Advertisement

ರಕ್ತದಾನ‌ದಿಂದ ಮಾನವತೆಯ ಸೇವೆ: ಪ್ರೊ|ಪಾಸ್ಕಲ್‌ ಡೇಸಾ

06:45 AM Mar 15, 2018 | Team Udayavani |

ಶಿರ್ವ: ರಕ್ತದಾನ ಮಾಡುವುದು ಮಾನವೀಯ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಜೀವ ಉಳಿಸುವುದಕ್ಕಾಗಿ ರಕ್ತ ನೀಡ ಬೇಕು. ವಿದ್ಯಾರ್ಥಿಗಳು ರಕ್ತದಾನ ಮಾಡಿ ಮಾನವತೆಯ ಸೇವೆ ಮಾಡುವುದರ ಮೂಲಕ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಕಾಲೇಜಿನ ನಿವೃತ್ತ ಉಪನ್ಯಾಸಕ ಮೇಜರ್‌ ಪ್ರೊ| ಪಾಸ್ಕಲ್‌ ಡೇಸಾ ಹೇಳಿದರು.

Advertisement

ಅವರು ಬುಧವಾರ ಲಯನ್ಸ್‌ ಕ್ಲಬ್‌, ಶಿರ್ವ-ಮಂಚಕಲ್‌, ಬ್ಲಿಡ್‌ಬ್ಯಾಂಕ್‌ ಕೆಎಂಸಿ ಮಣಿಪಾಲ, ಆರೋಗ್ಯ ಸಮಿತಿ ಶಿರ್ವ ಆರೋಗ್ಯ ಮಾತಾ ದೇವಾಲಯ, ಎನ್ನೆಸ್ಸೆಸ್‌, ರೇಂಜರ್-ರೋವರ್ ಘಟಕ, ವಿದ್ಯಾರ್ಥಿ ಸಂಘ ,  ಸ್ನಾತಕೋತ್ತರ ವಿಭಾಗ ಸಂತ ಮೇರಿ ಕಾಲೇಜು ಶಿರ್ವ ಇವುಗಳ ಸಹಯೋಗದಲ್ಲಿ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ 25ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
 
ಸಂತ ಮೇರಿ ಮತ್ತು ಡಾನ್‌ ಬೊಸ್ಕೊ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ| ಫಾ| ಸ್ಟಾನಿ ತಾವ್ರೋ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ 25 ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಆಯೋಜಿಸಿದ ಕಾಲೇಜಿನ ನಿವೃತ್ತ ಉಪನ್ಯಾಸಕ ಮೇಜರ್‌ ಪ್ರೊ| ಪಾಸ್ಕಲ್‌ ಡೇಸಾ ಅವರನ್ನು ಸಂಚಾಲಕ ರೆ| ಫಾ|  ಸ್ಟಾನಿ ತಾವ್ರೋ ಸಮ್ಮಾನಿಸಿದರು. ಕೆಎಂಸಿ ಮಣಿಪಾಲದ ಡಾ| ಇಶಿತಾ ಗರ್ಗ್‌, ಪ್ರಾಂಶುಪಾಲ ಪ್ರೊ| ರಾಜನ್‌ ವಿ.ಎನ್‌., ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಜೂಲಿಯಾನ್‌ ರೋಡ್ರಿಗಸ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ಚರ್ಚ್‌ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್‌ ಡಿ’ಸೋಜಾ, ಯೂತ್‌ ರೆಡ್‌ಕ್ರಾಸ್‌ ಸೆಲ್‌ನ ನಿರ್ದೇಶಕಿ ಪ್ರೊ| ರತ್ನಾವತಿ ಲೀನಾ ಫೆರಾವೋ, ಅಸಿಸ್ಟೆಂಟ್‌ ಪ್ರೊ| ನಿರ್ಮಿತಾ ಕುಮಾರಿ, ಪ್ರೊ| ಜಗದೀಶ ಆಚಾರ್ಯ ಭಾಗವಹಿಸಿದ್ದರು. 

ಲಯನ್ಸ್‌ ಕ್ಲಬ್‌ನ ಸದಸ್ಯರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ| ಪದ್ಮನಾಭ ಭಟ್‌ ಸ್ವಾಗತಿಸಿದರು. ಶ್ರೇಯಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಮೆಲ್ವಿನ್‌ ಅರಾನ್ಹ, ವಂದಿಸಿದರು. ಸುಮಾರು 175 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next