ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೊ ಮೂಲಕ ಜೂ. 1ರಂದು ಮತದಾನದಲ್ಲಿ ದಾಖಲೆ ನಿರ್ಮಿಸುವಂತೆ ವಾರಾಣಸಿ ಜನತೆಗೆ ಮುಖ್ಯವಾಗಿ ಯುವಜನತೆ, ಮಹಿಳೆ ಹಾಗೂ ಕೃಷಿಕರಿಗೆ ವಿಶೇಷ ಸಂದೇಶ ನೀಡಿದ್ದಾರೆ.
“ಲೋಕಸಭೆ ಚುನಾವಣೆಯ ಮತದಾನದ ದಿನ ಬಂದಿದೆ. ನನ್ನ ಪಾಲಿಗೆ ಕಾಶಿ ಭಕ್ತಿ, ಶಕ್ತಿ ಹಾಗೂ ಮೋಕ್ಷದ ನಗರವಾಗಿದೆ. ಕಾಶಿ ವಿಶ್ವದ ಸಾಂಸ್ಕೃತಿಕ ರಾಜಧಾನಿ, ಸಂಗೀತದ ತವರು. 10 ವರ್ಷಗಳಲ್ಲಿ ಕಾಶಿ ಯುವ ಜನತೆಯ ಕಲ್ಯಾಣ ಹಾಗೂ ಅಭಿವೃದ್ಧಿಯ ಕೇಂದ್ರವಾಗಿದೆ.
ಇದನ್ನೂ ಓದಿ:ಫಲಿತಾಂಶದ ಬಳಿಕ ಷೇರುಪೇಟೆ ಮತ್ತಷ್ಟು ಏರಿಕೆ: ನಿರ್ಮಲಾ ಸೀತಾರಾಮನ್
ಇಂತಃ ನಗರವನ್ನು ಪ್ರತಿನಿಧಿಸುವುದು ಪ್ರಭು ವಿಶ್ವನಾಥ ಹಾಗೂ ಕಾಶಿ ಜನತೆಯ ಆಶೀರ್ವಾದದಿಂದ ಮಾತ್ರ ಸಾಧ್ಯ. ಕಾಶಿಯ ಪ್ರತಿ ಮತದಾರರ ಮತ ನನ್ನ ಸಾಮರ್ಥ್ಯ ವೃದ್ಧಿಸುತ್ತದೆ ಹಾಗೂ ನನಗೆ ಹೊಸ ಶಕ್ತಿ ನೀಡುತ್ತದೆ. ಈ ಬಾರಿಯ ಕಾಶಿಯ ಚುನಾವಣೆ ಕೇವಲ ನವಕಾಶಿ ಅಷ್ಟೇ ಅಲ್ಲದೇ ವಿಕಸಿತ ಭಾರತ ನಿರ್ಮಿಸುವುದಾಗಿದೆ.
ಜೂನ್ 1ರಂದು ಮತದಾನದಲ್ಲಿ ಕಾಶಿಯ ಜನತೆ ಹೊಸ ದಾಖಲೆ ನಿರ್ಮಿಸಬೇಕಾಗಿದೆ. ನಾನು ನಾಮಪತ್ರ ಸಲ್ಲಿಸುವ ವೇಳೆ ಯುವ ಜನರು ಬಂದು, ಅಪಾರ ಉತ್ಸಾಹ ತೋರಿದ್ದರು. ಈಗ ಅದೇ ಉತ್ಸಾಹ ಎಲ್ಲ ಜೂನ್ 1ರಂದು ಮತಗಟ್ಟೆಗಳಲ್ಲಿ ಕಾಣಿಸಬೇಕು. ಇದು ನನ್ನ ವಿನಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.