಗೂ ರಕ್ಷಣಾ ಸಚಿವರನ್ನು ಕೋರುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ಮೇಯರ್ ಸಂಪತ್‌ರಾಜ್, ಪ್ರತಿಷ್ಠಿನ ಏರೋ ಇಂಡಿಯಾ ಬೆಂಗಳೂರಿನ ಹೆಮ್ಮೆಯಾಗಿದೆ. ಬೇರೆಡೆಗೆ ಸ್ಥಳಾಂತರ ಮಾಡದಂತೆ ನಿಮ್ಮ ಸಂಸದರಲ್ಲಿ ಮನವಿ ಮಾಡುವಂತೆ ಬಿಜೆಪಿ ಪಾಲಿಕೆ ಸದಸ್ಯರನ್ನು ಕೋರಿದರು. ಜತೆಗೆ ಈ ಕುರಿತಂತೆ ಪಾಲಿಕೆಯಿಂದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು. ನಿರ್ಣಯ ಕೈಗೊಂಡ ನಂತರ ಮಾತನಾಡಿದ ಪದ್ಮನಾಭರೆಡ್ಡಿ, ಏರೋ ಇಂಡಿಯಾ ಸ್ಥಳಾಂತರಿಸದಂತೆ ನಿಮ್ಮ ಪಕ್ಷದ ನಾಯಕರು ಆರೋಪಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ನೀವು ನಿರ್ಣಯ ಕೈಗೊಂಡಿದ್ದು, ಇದೊಂದು ರಾಜಕೀಯ ಪ್ರೇರಿತ ನಿರ್ಣಯವಾಗಿದೆ ಎಂದು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಹಾಗಾದರೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆಯಲು ಬಿಜೆಪಿಯ ಸಹಮತವಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ಅದಕ್ಕೆ ದನಿಗೂಡಿಸಿದ ಮೇಯರ್, ಬಿಜೆಪಿ ಪಾಲಿಕೆ ಸದಸ್ಯರು ಎದ್ದು ನಿಂತು ಬೆಂಗಳೂರಿನಲ್ಲಿಯೇ ಏರೋ ಇಂಡಿಯಾ ನಡೆಸಬೇಕೆಂದು ಒತ್ತಾಯಿಸಬಹುದು ಎಂದು ಭಾವಿಸಿದ್ದೆ. ಆದರೆ, ನೀವು ನಿರ್ಣಯವನ್ನು ರಾಜಕೀಯ ಪ್ರೇರಿತ ಎನ್ನುತ್ತಿದ್ದೀರಾ ಎಂದು ಮಾರ್ಮಿಕವಾಗಿ ಟಾಂಗ್ ನೀಡಿದರು.
ಇನ್ಸುಲೇಟರ್ ಅಳವಡಿಸಿ: ಪಾಲಿಕೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ಎನ್ಸುಲೇಟರ್ ಗಳನ್ನು ಅಳವಡಿಸಲು ಆದ್ಯತೆಯ ಮೇಲೆ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ದ್ವಾರಕನಾಥ್ ಒತ್ತಾಯಿಸಿದರು. ದಾಖಲೆ ಸಭೆಗಳನ್ನು ನಡೆಸಿದ್ದೀರಾ: ಪ್ರತಿ ತಿಂಗಳು ಚುಕ್ಕೆ ಗುರುತಿನ ಪ್ರಶ್ನೆ ನಡೆಸಿದ್ದರೆ ಅಧಿಕಾರಿಗಳು ನಿಮ್ಮ ಹಿಡಿತದಲ್ಲಿರುತ್ತಿದ್ದರು ಎಂಬ ಪದ್ಮನಾಭರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೇಯರ್, ನಾಲ್ಕು ತಿಂಗಳು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಇನ್ನೆರಡು ತಿಂಗಳು
ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸಿದವು ಎಂದರು. ಈ ವೇಳೆ ಮಾತನಾಡಿದ ಉಮೇಶ್ ಶೆಟ್ಟಿ, ಆದರೂ ಪಾಲಿಕೆಯಲ್ಲಿ ಹೆಚ್ಚಿನ ಸಭೆ ನಡೆಸಿದ ಎಂಬ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದೀರಾಲ್ವಾ ಎಂದು ಕಿಚಾಯಿಸಿದರು. ಸಂತಾಪ ಸೂಚನೆ: ಪಾಲಿಕೆ ಸಭೆಯ ಆರಂಭದಲ್ಲಿಯೇ ಇತ್ತೀಚೆಗೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು. ಹೇಳಿಕೆ ಬದಲಿಸಿದ ಮೇಯರ್
ಬೆಂಗಳೂರು: ಗಣೇಶ ಹಬ್ಬದಂದು ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಗೆ ಶುಲ್ಕ ಪಾವತಿಸಬೇಕು ಎಂದು ಸೋಮವಾರ ಬೆಳಗ್ಗೆ ಹೇಳಿಕೆ ನೀಡಿದ್ದ ಮೇಯರ್ ಸಂಪತ್‌ರಾಜ್ ವಿವಿಧ ಸಂಘಗಳು ಹಾಗೂ ಬಿಬಿಎಂಪಿ ಸದಸ್ಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಈ ಬಾರಿ ಗಣೇಶ ಮೂರ್ತಿಪ್ರತಿಷ್ಠಾಪನೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯುವ ವೇಳೆ ಮೂರ್ತಿ ಇಡುವ ವಿಸ್ತೀರ್ಣದ ಪ್ರತಿ ಚದರ ಅಡಿಗೆ 10 ರೂ. ಶುಲ್ಕ ಪಾವತಿಸಬೇಕು ಎಂದಿದ್ದರು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ನಂತರ ದೊಡ್ಡ ಮಟ್ಟದಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಶುಲ್ಕ ಪಡೆಯುತ್ತೇವೆ ಎಂದು ಬದಲಿ ಹೇಳಿಕೆ ನೀಡಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶುಲ್ಕ ವಿಧಿಸಲಾಗುವುದು ಎಂಬ ಮೇಯರ್ ಹೇಳಿಕೆಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದು, ಮೇಯರ್ ಸಂಪತ್‌ರಾಜ್ ಹಿಂದೂ ವಿರೋಧಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಪಾಲಿಕೆ ಬಜೆಟ್‌ನಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ. ಇದೀಗ ಗಣೇಶ ಮೂರ್ತಿ ಪ್ರತಿಷ್ಠಾನಪನೆಗೆ ಶುಲ್ಕ ವಿಧಿಸುವ ಮೂಲಕ ತಾವೊಬ್ಬ ಹಿಂದು ಧರ್ಮ ವಿರೋಧಿ ಎಂಬುದನ್ನು ಸಾಬೀತು ಪಡೆಸುತ್ತಿದ್ದಾರೆ ಎಂದು ದೂರಿದರು. ಇನ್ನು ಮೇಯರ್ ಹೇಳಿಕೆ ವಿರೋಧಿಸಿ ಮಂಗಳವಾರ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ಪಾಲಿಕೆ ಎದುರು ಧರಣಿ ನಡೆಸುತ್ತೇನೆ: ಸಚಿವರು ಹಾಗೂ ಹಿರಿಯ ಅಧಿಕಾರಿಗಳು 15 ದಿನಗಳಲ್ಲಿ ಮಾಹಿತಿ ನೀಡಿದಂತಹ ಸಂಸ್ಥೆಗಳು ಅಳವಡಿಸಿರುವ ಕೇಬಲ್ ತೆರವುಗೊಳಿಸವಂತೆ ಸೂಚಿಸಿದ್ದಾರೆ. ಆದರೆ, ಏಜೆನ್ಸಿಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ಈವರೆಗೆ ತೆರವು ಕಾರ್ಯಾಚರಣೆ
ನಡೆಸದಿರುವುದು “ಹಣಕಾಸು ಅಪರಾಧ’ವಾಗಿದೆ. ಹೀಗಾಗಿ ಒಎಫ್ಸಿ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಮುಂದಿನ 15 ದಿನಗಳಲ್ಲಿ ಕ್ರಮಕ್ಕೆ ಮುಂದಾಗದಿದ್ದರೆ ಪಾಲಿಕೆ ಕಟ್ಟಡದ ಎದುರು ಧರಣಿ ನಡೆಸಲಾಗುವುದು ಎಂದು ಗುಣಶೇಖರ್ ಎಚ್ಚರಿಕೆ ನೀಡಿದರು. ಅದಕ್ಕೆ ಸ್ಪಂದಿಸಿದ ಮೇಯರ್, ಆಡಳಿತ ಪಕ್ಷದ ನಾಯಕರ ನೇತೃತ್ವದಲ್ಲಿ ಎಲ್ಲ ಪಕ್ಷಗಳ ಹಿರಿಯ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಸಮಿತಿಯು ಒಎಫ್ಸಿಯಿಂದ ಆಗುತ್ತಿರುವ ನಷ್ಟ ಹಾಗೂ ಪರಿಹಾರ ಕ್ರಮಗಳ ಕುರಿತು ನೀಡುವ ವರದಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಟವರ್‌ಗೆ 5 ಲಕ್ಷ ಶುಲ್ಕ ವಿಧಿಸಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 6,766 ಅಧಿಕೃತ ಮೊಬೈಲ್ ಟವರ್‌ಗಳಿದ್ದು, ಪಾಲಿಕೆಯಿಂದ ಪ್ರತಿ ಟವರ್‌ಗೆ 50 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಹಿಮಾಚಲ ಪ್ರದೇಶದಲ್ಲಿ 2006ರಿಂದಲೇ ಟವರ್ ಅಳವಡಿಕೆಗೆ 20 ಸಾವಿರ ರೂ. ಆರಂಭಿಕ ಶುಲ್ಕ ಹಾಗೂ ಮಾಸಿಕ 10 ಸಾವಿರ ಬಾಡಿಗೆ ಪಡೆಯಲಾಗುತ್ತಿದೆ. ಅದೇ ರೀತಿ 2009-10 ರಿಂದ ದೆಹಲಿಯಲ್ಲಿ 5 ಲಕ್ಷ ರೂ. ಟವರ್ ಅಳವಡಿಕೆ ಶುಲ್ಕ
ಪಡೆಯಲಾಗುತ್ತಿದೆ. ಹೀಗಾಗಿ ದೆಹಲಿ ಮಾದರಿಯಲ್ಲಿ ಪ್ರತಿ ಟವರ್‌ಗೆ 5 ಲಕ್ಷ ರೂ. ನಿಗದಿಪಡಿಸಬೇಕು ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.