Advertisement

ಗೋವಿನಜೋಳಕ್ಕೆ ಬೆಂಬಲ ಬೆಲ ನಿಗದಿ ಮಾಡಿ

05:34 PM Nov 15, 2020 | Suhan S |

ಹೂವಿನಹಡಗಲಿ: ತಾಲೂಕು ಕೃಷಿ ವಿಸ್ತರಣಾ ಶಿಕ್ಷಣ ಕೇಂದದಿಂದ ತಾಲೂಕಿನ ಉತ್ತಂಗಿಗ್ರಾಮದ ಪ್ರಗತಿಪರ ರೈತರಾದ ಮುದೇಗೌಡ್ರ ಬಸವರಾಜಪ್ಪ ಇವರ ಜಮೀನಿನಲ್ಲಿಗೋವಿನಜೋಳ (ಆರ್‌ಸಿಆರ್‌ಎಹೆಚ್‌) ಬೆಳೆ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ಪ್ರಗತಿಪರ ರೈತ ಎಸ್‌.ಎಂ. ಕೃಪಾಮೂರ್ತಿ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಈ ಭಾರಿ ಮುಂಗಾರು ಮಳೆಯು ಉತ್ತಮವಾಗಿದ್ದು, ಗೋವಿನಜೋಳದಲ್ಲಿ ಹೆಚ್ಚಿನ ಇಳುವರಿ ಬರಬಹುದು. ರೈತರಿಗೆ ಉತ್ತಮ ಮಾರುಕಟ್ಟೆ ದೊರಕಬೇಕಾಗಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿ ಪ್ರಗತಿಪರ ರೈತ ಬಿ.ಚಂದ್ರಪ್ಪ, ಗೋವಿನಜೋಳವು ಈ ಭಾರಿ ಅತೀ ಹೆಚ್ಚಿನ ಇಳುವರಿ ಬರಲು ಸಕಾಲಕ್ಕೆ ಉತ್ತಮ ಮಳೆ ವಾತಾವರಣವೇಕಾರಣವಾಗಿದೆ. ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಗೊಳಿಸದೇ ಇರುವುದರಿಂದ ಉತ್ತಮ ದರ ದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರವು ಆದಷ್ಟು ಬೇಗನೆ ಬೆಂಬಲ ಬೆಲೆಯನ್ನು ನಿಗದಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಸ್ತರಣಾ ಮುಂದಾಳುಗಳಾದ ಡಾ| ಸಿ.ಎಮ್‌. ಕಾಲಿಬಾವಿ ಮಾತನಾಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನಲ್ಲಿ ನೂತನವಾಗಿ ಬಿಡುಗಡೆಗೊಂಡಂಥ ಹೈಬ್ರಿಡ್‌ ಗೋವಿನಜೋಳ (ಆರ್‌ಸಿಆರ್‌ ಎಂಎಚ್‌-2) ಬರಸಹಿಷ್ಣುತೆಯನ್ನು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ರೈತರು ಈ ಹೈಬ್ರಿಡ್‌ ಗೋವಿನಜೋಳವನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದರು.

ಗೋವಿನಜೋಳ ಸುಧಾರಿತ ಬೇಸಾಯ ಕ್ರಮಗಳಲ್ಲಿ ಗೋವಿನಜೋಳ:ತೊಗರಿ (4:2 / 6:2) ಸಾಲುಗಳ ಅಂತರ ಬೆಳೆಯುವ ರೈತರ ಆದಾಯ ವೃದ್ಧಿಸುವ ಜೊತೆಗೆ ಮಣ್ಣಿನ ಫಲವತ್ತತೆ ಸುಸ್ಥಿರವಾಗುತ್ತದೆ. ಗೋವಿನಜೋಳ ಕಟಾವಿನ ನಂತರತೊಗರಿ ಬೆಳೆ ಅಂತರ ಹೆಚ್ಚಾಗಿದ್ದಲ್ಲಿ/ಕಪ್ಪು ಜಮೀನಿನಲ್ಲಿ ಕಡಲೆ/ಕುಸುಬೆ/ಹವೀಜ (ಕೊತ್ತಂಬರಿ)/ಅಗಸೆ ಬೆಳೆಯಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ಉತ್ತಂಗಿ ಗ್ರಾಮದ ಪ್ರಗತಿಪರ ರೈತರಾದ ಜಿ. ಸೋಮೆಶೇಖರ ಮಾತನಾಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಗ್ರಾಮದ ರೈತರಿಗೆ ನೂತನ ತಾಂತ್ರಿಕತೆಗಳ ಮಾಹಿತಿಯನ್ನು ಹಾಗೂ ನೂತನವಾಗಿ ಬಿಡುಗಡೆಗೊಂಡಂಥ ತಳಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಪರಿಚಯಿಸುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಇನ್ನೋರ್ವ ಪ್ರಗತಿಪರ ರೈತರಾದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಹನುಮಂತಪ್ಪ ಶ್ರೀಹರಿ ಕಾರ್ಯಕ್ರಮ ಕುರಿತು ಮಾತನಾಡಿ, ಗೋವಿನಜೋಳದಲ್ಲಿ ಬರುವ ಕೀಟ ಮತ್ತು ರೋಗಗಳ ಕುರಿತು ಸಮಗ್ರವಾಗಿ ವಿವರಿಸಿದರು. ಡಾ| ಮಂಜುನಾಥ ಭಾನುವಳ್ಳಿ ಮಣ್ಣಿನ ಫಲವತ್ತತೆ ಮತ್ತು ನೀರಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಸುನೀತಾ ಎನ್‌.ಎಚ್‌. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ರೈತರು ಭಾಗವಹಿಸಿ ಕೃಷಿಯಲ್ಲಿ ಬರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next