Advertisement

Tamil Nadu;ವಿಧೇಯಕ ಅಂಕಿತಕ್ಕೆ ಕಾಲಮಿತಿ: ನಿರ್ಣಯ

01:04 AM Apr 11, 2023 | Team Udayavani |

ಚೆನ್ನೈ:ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳನ್ನು ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಪಡಿಸುವಂತೆ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿಯವರಿಗೆ ಮನವಿ ಮಾಡುವ ಕುರಿತು ಸೋಮವಾರ ತಮಿಳುನಾಡು ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.

Advertisement

ನಿರ್ಣಯ ಮಂಡಿಸಿ ಮಾತನಾ ಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹಲವು ವಿಧೇಯಕಗಳನ್ನು ಅಂಗೀಕಾರಕ್ಕಾಗಿ ಬಾಕಿ ಇರಿಸಿಕೊಂಡಿರುವ ರಾಜ್ಯಪಾಲ ಆರ್‌.ಎನ್‌.ರವಿ ಅವರಿಗೆ ಕೇಂದ್ರ ಸರಕಾರ ಸೂಕ್ತ ಸಲಹೆ ನೀಡಬೇಕು ಎಂದು ಆಗ್ರಹಿಸಿದರು.

“ರಾಜ್ಯಪಾಲರು ರಾಜಭವನ ವನ್ನು ರಾಜಕೀಯ ಭವನವನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ. ವಿಧೇಯಕಗಳಿಗೆ ಅಂಗೀಕಾರ ನೀಡದೆ, ಆರ್‌.ಎನ್‌.ರವಿ ಅವರು ತಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ನೀಟ್‌ನಿಂದ ತಮಿಳುನಾ ಡನ್ನು ಹೊರಗೆ ಉಳಿಯಲು ಅನು ಮತಿ ನೀಡಬೇಕು ಎಂಬ ವಿಧೇಯಕ ರಾಜ್ಯಪಾಲರ ಅಂಗೀ ಕಾ ರಕ್ಕಾಗಿ ಕಾಯುತ್ತಿದೆ. ಇದಾದ ಬೆನ್ನಲ್ಲೇ, ಆನ್‌ಲೈನ್‌ ಗೇಮಿಂಗ್‌ ನಿಷೇಧ ವಿಧೇಯಕಕ್ಕೆ ರಾಜ್ಯಪಾಲ ರವಿ ಸಹಿ ಹಾಕಿದ್ದಾರೆ. 131 ದಿನಗಳ ಕಾಲ ವಿಧೇ ಯಕವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಅವರು ಕಳೆದ ತಿಂಗಳು ಸರಕಾರಕ್ಕೆ ವಾಪಸ್‌ ಕಳುಹಿಸಿದ್ದರು. “ವಿಧೇಯಕ ತಡೆಹಿಡಿಯ ಲಾಗಿದೆ ಎಂದರೆ ತಿರಸ್ಕರಿಸಲಾಗಿದೆ ಎಂದು ಪರಿಗಣಿಸ ಬೇಕು’ ಎಂದು ಹೇಳಿ ವಿವಾದ ಉಂಟು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next