Advertisement

Puttur ಸೇವಾ ನ್ಯೂನತೆ ಹಿನ್ನೆಲೆ: ಗ್ರಾಹಕ ನ್ಯಾಯಾಲಯದಿಂದ ಮೆಸ್ಕಾಂಗೆ ದಂಡ

11:38 PM Nov 22, 2023 | Team Udayavani |

ಪುತ್ತೂರು: ವಿದ್ಯುತ್‌ ಸಂಪರ್ಕ ನಿಲುಗಡೆಗೊಳಿಸುವಂತೆ ಕೋರಿ ಪುತ್ತೂರು ಮೆಸ್ಕಾಂ ಗ್ರಾಮಾಂತರ ವಿಭಾಗಕ್ಕೆ ನೀಡಿದ ನಿಲುಗಡೆ ಅರ್ಜಿಯನ್ನು ಕಡೆಗಣಿಸಿ, ಸೇವಾ ನ್ಯೂನತೆ ಎಸಗಿದ ಮೆಸ್ಕಾಂಗೆ ರಾಜ್ಯ ಗ್ರಾಹಕ ಆಯೋಗವು 51,974 ರೂ. ದಂಡ ಮತ್ತು ಈ ಮೊತ್ತವನ್ನು ದೂರುದಾರರಿಗೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ.

Advertisement

ಕೊಳ್ತಿಗೆ ಗ್ರಾಮದ ಬಾಯಾಂಬಾಡಿ ಲೋಕನಾಥ ಗೌಡ ತನಗೆ ಸೇರಿದ ವಿದ್ಯುತ್‌ ಮೀಟರನ್ನು ನಿಲುಗಡೆಗೊಳಿಸುವಂತೆ ಕೋರಿ 2007ರಲ್ಲಿ ಮೆಸ್ಕಾಂ ಗ್ರಾಮಾಂತರ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಅದೇ ವಿದ್ಯುತ್‌ ಮೀಟರನ್ನು ರಾಮಕೃಷ್ಣ ಗೌಡ ಅವರು ಅಕ್ರಮವಾಗಿ ಉಪಯೋಗಿಸುತ್ತಿರುವ ಕುರಿತು ದೂರನ್ನು ನೀಡಿದ್ದರು. ಆದರೆ ಮೆಸ್ಕಾಂ ಯಾವುದೇ ಕ್ರಮಕೈಗೊಳ್ಳಲಿಲ್ಲ.

ಆ ಬಳಿಕ ಮೆಸ್ಕಾಂ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಲೋಕನಾಥ ಗೌಡ ಅವರ ಮೇಲೆಯೇ 37,532 ರೂ. ದಂಡ ವಿಧಿಸಿದ್ದರು. ಈ ಪೈಕಿ ದಂಡದ ಮೊತ್ತದಲ್ಲಿ 18,499 ರೂ. ಅನ್ನು ಲೋಕನಾಥರು ಮೆಸ್ಕಾಂಗೆ ಪಾವತಿಸಿದ್ದರು ಮಾತ್ರವಲ್ಲದೇ ಈ ಕ್ರಮವನ್ನು ಪ್ರಶ್ನಿಸಿ ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲಿಸಿದ್ದರು.

ದೂರು ಅರ್ಜಿಯನ್ನು ಪುರಸ್ಕರಿ ಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ದೂರುದಾರ ಪಾವತಿಸಿದ್ದ 18,499 ರೂ. ಪರಿಹಾರವಾಗಿ 10 ಸಾವಿರ ರೂ. ಹಾಗೂ ದೂರಿನ ಖರ್ಚಿನ ಬಗ್ಗೆ 10 ಸಾವಿರ ರೂ. ದಂಡ ಪಾವತಿಸಬೇಕೆಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ ಮೆಸ್ಕಾಂ ರಾಜ್ಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಆಯೋಗವು ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ. ದೂರುದಾರರ ಪರವಾಗಿ ಪುತ್ತೂರಿನ ನ್ಯಾಯವಾದಿ ಗಿರೀಶ್‌ ಮಳಿ, ಕುಮಾರ್‌ಎ.ಪಿ., ನಿಶಾಂತ್‌ ಸುವರ್ಣ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next