Advertisement

ತಡವಾದ ಮುಂಗಾರು ಭತ್ತ ಕೃಷಿಗೆ ಹಿನ್ನಡೆ

12:26 AM Jun 23, 2019 | mahesh |

ಈ ವರ್ಷ ವಾಡಿಕೆಯಂತೆ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಪ್ರವೇಶಿಸದ ಕಾರಣ ಮುಖ್ಯವಾಗಿ ಭತ್ತದ ಕೃಷಿ ನಿಧಾನಗೊಂಡಿದೆ. ಜೂನ್‌ ತಿಂಗಳ ಮೊದಲ ವಾರದಲ್ಲೇ ಮುಂಗಾರು ಮಳೆ ಕೃಷಿ ಕಾರ್ಯಗಳಿಗೆ ಇಳಿಯುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತದೆ.

Advertisement

ಮುಂಗಾರು ಮಳೆ ಸುರಿದು ಎರಡು ಅಥವಾ ಮೂರನೇ ವಾರದಲ್ಲಿ ಗದ್ದೆ ಕೆಲಸಗಳಿಗೆ ರೈತರು ಇಳಿಯುತ್ತಾರೆ. ಕಳೆದ ವರ್ಷವನ್ನು ಬಿಟ್ಟರೆ ಹಿಂದಿನ ಎರಡು ವರ್ಷಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ನಿರ್ಮಾಣವಾಗಿತ್ತು. ತಡವಾಗಿ ಮುಂಗಾರು ಮಳೆ ಸುರಿದ ಕಾರಣ ಹಾಗೂ ನಿರೀಕ್ಷೆಯ ಮಳೆ ಸುರಿಯದೆ ಭತ್ತದ ಕೃಷಿಯೂ ತಡವಾಗಿ ಆರಂಭಗೊಂಡಿತ್ತು. ಈ ಬಾರಿಯೂ ಅದೇ ವಾತಾವರಣ ನಿರ್ಮಾಣವಾಗಿದೆ.

ಭತ್ತ ಬೆಳೆಯುವ ಕೃಷಿಕ ಗದ್ದೆಯನ್ನು ಉತ್ತು ಬೀಜ ಬಿತ್ತಿದ ಸಂದರ್ಭದಲ್ಲಿ ಮಳೆಯ ಪ್ರಮಾಣ ಇಳಿಮುಖವಾದರೆ ನಿರೀಕ್ಷಿತ ರೀತಿಯಲ್ಲಿ ಫಸಲು ಬೆಳೆಯಲು ಸಾಧ್ಯವಿಲ್ಲ. ಆರಂಭದ ಮಳೆ ನಿರೀಕ್ಷೆ ಹುಟ್ಟಿಸಿದರೂ ಗದ್ದೆಯನ್ನು ಹದಮಾಡಿ ಬೀಜ ಬಿತ್ತಿದ ಬಳಿಕ ಅಂದರೆ ಜೂನ್‌ ತಿಂಗಳ ಅಂತ್ಯದಲ್ಲಿ ಅಥವಾ ಜುಲೈ ತಿಂಗಳ ಆರಂಭದಲ್ಲಿ ಮಳೆ ಕೈಕೊಟ್ಟರೆ ಸ್ವಲ್ಪ ಕಷ್ಟವೆಂಬ ಕಾರಣದಿಂದ ಭತ್ತದ ಬೆಳೆಗಾರ ಕಾದು ನೋಡುತ್ತಾರೆ. ಒಮ್ಮೆ ಉತ್ತಮ ರೀತಿಯಲ್ಲಿ ನೀರಾದರೆ ಮತ್ತೆ ಪಂಪ್‌ ಬಳಸಿಯಾದರೂ ಗದ್ದೆಗೆ ನೀರು ಹಾಯಿಸಬಹುದು ಎನ್ನುವ ನಿರೀಕ್ಷೆ ಆತನಲ್ಲಿದೆ.

ಯಂತ್ರಗಳ ಬಳಕೆ
ಭತ್ತದ ಕೃಷಿಯಲ್ಲಿ ಗದ್ದೆ ಉಳುವುದರಿಂದ ಹಿಡಿದು ಭತ್ತದ ಫಸಲನ್ನು ಕೊೖಲು ಮಾಡುವವರೆಗೂ ಬಳಸುವ ಯಂತ್ರಗಳು ಇಂದು ಲಭ್ಯವಿವೆ. ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಭತ್ತದ ಕೃಷಿಕರೂ ಯಂತ್ರೋಪಕರಣಗಳನ್ನು ನಿಧಾನವಾಗಿ ಅನುಸರಿಸುತ್ತಿದ್ದಾರೆ. ಯಂತ್ರಗಳ ಮೂಲಕ ಒಂದೆರಡು ದಿನಗಳಲ್ಲಿ ಕೆಲಸಗಳನ್ನು ಪೂರೈಸಲು ಸಾಧ್ಯವಿರುವುದರಿಂದ ಮಳೆ ಸರಿಯಾಗಿ ಸುರಿದರೆ ಕೂಡಲೇ ಭತ್ತ ಕೃಷಿ ವೇಗವನ್ನು ಪಡೆಯುತ್ತದೆ.

ಗುರಿ ಸಾಧಿಸುವ ನಿರೀಕ್ಷೆ
ಉತ್ಪಾದನಾ ವೆಚ್ಚ, ಕಾರ್ಮಿಕರ ಕೊರತೆ, ಫಸಲಿನ ಕೊರತೆ ಮೊದಲಾದ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಕೆಯ ಹಾದಿಯಲ್ಲಿದೆ. 2010-11ರಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 3,400 ಹೆಕ್ಟೇರ್‌ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಭತ್ತ ಬೆಳೆಯುತ್ತಿದ್ದರೆ 2016- 17ನೇ ಸಾಲಿಗೆ ಇದು 2,500 ಹೆಕ್ಟೇರ್‌ಗೆ ಆಗಿತ್ತು. ಆದರೆ ಈ ಬಾರಿ ಕೃಷಿ ಇಲಾಖೆಗೆ ಮುಂಗಾರಿನಲ್ಲಿ 900 ಹೆಕ್ಟೇರ್‌ ಭತ್ತದ ಬೇಸಾಯದ ಗುರಿಯಷ್ಟೇ ಇದೆ.
••ರಾಜೇಶ್‌ ಪಟ್ಟೆ
Advertisement

Udayavani is now on Telegram. Click here to join our channel and stay updated with the latest news.

Next