Advertisement

BJP-BJD ಮೈತ್ರಿಗೆ ಹಿನ್ನಡೆ: ಒಡಿಶಾದಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ

12:38 AM Mar 23, 2024 | Team Udayavani |

ಭುವನೇಶ್ವರ: ಒಡಿಶಾಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಬಿಜೆಡಿ ನಡುವೆ ಚುನಾವಣ ಮೈತ್ರಿ ಏರ್ಪಡುವ ಪ್ರಯತ್ನಕ್ಕೆ ಹಿನ್ನಡೆ ಯಾಗಿದೆ. ಸ್ಥಾನ ಹೊಂದಾಣಿಕೆ ಭಿನ್ನಾಭಿಪ್ರಾ ಯದಿಂದಾಗಿ ಚುನಾವಣೆಯಲ್ಲಿ ಏಕಾಂಗಿ ಯಾಗಿ ಸ್ಪರ್ಧೆ ಮಾಡುವ ಬಗ್ಗೆ ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಮಾಲ್‌ ಶುಕ್ರವಾರ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ.

Advertisement

ಒಡಿಶಾದಲ್ಲಿ ಬಿಜೆಪಿ ಪ್ರಮುಖ ವಿಪಕ್ಷವಾಗಿದ್ದು ಬಿಜೆಡಿ ಜತೆ ಚುನಾವಣ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿತ್ತು. ಈ ಕುರಿತು ಹಲವು ಸುತ್ತಿನ ಮಾತುಕತೆಗಳು ಕೂಡ ನಡೆದ್ದವು. ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಮಾಲ್‌, ರಾಜ್ಯದ 21 ಲೋಕಸಭಾ ಕ್ಷೇತ್ರಗಳು, 147 ವಿಧಾನಸಭಾ ಕ್ಷೇತ್ರ ಗಳಲ್ಲಿ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಎಂದು ಪ್ರಕಟಿಸಿದ್ದಾರೆ.

ಏನಾಗಿತ್ತು ಸ್ಥಾನ ಹೊಂದಾಣಿಕೆ? 147 ಸದಸ್ಯ ಬಲದ ವಿಧಾನಭೆಯಲ್ಲಿ 57 ಸ್ಥಾನಗಳನ್ನು, 13 ರಿಂದ 14 ಲೋಕಸಭಾ ಸ್ಥಾನಗಳನ್ನು ಬಿಜೆಪಿಯು ಬಿಜೆಡಿ ಬಳಿ ಕೇಳಿತ್ತು. ಆದರೆ ಇದಕ್ಕೆ ಬಿಜೆಡಿ ಸಮ್ಮತಿಸಿಲ್ಲ ಎನ್ನಲಾಗಿದೆ. ಸದ್ಯ ಒಡಿಶಾದಲ್ಲಿ ಬಿಜೆಪಿ 23 ಶಾಸಕರು, 8 ಲೋಕಸಭಾ ಸದಸ್ಯರನ್ನು ಹೊಂದಿದೆ. ಅದೇ ರೀತಿ ಬಿಜೆಡಿ 112 ಶಾಸಕರು, 12 ಲೋಕಸಭಾ ಸದಸ್ಯರನ್ನು ಹೊಂದಿದೆ. ಕಳೆದ ಕೆಲವು ಚುನಾವಣೆಗಳಿಂದ ರಾಜ್ಯದಲ್ಲಿ ಬಿಜೆಪಿಯ ಮತ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಂಡು ಏಕಾಂಗಿಯಾಗಿ ಚುನಾವಣೆ ಎದುರಿಸಲು ಬಿಜೆಪಿ ರಾಜ್ಯ ಘಟಕ ಮುಂದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next