Advertisement
ಸಮಾರಂಭವನ್ನು ಪೊಯಿಸರ್ ಜಿಮ್ಖಾನಾ ಮತ್ತು ಪವನ್ ಧಾಮ್ ಹಾಗೂ ಇತರ ಸಂಸ್ಥೆಗಳು ಆಯೋಜಿಸಿದ್ದವು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಸುಧಾಕರ ಎಸ್. ಹೆಗ್ಡೆ, ಡಾ| ಅನೂಪ್ ಹೆಗ್ಡೆ, ಪೊಯಿಸಾರ್ ಜಿಮಾನದ ಕರುಣಾಕರ ಶೆಟ್ಟಿ, ಬಿ. ಎಂ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ವಿಶ್ವನಾಥ ಶೆಟ್ಟಿ, ಆರ್. ಸಿ. ಶೆಟ್ಟಿ, ಸಿಎ ಶಂಕರ್ ಶೆಟ್ಟಿ, ಪಿ. ಸಿ. ಶೆಟ್ಟಿ, ಪರಾಗ್ ಉಲ್ಲಾಳ್, ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮೊದಲಾದವರನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಜನಸೇವಾ ಸದ್ಭಾವನ ಪುರಸ್ಕಾರವನ್ನಿತ್ತು ಗೌರವಿಸಿ ಅಭಿನಂದಿಸಿದರು.
Related Articles
Advertisement
ವೈದ್ಯರು, ದಾದಿಯರು, ಪೊಲೀಸ್ ಸಿಬಂದಿ ಸಹಿತ ಕೊರೊನಾ ವಾರಿಯರ್ಸ್ ಸಮರ್ಪಿತ ಕಾರ್ಯದಿಂದಾಗಿ ದೇಶವು ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅರೆವೈದ್ಯಕೀಯ ಸಿಬಂದಿ, ಲೋಕೋಪಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕಾರ್ಯವೈಖರಿ ಅಭಿನಂದನೀಯ. ಒಂದು ಸಮಾಜವು ತ್ಯಾಗದ ಬಲ ಮತ್ತು ಸಮರ್ಪಿತ ಸೇವೆಯ ಮೇಲೆ ನಿಂತಿದೆ ಎಂದು ತಿಳಿಸಿದ ರಾಜ್ಯಪಾಲರು, ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಮುಂಬಯಿ ಬಂಟರ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ಸಂಸ್ಥೆಗಳನ್ನು ಅಭಿನಂದಿಸಿದರು.
ಸೇವೆ ಎಂಬುವುದು ಹೃದಯದಿಂದ ಬರಬೇಕು. ಆಗ ಮಾತ್ರ ನಮಗೆ ಆ ಸೇವೆಯಿಂದ ಸಂತೃಪ್ತಿ ಸಿಗಲು ಸಾಧ್ಯ. ಕೋವಿಡ್ ಪೀಡಿತ ರೋಗಿಗಳಿಗೆ ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಸಲ್ಲಿಸಿದ ಸೇವೆಯು ದೇವರ ಸೇವೆಗಿಂತ ದೊಡ್ಡ ಕಾರ್ಯವಾಗಿದೆ. ಈ ಸೇವೆಗಾಗಿ ಕೊರೊನಾ ಯೋಧರು ಅಭಿನಂದರ್ನಾಹರು.ಹಲವಾರು ಸಂಘ ಟನೆಗಳ ಕಾರ್ಯಕರ್ತರು ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಮಹಾನ್ ಮನೋಭಾವದಿಂದ ಕೆಲಸ ಮಾಡಿದ್ದರಿಂದ ಸಂಕಷ್ಟಕ್ಕೀಡಾದವರ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು. ಹೊರನಾಡ ಕನ್ನಡಿಗರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸೇವೆ ಅಭಿನಂದನೀಯ. ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾಲು ಅಪಾರವಾಗಿದೆ ಎಂದು ತಿಳಿಸಿದ ರಾಜ್ಯಪಾಲರು, ಸಮಸ್ತ ಕನ್ನಡಿಗರಿಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಪವಾನ್‌ಧಾಮ್ ವತಿಯಿಂದ ಡಾ| ಹಸ್ಮುಖ್ ಠಕ್ರಾಲ…, ಡಾ| ಬಿಪಿನ್ ದೋಶಿ, ಡಾ| ನಿಗಮ್ ವೋರಾ, ಡಾ| ಸೌರಭ್ ಸಂಗೋರ್, ಡಾ| ಅಜಿತ್ ವೈಂಗಂಕರ್, ಡಾ| ಪೃತೇಶ್ ಪಂಜಾಬಿ, ಡಾ| ಅಲೋಕ್ ಸಿಂಘಿ, ಡಾ| ದಿನೇಶ್ ಮೋದಿ, ನೀರವ್ ದೋಶಿ ಅವರನ್ನು ರಾಜ್ಯಪಾಲರು ಗೌರವಿಸಿದರು.