Advertisement

PM SVANIdhi ಯೋಜನೆ ಅನುಷ್ಠಾನದಲ್ಲಿ ಹಿನ್ನಡೆ: ಬ್ಯಾಂಕುಗಳ ಅಸಡ್ಡೆಗೆ ಡಿಸಿ ಮುಗಿಲನ್‌ ಗರಂ

12:14 AM Aug 20, 2023 | Team Udayavani |

ಮಂಗಳೂರು: ನಗರ ಪ್ರದೇಶಗಳಲ್ಲಿ ಬೀದಿ ಮತ್ತು ತಲೆಹೊರೆ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ನೀಡುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅನುಷ್ಠಾನದಲ್ಲಿ ದ.ಕ. ಜಿಲ್ಲೆಯ ಬ್ಯಾಂಕ್‌ಗಳು ನಿರ್ಲಕ್ಷ್ಯ ತೋರಿರುವ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತೀವ್ರ ಟೀಕೆ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಬಳಿಕ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರಕಾರ ಯೋಜನೆ ರೂಪಿಸಿದರೂ ಇಲ್ಲದ ನಿಬಂಧನೆಗಳನ್ನು ಹಾಕಿ ಸತಾಯಿಸಲಾಗುತ್ತಿದೆ. ಪಕ್ಕದ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ನಾವು ಕೊನೆಯ ಸ್ಥಾನದಲ್ಲಿದ್ದೇವೆ. 10,342 ಅರ್ಜಿಗಳಲ್ಲಿ 4,281 ಬಾಕಿ ಇಟ್ಟಿರುವುದು ಬಡವರ ಯೋಜನೆ ಬಗ್ಗೆ ನಿರ್ಲಕ್ಷ್ಯಕ್ಕೆ ಸಾಕ್ಷಿ, ಇದನ್ನು ಸಹಿಸಲಾಗದು. ಪ್ರತೀ ಬ್ಯಾಂಕಿನವರು ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಿ ಗುರಿ ಸಾಧನೆ ಮಾಡಬೇಕು ಎಂದು ನಿರ್ದೇಶನವಿತ್ತರು.

ಅಕ್ಟೋಬರ್‌ನಲ್ಲಿ ಸಮಾವೇಶ
ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಸಾಲ ಸೌಲಭ್ಯ ವಿತರಿಸುವ ಸಮಾವೇಶವನ್ನು ಅಕ್ಟೋಬರ್‌ ಪ್ರಥಮ ವಾರದಲ್ಲಿ ನಡೆಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದರು.

ಮುದ್ರಾ, ಪ್ರಧಾನಮಂತ್ರಿ ಜನಧನ, ಜೀವನ್‌ ಜ್ಯೋತಿ ವಿಮಾ, ಸುರಕ್ಷಾ ವಿಮಾ, ಅಟಲ್‌ ಪಿಂಚಣಿ ಮತ್ತು ಪಿಎಂ ಸ್ವನಿ ಧಿ, ನೂತನ ವಿಶ್ವಕರ್ಮ ಯೋಜನೆಗಳ ಅನುಷ್ಠಾನದಲ್ಲಿ ಪ್ರತೀ ಬ್ಯಾಂಕ್‌ ಶಾಖೆಗಳು 50ರಂತೆ ಗುರಿ ಸಾ ಧಿಸಬೇಕು. ಸಮಾವೇಶದಲ್ಲಿ 25 ಸಾವಿರ ಮಂದಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದು ನಳಿನ್‌ ಹೇಳಿದರು.

Advertisement

ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಕೆಲವು ಬ್ಯಾಂಕ್‌ಗಳ ಕಳಪೆ ಸಾಧನೆಗೆ ಸಂಸದ ನಳಿನ್‌ ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಕ್‌ಗಳ ಸಿಬಂದಿ ಸಮಸ್ಯೆ ನೀಗಿಸಬೇಕು. ಕನ್ನಡ ಮಾತನಾ
ಡುವ ಸಿಬಂದಿಯನ್ನು ಹೆಚ್ಚು ನೇಮಿಸ ಬೇಕು. ಸೆಪ್ಟಂಬರ್‌ ಅಂತ್ಯದೊಳಗೆ ಗುರಿ ಸಾ ಧಿಸಬೇಕು ಎಂದರು.

ವ್ಯವಹಾರ ಪ್ರಗತಿ
ಜೂನ್‌ ಅಂತ್ಯಕ್ಕೆ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,06,722.18 ಕೋಟಿ ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 12.46ರಷ್ಟು ಪ್ರಗತಿ ಸಾಧಿಸಿವೆ. ಜಿಲ್ಲೆಯಲ್ಲಿ ಒಟ್ಟು 638 ಶಾಖೆಗಳಿದ್ದು, 63,605.80 ಕೋಟಿ ರೂ. ಠೇವಣಿ ಸಂಗ್ರಹಿಸಿ ಶೇ. 8.96 ಪ್ರಗತಿಯಾಗಿದೆ. 43,116.38 ಕೋಟಿ ರೂ. ಸಾಲ ನೀಡಿ ಶೇ. 18.05 ಪ್ರಗತಿಯಾಗಿದೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ ತಿಳಿಸಿದರು.

ಜಿ.ಪಂ. ಸಿಇಒ ಡಾ| ಆನಂದ ಕೆ. ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಭಾರತೀಯ ರಿಸರ್ವ್‌ ಬ್ಯಾಂಕ್‌ ಮ್ಯಾನೇಜರ್‌ ತನು ನಂಜಪ್ಪ, ನಬಾರ್ಡ್‌ ಉಪ ವಿಭಾಗೀಯ ಪ್ರಬಂಧಕಿ ಸಂಗೀತಾ ಎಸ್‌. ಕರ್ತಾ ಪಾಲ್ಗೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next