Advertisement
ನಗರದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ರಾಜ್ಯ ಕಾನೂನು ಸೇವೆಗಳರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಅಭಿಯೋಜನಾ ಇಲಾಖೆ ಸಂಯುಕ್ತಾಶ್ರಯದಲ್ಲಿ 2019ನೇ ಸಾಲಿನಲ್ಲಿ ಹೊಸದಾಗಿ ನೇಮಕಗೊಂಡ ಪ್ಯಾನೆಲ್ ವಕೀಲರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ತೀರ್ಪುಗಳ ಬಗ್ಗೆ ಅರಿತು ಕೊಂಡಿರಬೇಕು: ನಗರ ಉಪ- ವಿಭಾಗದ ಪೊಲೀಸ್ ಡಿವೈಎಸ್‌ಪಿ ಜೆ. ಮೋಹನ್ ಮಾತನಾಡಿ ಕಲಿಕೆ ಎಂಬುದು ನಿರಂತರವಾದದ್ದು. ವಕೀಲರಾದವರು ಕಾನೂನಿನಲ್ಲಾದ ಹೊಸ ತಿದ್ದುಪಡಿಗಳು, ಐತಿಹಾಸಿಕ ತೀರ್ಪುಗಳು ಮುಂತಾದವುಗಳ ಬಗ್ಗೆ ಅರಿತುಕೊಂಡಿರಬೇಕು. ಆಗಲೇ ಯಾವುದೇ ಪ್ರಕರಣವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂದರು.
ಒಳ್ಳೆಯ ಸೇವೆ ಒದಗಿಸಬೇಕು: ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ. ಜಿ. ವಿಶಾಲಾಕ್ಷಿ ಮಾತನಾಡಿ, ದೇಶದ ಕಟ್ಟಕಡೆಯ ನಾಗರಿಕನಿಗೂ ನ್ಯಾಯ ಸಿಗಬೇಕು ಎಂದು ನಮ್ಮ ಸರ್ವೋತ್ಛ ನ್ಯಾಯಾಲಯ ಪ್ರತಿಪಾದಿಸುತ್ತದೆ. ಅದರಂತೆ ವಕೀಲರು ತಮ್ಮ ಜ್ಞಾನವನ್ನು ಸಾಮಾನ್ಯರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬೇಕು. ತನ್ಮೂಲಕ ಸಾಮಾನ್ಯರಿಗೂ ಒಳ್ಳೆಯ ಸೇವೆ ಒದಗಿಸಬೇಕು ಎಂದು ಹೇಳಿದರು.
ಸಾಮಾನ್ಯರ ನೆರವಿಗೆ ನಿಲ್ಲಬೇಕು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಬಗೆಗೆ ಅರಿವಿರಬೇಕಾಗುತ್ತದೆ. ಕೇವಲ ಹಕ್ಕುಗಳನ್ನಷ್ಟೇ ಕೇಳದೇ ನಾವು ಮಾಡಬೇಕಿರುವ ಕರ್ತವ್ಯಗಳನ್ನು ನಿರ್ವಹಿಸಬೇಕು. ಪ್ಯಾನೆಲ್ ವಕೀಲರು ಈ ಗುಣವನ್ನು ರೂಢಿಸಿಕೊಂಡು ಸಾಮಾನ್ಯರ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ನ್ಯಾಯಿಕ ದಂಡಾಧಿಕಾರಿ ಸ್ಮಿತಾ, ಬೆಂಗಳೂರಿನ ವಕೀಲೆ ಮತ್ತು ವಿಶೇಷ ತರಬೇತುದಾರರಾದ ರಮಾ, ಜಿಲ್ಲಾ ಸರ್ಕಾರಿ ವಕೀಲ ಎಚ್. ಎನ್ ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಹರವೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.