ಉಡುಪಿ: ರಾಷ್ಟ್ರಕ್ಕಾಗಿ ಶ್ರೇಷ್ಠ ಸೇವೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಕಾನ್) ಡಾ|ಟಿಎಂಎ ಪೈ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ನಿಮಿತ್ತ ಶನಿವಾರ ಸಂಘಟಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನರ್ಸ್ ಗಳು ಮಾನವೀಯ ಮತ್ತು ರಾಷ್ಟ್ರಕ್ಕಾಗಿ ಶ್ರೇಷ್ಠ ಸೇವೆಯನ್ನು ಸಲ್ಲಿಸಬೇಕು. ರಾಷ್ಟ್ರದ ಅಭ್ಯುದಯದಲ್ಲಿ ನಿಮ್ಮ ಸೇವೆ ಬೆಲೆ ಕಟ್ಟಲಾಗದ್ದು ಎಂದರು.
ಆರೋಗ್ಯ ಕ್ಷೇತ್ರ ಕುಂಠಿತಗೊಂಡ ಸಂದರ್ಭ ನರ್ಸ್‌ಗಳ ಪಾತ್ರ ಮಹತ್ವದ್ದಾಗು ತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಧ್ಯಕ್ಷತೆಯನ್ನು ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ವಹಿಸಿ, ಎಂಕಾನ್ ಈ ವಾರದಲ್ಲಿ ರಕ್ತದಾನ ಶಿಬಿರ, ಐದು ವರ್ಷದೊಳಗಿನ ಮಕ್ಕಳ ಆರೈಕೆ ಕುರಿತು ತಾಯಂದಿರಿಗೆ ಜಾಗೃತಿ ಶಿಬಿರ, ಅಂತರ್‌ವೃತ್ತೀಯ ಕಾರ್ಯಾಗಾರ, ಚರ್ಚಾ ಸ್ಪರ್ಧೆ, ವಿಚಾರ ಸಂಕಿರಣದಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನರ್ಸ್‌ಗಳ ಸೇವೆ ಸಮುದಾಯದ ಸೇವೆಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲೆ ಡಾ| ಕಸ್ತೂರಿ ಆರ್. ಅಡಿಗ ಗೌರವ ಅತಿಥಿಗಳಾಗಿದ್ದರು. ಎಂಕಾನ್ ಡೀನ್ ಡಾ| ಅನೀಸ್ ಜಾರ್ಜ್ ಮಾತನಾಡಿದರು. ಹಿಂದಿನ ಟ್ಯೂಟರ್ ಗುಲಾಬಿ ಕುಡ್ವ, ನಿವೃತ್ತ ವಾರ್ಡ್ ಇನ್ ಚಾರ್ಜ್ ವಿಜಯಲಕ್ಷ್ಮೀ, ಮಲ್ಪೆಯ ನಿವೃತ್ತ ಎಎನ್‌ಎಂ ಪದ್ಮಾ ಅವರನ್ನು ಅಭಿನಂದಿಸಲಾಯಿತು. ಡಾ| ಕಸ್ತೂರಿ ಅಡಿಗ ಪ್ರಾಯೋಜನೆಯಲ್ಲಿ ಕ್ಲಿನಿಕಲ್ ಪ್ರಾಕ್ಟಿಸ್‌ನಲ್ಲಿ ಶ್ರೇಷ್ಠತೆ ಮೆರೆದ ಅಶ್ಮಿತಾ ರವೀನಾ ಲೋಬೋ, ಕೆನೆಟ್ ಮರ್ವಿನ್ ಸಲ್ದಾನ (ಹಿಂದಿನ ವರ್ಷದ ನಿರ್ಗಮನ ವಿದ್ಯಾರ್ಥಿನಿ), ಮರಿಯಮ್ಮ ಎಂ.ಟಿ. ಅವರನ್ನು ಪುರಸ್ಕರಿಸಲಾಯಿತು. ಸಪ್ತಾಹದ ಅಂಗವಾಗಿ ಆಯೋಜಿಸಿದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.