Advertisement
ರಾಜ್ಯ ಪಠ್ಯಕ್ರಮದ 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಏಕಕಾಲದಲಿ ಟಿವಿ ಮೂಲಕ ವಿವಿಧ ತರಗತಿ ಗಳನ್ನು ಬೋಧಿ ಸುವ ಸೇತುಬಂಧ ಕಾರ್ಯಕ್ರಮ ಸೋಮವಾರದಿಂದ ಆರಂಭಗೊಂಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕ, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Related Articles
Advertisement
8ರಿಂದ 10ನೇ ತರಗತಿಗಳ ಕಲಿಕೆಯ ನಿರಂತರತೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸೇತು ಬಂಧ ಕಾರ್ಯಕ್ರಮ ಅನುಷ್ಠಾನ ಮಾಡಿದೆ. ಮೊದಲ ದಿನದ ತರಗತಿಗಳು ಸೋಮವಾರ ನಡೆದಿದೆ. ವಿದ್ಯಾರ್ಥಿ ಗಳಿಗೆ ತರಗತಿ ಕೊಠಡಿಯ ಅನುಭವ ಸಿಗದೇ ಇದ್ದರೂ, ಕಲಿಕೆ ಹಾಗೂ ಬೋಧನಾ ವಿಧಾನದ ವಿಶಿಷ್ಟ ಅನುಭವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮಕ್ಕಳು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸರಳ ವಿಧಾನದಲ್ಲೇ ಬೋಧನೆಯಿದೆ. ಪಾಠದ ಮಧ್ಯದಲ್ಲಿ ಏನೇ ಸಂಶಯಗಳು ಎದುರಾ ದರೂ ಅದನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಸಂಬಂಧ ಪಟ್ಟ ಶಾಲೆಯ ಶಿಕ್ಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬಗೆಹರಿಸಿಕೊಳ್ಳುವ ವ್ಯವಸ್ಥೆಯಿದೆ. ಶಿಕ್ಷಕರು ಕೂಡ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ವಿವರಿಸಿದರು.
ಸೇತುಬಂಧ ಕಾರ್ಯಕ್ರಮಕ್ಕೆ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. ದೂರದರ್ಶನದ ಪ್ರಸಾರವಾದ ತರಗತಿಗಳನ್ನು ಮಕ್ಕಳ ಅನುಕೂಲಕ್ಕಾಗಿ ಯೂಟ್ಯೂಬ್ ಚಾನಲ್‌ಗಳಲ್ಲೂ ಅಪ್‌ಲೋಡ್ ಮಾಡಿದ್ದೇವೆ. ಈಗ ಇಂಗ್ಲಿಷ್ ಮಾಧ್ಯಮ ತರಗತಿಗಳ ಬೇಡಿಕೆಯು ಹೆಚ್ಚುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲೂ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಗ್ರಾಮೀಣ ಭಾಗದ ಪ್ರತಿ ವಿದ್ಯಾರ್ಥಿಯನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. –ಎಂ.ಆರ್.ಮಾರುತಿ, ನಿರ್ದೇಶಕ, ಡಿಎಸ್‌ಇಆರ್‌ಟಿ