Advertisement
ನ. 11ರಂದು ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಪರಾಶರ ಸಭಾಂಗಣದಲ್ಲಿ ನಡೆದ ಪುತ್ತೂರು ಜಿಲ್ಲೆ ರಚನೆಯ ಹಕ್ಕೊತ್ತಾಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಂಚಾಲಕರಾಗಿ ಉದ್ಯಮಿ ಅಶೋಕ್ ಕುಮಾರ್ ರೈ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಅಭಿಪ್ರಾಯ ಸಂಗ್ರಹಿಸಿ,ಹೋರಾಟದ ರೂಪರೇಖೆ ತಯಾರಿಸಲು ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲಾಯಿತು.
Related Articles
Advertisement
ಮನವರಿಕೆ ಮಾಡೋಣಕೇಶವ ನಾರಾಯಣ ಮುಳಿಯ ಮಾತನಾಡಿ, ಎಲ್ಲ ಗ್ರಾ.ಪಂ., ಅಧಿಕಾರಿಗಳು ನಿರ್ಣಯ ಕೈಗೊಳ್ಳುವುದು ಉತ್ತಮ ಎಂದರು. ಭಾಗ್ಯೇಶ್ ರೈ ಮಾತನಾಡಿ, ಜಿಲ್ಲೆಯನ್ನು ಪ್ರತ್ಯೇಕ ಮಾಡುವುದು ಬೇಡ ಎಂಬ ಭಾವನೆ ಬರುವ ಸಾಧ್ಯತೆ ಇದೆ. ಭಾವನಾತ್ಮಕವಾಗಿ ದ.ಕ. ಜಿಲ್ಲೆ ಒಂದೇ. ಆದರೆ ಆಡಳಿತಾತ್ಮಕ ಉದ್ದೇಶದಿಂದ ಪ್ರತ್ಯೇಕ ಜಿಲ್ಲೆ ಕೇಳುವ ಅವಶ್ಯಕತೆ ಇದೆ ಎನ್ನುವುದನ್ನು ಮಂಗಳೂರು ಭಾಗದ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕಿದೆ ಎಂದರು. ನೂರುದ್ದೀನ್ ಸಾಲ್ಮರ, ಸುದರ್ಶನ ಗೌಡ, ರವಳನಾಥ, ಜಗನ್ನಾಥ್ ರೈ, ಡಾ| ಯು.ಪಿ. ಶಿವಾನಂದ್, ಕೆ.ಪಿ. ಜೇಮ್ಸ್, ರಾಮಣ್ಣ ರೈ, ಸಂದೀಪ್ ಲೋಬೊ, ಶ್ರೀಧರ್ ರೈ ಬೈಲುಗುತ್ತು ಮೊದಲಾದವರು ಸಲಹೆ ನೀಡಿದರು. ಅಪೇಕ್ಷಾ ಪೈ ನಾಡಗೀತೆ ಹಾಡಿದರು. ಪುತ್ತೂರು ಜಿಲ್ಲೆ ಘೋಷಣೆಯ ಹೋರಾಟಕ್ಕೆ ಚಾಲನೆ ನೀಡಿದ ಸತೀಶ್ ರೈ ನೀರ್ಪಾಡಿ ಸ್ವಾಗತಿಸಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ವಂದಿಸಿದರು. ಬಡೆಕ್ಕಿಲ ಪ್ರದೀಪ್ ನಿರೂಪಿಸಿದರು. ಜಿಲ್ಲೆ ಆಗಲೇಬೇಕು
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಎಸ್‌ಆರ್‌ಟಿಸಿ ಡಿಸಿ, ಸಹಾಯಕ ಆಯುಕ್ತರು, ಸಹಕಾರಿ ಸಂಘಗಳ ರಿಜಿಸ್ಟ್ರಾರ್, ಮೆಸ್ಕಾಂ ಇಇ, ಅಧಿಕಾರದ ಕೇಂದ್ರ ಸ್ಥಾನ ಪುತ್ತೂರು. ಆದ್ದರಿಂದ ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು. ಹೆದ್ದಾರಿ, ರೈಲ್ವೇ, ಹೆಲಿಪ್ಯಾಡ್ ಮೊದಲಾದ ಸೌಕರ್ಯ ಗಳು ಇಲ್ಲಿಗೆ ಬರಬೇಕಿದೆ. ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಪುತ್ತೂರು ಜಿಲ್ಲಾಕೇಂದ್ರ ಆಗಬೇಕಾದ ಅನಿವಾರ್ಯ ಇದೆ ಎಂದರು. ಜನಪ್ರತಿನಿಧಿಗಳ ನಿರ್ಣಯವೂ ಅಗತ್ಯ
ವಕೀಲ ರಾಮ್‌ಮೋಹನ್ ರಾವ್ ಮಾತನಾಡಿ, ವೇಣೂರಿನ 2 ಗ್ರಾಮಗಳನ್ನು ಹೊರತುಪಡಿಸಿ ಬಂಟ್ವಾಳವೂ ಪುತ್ತೂರು ಜಿಲ್ಲೆಗೆ ಸೇರಬೇಕೆಂಬ ಬಗ್ಗೆ ಬೇಡಿಕೆ ಬಂದಿದೆ. ಜಿಲ್ಲಾ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ನಿರ್ಣಯ ಅಗತ್ಯ. ರೈತರಿಲ್ಲದೇ ಸರಕಾರವೇ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದ ಅವರ ನಿರ್ಣಯವೂ ಬೇಕು ಎಂದ ಅವರು, ಜಿಲ್ಲಾ ಕೇಂದ್ರವಾಗಲು ಪುತ್ತೂರಿನಲ್ಲಿ ಸ್ಥಳಾವಕಾಶದ ಕೊರತೆ ಇಲ್ಲ. ಬೇಕಾದಷ್ಟು ಜಾಗ ಇದೆ ಎಂದರು. ಸಂಪೂರ್ಣ ಬೆಂಬಲ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಇದರೊಳಗೆ ರಾಜಕೀಯ ಬರುವುದು ಬೇಡ. 4 ತಾಲೂಕಿನವರು ಒಂದೇ ಧ್ವನಿಯಾಗಿ ಹೋರಾಟ ನಡೆಸಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.