ಮಹಾಲಿಂಗಪುರ: ವೈದ್ಯರನ್ನು ಜೀವಂತ ದೇವರ ಸ್ವರೂಪದಲ್ಲಿ ಕಾಣುವ ರೋಗಿಗಳ ಸೇವೆಯೇ ಭಗವಂತನಿಗೆ ಮತ್ತು ಸಮಾಜಕ್ಕೆ ಸಲ್ಲಿಸುವ ನಿಜವಾದ ಸೇವೆಯಾಗಿದೆ ಎಂದು ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
Advertisement
ಪಟ್ಟಣದ ಡಾ|ವಿಜಯ ಹಂಚಿನಾಳ ಅವರ ಅನುಪ ಆಸ್ಪತ್ರೆ ಹಾಗೂ ಹಾರ್ಟಕೇರ್ ಸೆಂಟರ್‌ಲ್ಲಿ ನೂತನವಾಗಿ ಆರಂಭಿಸುತ್ತಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನಾಲ್ಕು ನೂತನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ| ಹಂಚಿನಾಳ ಕುಟುಂಬವು ಕಳೆದ ಮೂರು ದಶಕಗಳ ಆರೋಗ್ಯಸೇವೆಯಿಂದಾಗಿ ಬಾಗಲಕೋಟೆ- ಬೆಳಗಾವಿ, ವಿಜಯಪುರ ಜಿಲ್ಲೆಗಳ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಕುಟುಂಬವಾಗಿದೆ.
Related Articles
ಈ ಭಾಗದಲ್ಲಿನ ರೋಗಿಗಳ ಪಾಲಿನ ಸಂಜೀವಿನಿಯಾಗಿ ಬೆಳೆದು, ಉತ್ತಮ ಆರೋಗ್ಯ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
Advertisement
ಅನುಪ ಆಸ್ಪತ್ರೆಯ ಮುಖ್ಯಸ್ಥರಾದ ಡಾ| ವಿಜಯ ಹಂಚಿನಾಳ ಮಾತನಾಡಿ, ಕಳೆದ ಮೂರು ದಶಕಗಳಿಂದ ಆಸ್ಪತ್ರೆಯು ಜನರಿಗೆ ಉತ್ತಮ ಆರೋಗ್ಯ ಸೇವೆನೀಡುತ್ತಾ ಬಂದಿದೆ. ಇದೀಗ ಮಹಾಲಿಂಗಪುರದ ಜನತೆಯು ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಬೇರೆ ಬೇರೆ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸುವದಕ್ಕಾಗಿ, ರೋಗಿಗಳಿಗೆ ಅವಶ್ಯವಿರುವ ಎಲ್ಲ ಚಿಕಿತ್ಸೆಗಳನ್ನು ಒಂದೇಆಸ್ಪತ್ರೆಯ ಅಡಿಯಲ್ಲಿ ನೀಡುವ ಉದ್ದೇಶದಿಂದ ನೂತನವಾಗಿ 4 ಪ್ರತ್ಯೇಕ ಘಟಕ ಆರಂಭಿಸಿದ್ದೇವೆ. ನುರಿತ ಹಾಗೂ ತಜ್ಞವೈದ್ಯರ ತಂಡವನ್ನು ಒಳಗೊಂಡ ಅನುಪ ಆಸ್ಪತ್ರೆಯು 24ಗಿ7 ಆರೋಗ್ಯ ಸೇವೆ ಒದಗಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಡಾ|ಅನೂಪ ಹಂಚಿನಾಳ, ಡಾ| ಎಂ.ಜಿ.ಹಿರೇಮಠ, ಡಾ|ಅಪೂರ್ವ ಹಂಚಿನಾಳ, ನಲಿನಿ ಹಂಚಿನಾಳ, ಡಾ| ಸುಭಾಶಿನಿ ಹಿರೇಮಠ, ಡಾ| ಎಂ.ಜಿ.ಹಿರೇಮಠ ಇದ್ದರು. ಅನುಪ ಆಸ್ಪತ್ರೆಯ ನೂತನ ಘಟಕಗಳನ್ನು ಪ್ರಾರಂಭಿಸಿದ ಡಾ|ವಿಜಯ ಹಂಚಿನಾಳ, ಡಾ|ಅನುಪ ಹಂಚಿನಾಳ ಅವರಿಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ವಿವಿಧ ಊರುಗಳ ವೈದ್ಯರು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಶುಭ ಹಾರೈಸಿದರು.