Advertisement

ಸೇವಾ ರಾಜಕಾರಣ ಪವಿತ್ರವಾದದ್ದು

11:39 AM Dec 07, 2019 | Team Udayavani |

ಧಾರವಾಡ: ರಾಜಕಾರಣ ಕೆಟ್ಟದ್ದಲ್ಲ, ಇದನ್ನು ವೃತ್ತಿಯಾಗಿ ಸ್ವೀಕರಿಸದೇ ಪ್ರವೃತ್ತಿಯಾಗಿ ಸಮಾಜಸೇವೆಯಾಗಿ ರೂಢಿಸಿಕೊಂಡರೆ ಇದೊಂದು ಪವಿತ್ರ ಕೆಲಸವಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಪ್ರಸೆಂಟೇಶನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ಸರಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಸಂಸತ್ತು ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಆಶಯಗಳು ಪೂರ್ಣಗೊಳ್ಳಲು ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವ ರೂಪುಗೊಳ್ಳಲು ಶಾಲಾಕಾಲೇಜು ಹಂತದಲ್ಲಿ ಸಂಘಟಿಸುವ ಸಂಸದೀಯ ಕಲಾಪಗಳ ಅಣಕು ಪ್ರದರ್ಶನ ಹೆಚ್ಚು ಸಹಾಯಕಾರಿ ಆಗುತ್ತದೆ. ಯುವ ಜನತೆಯಲ್ಲಿ ಭಾರತದ ಸಂವಿಧಾನ, ಸಂಸತ್ತು, ಶಾಸನ ಸಭೆ, ಜನಪ್ರತಿನಿಧಿ  ಕಾಯ್ದೆ, ಮತದಾನ, ಚುನಾವಣೆ, ಮೂಲಭೂತ ಹಕ್ಕು, ಕರ್ತವ್ಯ, ಸರಕಾರ ರಚನೆ, ಸರಕಾರದ ಆಡಳಿತ ನಿರ್ವಹಣೆ ಮುಂತಾದ ಅಂಶಗಳನ್ನು ಪ್ರಬಂಧ, ಭಾಷಣ, ಆಶುಭಾಷಣ ಮತ್ತು ಅಣುಕು ಪ್ರದರ್ಶನಗಳ ಮೂಲಕ ಮನನ ಮಾಡಿ, ತರಬೇತಿ ನೀಡಬೇಕು ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು. ಡಿಡಿಪಿಐ ಗಜಾನನ ಮನ್ನಿಕೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರಸೆಂಟೇಶನ್‌ ಬಾಲಕಿಯರ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಸಿಸ್ಟರ್‌ ಸ್ಯಾಲಿ ಬಿ.ಎಸ್‌., ವಿಷಯ ಪರಿವೀಕ್ಷಕರಾದ ಶಿವಲೀಲಾ ಕಳಸಣ್ಣವರ, ಪೂರ್ಣಿಮಾ, ಜಿ.ಆರ್‌. ಭಟ್‌, ಶ್ಯಾಮ ಮಲ್ಲನಗೌಡರ ಇದ್ದರು. ತೇಜಸ್ವಿನಿ ಕಾಕಡೆ ತಂಡದವರು ಪ್ರಾರ್ಥಿಸಿದರು. ವಿಷಯ ಪರೀವಿಕ್ಷಕ ಬಿ.ಬಿ. ದುಬ್ಬನಮರಡಿ ಪ್ರಾಸ್ತಾವಿಕ ಮಾತನಾಡಿದರು. ಎನ್‌.ಬಿ. ಅಮರಗೋಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next