Advertisement
ಕೇಂದ್ರ ಕಚೇರಿಯಲ್ಲಿ ಗ್ಯಾಸ್ ಪೂರೈಕೆ 1 ದಿನ ವಿಳಂಬವಾದರೆ 100ರಿಂದ 150 ಟ್ರಕ್‌ಗಳ ಓಡಾಟದಲ್ಲಿ ವ್ಯತ್ಯಯವಾಗುತ್ತದೆ. ಬುಕಿಂಗ್ ಮಾಡಿದವರು 10ರಿಂದ 20 ದಿನಗಳಷ್ಟು ಕಾಲ ಕಾಯುವ ಸ್ಥಿತಿಯೂ ಎದುರಾಗಿದೆ. ಈ ನಡುವೆ ಬುಕಿಂಗ್ ಮಾಡುವಾಗ ಪುಸ್ತಕ ಸಂಖ್ಯೆ ಸಹಿತ ಹಲವರು ವಿವರಗಳನ್ನು ನೀಡಬೇಕಿರುವ ಕಾರಣ ಕೆಲವೊಂದು ಬಾರಿ ತಾಂತ್ರಿಕ ಸಮಸ್ಯೆಗಳು ಗ್ರಾಹಕರಿಗೆ ಎದುರಾಗುತ್ತಿವೆ. ಇದನ್ನು ಸರಿದೂಗಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂಬುದು ಪೂರೈಕೆದಾರರ ಅನಿಸಿಕೆ.
ಪೈಲಟ್ ಯೋಜನೆಯಾಗಿ ಒಟಿಪಿ ಕಡ್ಡಾಯಗೊಳಿಸುವುದನ್ನು ಜಾರಿ ಮಾಡುತ್ತಿದ್ದೇವೆ. ಪಾರದರ್ಶಕತೆಗಾಗಿ ಹಾಗೂ ಸಿಲಿಂಡರ್ ಪೂರೈಕೆಯ ದೃಢೀಕರಣಕ್ಕಾಗಿ ಗ್ರಾಹಕರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಂಬರ್ ಅನ್ನು ಡೆಲಿವರಿ ಸಿಬಂದಿಗೆ ಕೊಡುವುದು ಕಡ್ಡಾಯವಾಗಿದೆ. ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದಲ್ಲಿ ತಮ್ಮ ಏಜೆನ್ಸಿಗೆ ಗ್ಯಾಸ್ ಪಾಸ್‌ಬುಕ್‌ನೊಂದಿಗೆ ತೆರಳಿ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಎಚ್‌ಪಿ ಗ್ಯಾಸ್ ಏಜೆಂಟ್ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.