Advertisement

ಸೇವಾಜೆ ಸೇತುವೆ ಶೀಘ್ರ ವಾಹನ ಸಂಚಾರಕ್ಕೆ ತೆರವು

12:08 PM May 20, 2022 | Team Udayavani |

ಸುಳ್ಯ: ಸೇವಾಜೆ ಸೇತುವೆ ಬಳಿಯ ಸಂಪರ್ಕ ರಸ್ತೆ ಕಡಿತಗೊಂಡ ವಿಚಾರ ಪ್ರಸ್ತಾವವಾದಾಗ ವಾರದೊಳಗೆ ನೂತನ ಸೇತುವೆ ಸಂಚಾರಕ್ಕೆ ತೆರೆದು ಕೊಳ್ಳಲಿದೆ ಎಂದು ಅಧಿಕಾರಿಗಳು ಸುಳ್ಯ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಭರವಸೆ ನೀಡಿದರು.

Advertisement

ಸಭೆಯು ಸುಳ್ಯ ತಾ.ಪಂ. ಆಡಳಿತಾಧಿಕಾರಿ ಗಾಯತ್ರಿ ಎನ್‌. ನಾಯಕ್‌ ಅಧ್ಯಕ್ಷತೆಯಲ್ಲಿ ಸುಳ್ಯ ತಾ.ಪಂ. ಸಭಾಂ ಗಣದಲ್ಲಿ ನಡೆಯಿತು. ಮಳೆಗಾಲ ಆರಂಭ ಗೊಳ್ಳುತ್ತಿದ್ದು ಅದರೊಂದಿಗೆ ಡೆಂಗ್ಯೂ ಪ್ರಕರಣವೂ ಹೆಚ್ಚಾಗುತ್ತಿದೆ. ಆದ್ದರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿ ಸುವಂತೆ ಸೂಚಿಸಿದರು.

ತಾಲೂಕಿನ ವಿದ್ಯಾರ್ಥಿ ನಿಲಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಸ್ಟೆಲ್‌ಗೆ ಮಕ್ಕಳ ಸೇರ್ಪಡೆ ಬಗ್ಗೆ ಪೂರಕ ಗಮನ ಹರಿಸುವಂತೆ ತಿಳಿಸಿದರು.

ಎಚ್ಚರಿಕೆ ಫಲಕ ಅಳವಡಿಸಿ

ಮಳೆಗಾಲದಲ್ಲಿ ಅವಘಡಗಳು ಸಂಭವಿ ಸುವ ಸಾಧ್ಯತೆ ಇರುವುದರಿಂದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಚನ ಫಲಕ ಅಳವಡಿಸುವಂತೆ, ಹೊಂಡ ಗುಂಡಿಗಳು, ಕಾಮಗಾರಿ ಪ್ರದೆಶದಲ್ಲಿ ಸೂಚನ ಫಲಕಗಳನ್ನು ಎದ್ದು ಕಾಣುವಂತೆ ಅಳ ವಡಿಸುವಂತೆ ಸೂಚಿಸಿದರು.

Advertisement

ಕಾನೂನು ವ್ಯಾಪ್ತಿಯಲ್ಲಿ ಆಧಿಕಾರಿಗಳ ಹಂತದಲ್ಲಿ ಹಿನ್ನಡೆಯಾಗದಂತೆ ಕ್ರಮ ವಹಿಸಿ ಎಂದರು. ಸುಳ್ಯ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣ ಆಧಿಕಾರಿ ಭವಾನಿಶಂಕರ ಸ್ವಾಗತಿಸಿ, ವಂದಿಸಿದರು.

ಅಧಿಕಾರಿಗಳು ಸಿದ್ಧರಾಗಿರಲು ಕರೆ

ಮಳೆಗಾಲಕ್ಕೆ ಅಧಿಕಾರಿಗಳು ಸನ್ನದ್ಧರಾಗಿರಿ. ಅಧಿಕಾರಿಗಳು ರಜೆ ಮಾಡದೆ ಫೋನ್‌ ಸಂಪರ್ಕದಲ್ಲಿ ಇರುವಂತೆ ನೊಡಿಕೊಳ್ಳಿ. ಮೆಸ್ಕಾಂ, ಅರಣ್ಯ ಇಲಾಖೆಯವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪೂರ್ವಭಾವಿ ಮಾಹಿತಿ ಸಂಗ್ರಹಿಸಿ. ಅಪಾಯಕಾರಿ ಮರದ ಗೆಲ್ಲು ತೆರವಿಗೆ ಕ್ರಮ ತೆಗೆದುಕೊಳ್ಳಿ. ಮೆಸ್ಕಾಂಗೆ ಸಂಬಂಧಿಸಿ ಸಮಸ್ಯೆಗಳಾದಲ್ಲಿ ಶೀಘ್ರ ದುರಸ್ತಿಗೊಳಿಸಿ ಎಂದು ಗಾಯತ್ರಿ ಎನ್‌. ನಾಯಕ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next