Advertisement

ಬ್ಯಾಂಕ್‌ಗಳ ಸೇವೆ ಜನಸಾಮಾನ್ಯರತ್ತ

11:33 PM Oct 03, 2019 | Team Udayavani |

ಉಡುಪಿ/ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌, ಇತರ ಬ್ಯಾಂಕ್‌ಗಳು ದೇಶಾದ್ಯಂತ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ತಲುಪುವ ಶಿಬಿರ ನಡೆಸುತ್ತಿವೆ. ಮೊದಲ ಹಂತದಲ್ಲಿ ಗ್ರಾಹಕರಿಗೆ ಸುಲಭದಲ್ಲಿ ಸಾಲ ಪಡೆಯುವಂತಾಗಲು 250 ಜಿಲ್ಲೆಗಳಲ್ಲಿ ಅ. 3ರಿಂದ 7ರ ವರೆಗೆ ಶಿಬಿರ ನಡೆಯಲಿದೆ. 14 ಜಿಲ್ಲೆಗಳಲ್ಲಿ ನಡೆ ಯುವ ಕಾರ್ಯಕ್ರಮದ ಆತಿಥೇಯತ್ವ ಸಿಂಡಿಕೇಟ್‌ ಬ್ಯಾಂಕ್‌ ವಹಿಸಿಕೊಂಡಿದೆ.

Advertisement

ದ.ಕ., ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಲೀಡ್‌ ಬ್ಯಾಂಕ್‌ ಆಗಿ ಕಾರ್ಯಕ್ರಮದ ನೇತೃತ್ವ ವಹಿಸಿದೆ. ಅ. 5, 6ರಂದು ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಕಾರ್ಯಕ್ರಮ ಜರಗಲಿದೆ. ದ.ಕ. ಜಿಲ್ಲಾ ಕಾರ್ಯಕ್ರಮ ಮಂಗಳೂರಿನ ಟೌನ್‌ ಹಾಲ್‌ನಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಯಕ್ರಮ ಮಣಿಪಾಲದ ಗೋಲ್ಡನ್‌ ಜುಬಿಲಿ ಹಾಲ್‌ನಲ್ಲಿ ನಡೆಯಲಿದೆ. ಅ. 5ರ ಬೆಳಗ್ಗೆ 10ಕ್ಕೆ ಶಿಬಿರ ಆರಂಭವಾಗಲಿದೆ.

ಸಾಮಾನ್ಯ ಗ್ರಾಹಕರನ್ನು ತಲುಪುವ ಶಿಬಿರವನ್ನು ವಿಸ್ತೃತ ಉದ್ದೇಶದೊಂದಿಗೆ ಆಯೋಜಿಸಲಾಗಿದೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳು, ಎನ್‌ಬಿಎಫ್ಸಿ, ಎಚ್‌ಎಫ್ಸಿ, ಸಿಡಿº, ನಬಾರ್ಡ್‌ಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ. ಎಲ್ಲ ಬ್ಯಾಂಕುಗಳು ಉಳಿತಾಯ ಖಾತೆ ತೆರೆಯುವುದು, ಹಣಕಾಸು ನೆರವು ಕೊಡುವುದು, ವಿತ್ತೀಯ ಒಳಗೊಳ್ಳುವಿಕೆ, ಡಿಜಿಟಲ್‌ ಬ್ಯಾಂಕ್‌ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಪರಿಚಯಿಸುವುದೂ ಸಹಿತ ಒಂದೇ ಕಡೆ ಆರ್ಥಿಕ, ಆರ್ಥಿಕೇತರ ಸೇವೆಗಳನ್ನು ಒದಗಿಸಲಿದೆ. ಬ್ಯಾಂಕ್‌ಗಳ ವಿವಿಧ ಸೇವೆಗಳನ್ನು ಜನರಿಗೆ ಪರಿಚಯಿಸುವುದೇ ಮುಖ್ಯ ಗುರಿಯಾಗಿದೆ ಎಂದು ಸಿಂಡ್‌ ಬ್ಯಾಂಕ್‌ ಆಡಳಿತ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next