Advertisement

ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ

04:25 PM Feb 09, 2020 | Team Udayavani |

ಚೇಳೂರು: ಮಾವು, ಹಲಸು ಈ ಭಾಗದ ಆರ್ಥಿಕ ಬೆಳೆಯಾಗಿದ್ದು, ಸಸ್ಯಗಳ ಸಂರಕ್ಷಣೆ ಬಗ್ಗೆ ಇಲಾಖೆಯಿಂದ ನೀಡುವ ತರಬೇತಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಪಂ ಸದಸ್ಯೆ ಕೆ.ಆರ್‌. ಭಾರತಿ ಹೇಳಿದರು.

Advertisement

ಪಾರ್ವತಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆ ಬೇಸಾಯದ ಸುಧಾರಿತ ಕ್ರಮ ಹಾಗೂ ಸಸ್ಯ ಸಂರಕ್ಷಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳೆ ಹೆಚ್ಚಾಗಿ ಬೆಳೆದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಹೀಗಾಗಿ ಸೂಕ್ತ ಬೆಂಬಲ ಬೆಲೆ ಸರ್ಕಾರ ನಿಗದಿಪಡಿಸಬೇಕು ಎಂದರು. ತಾಪಂ ಸದಸ್ಯ ಕೆಂಪರಾಜು ಮಾತನಾಡಿ, ಮಾವು ಉತ್ಪನ್ನಗಳ ಸಂರಕ್ಷಣಾ ಘಟಕ ಮಾಡಬೇಕು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ. ನಾಗರಾಜು ಮಾತನಾಡಿ, ಈ ಭಾಗದಲ್ಲಿದೆ. ಮಾವು ಬೆಳೆ ಸುಮಾರು ಶೇ.40ರಿಂದ 50ರಷ್ಟು ಈ ಭಾಗದಲ್ಲಿದ್ದು, ಕೋಲಾರ, ಚಿಕ್ಕಬಳ್ಳಾಪುರ ಕಡೆ ಶೇ.30ರಿಂದ 35ರಷ್ಟಿದೆ. ಕಾಲಕಾಲಕ್ಕೆ ಔಷಧಿ ಹೊಡೆಯುವುದರಿಂದ ಬೆಳೆ ವೃದ್ಧಿಸಿಕೊಳ್ಳಬಹುದು. ಬೆಳೆಗಳಿಗೆ ಹಾನಿಯಾಗದಂತೆ ಟ್ರೇಗಳ ಮೂಲಕ ಶೇಖರಿಸಿಕೊಂಡು ಮಾರುಕಟ್ಟೆಗೆ ತರಬೇಕು ಎಂದು ಹೇಳಿದರು.

ಮಾವು ಬೆಳೆ ಬಗ್ಗೆ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಎಸ್‌.ಹಿತ್ತಲಮನಿ, ವಿಜ್ಞಾನಿ ಡಾ.ನಾಗಪ್ಪ ದೇಸಾಯಿ ಮಾವಿನ ಸಸ್ಯ, ಬೆಳೆಗಳ ಸಂರಕ್ಷಣೆ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಮಾವು ಬೆಳೆಗಾರ ಸಂಘದ ಅಧ್ಯಕ್ಷ ಸಿ.ಎನ್ .ತಿಮ್ಮೇಗೌಡ, ತೋಟಗಾರಿಕೆ ಉಪನಿರ್ದೇಶಕ ಡಾ.ಎಚ್‌. ಟಿ.ಬಾಲಕೃಷ್ಣ, ಡಾ.ಬಿ.ರಘು, ಸಹಾಯಕ ನಿರ್ದೇಶಕ ಬಿ.ರಾಜಪ್ಪ, ಸಹಾಯಕ ಅಧಿಕಾರಿ ಟಿ.ಹೊನ್ನೇಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next