Advertisement

ಮಹಾನಗರ ಪಾಲಿಕೆ; ಇ-ಖಾತಾಗೆ ಸರ್ವರ್‌ ಸಮಸ್ಯೆ

09:36 AM May 24, 2022 | Team Udayavani |

ಲಾಲ್‌ಬಾಗ್‌: ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲಕರ ಅಧಿಕೃತ ಹಾಗೂ ಅನಧಿಕೃತವಲ್ಲದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ವಿವರವನ್ನು ದಾಖಲಿಸಿದ ಇ – ಖಾತಾ ಪಡೆಯಲು ಇದೀಗ ಸರ್ವರ್‌ ಸಮಸ್ಯೆ ಎದುರಾಗಿದೆ.

Advertisement

ಮಂಗಳೂರು ಪಾಲಿಕೆ ವ್ಯಾಪ್ತಿಯ ಹಲವು ಸೇವೆಗಳು ಆನ್‌ಲೈನ್‌ ಆಗಿದ್ದು, ಇ – ಖಾತಾ ಪಡೆಯಲು ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು ಹಾಗೂ ತಾಂತ್ರಿಕವಾದ ಸವಾಲುಗಳು ಎದುರಾಗುತ್ತಿದೆ. ಕೆಲವು ಸಮಯದಿಂದ ಇ – ಖಾತಾ ಪಡೆಯಲು ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್‌ ತಾಳೆ ಆಗುತ್ತಿಲ್ಲ. ಇನ್ನು ಖಾತಾ ಪಡೆಯಲು ಗೌಪ್ಯತೆಯ ಕಾರಣಕ್ಕೆ ಒಟಿಪಿ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದ್ದು, ಕೆಲವೊಂದು ಬಾರಿ ಒಟಿಪಿಯೇ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪಾಲಿಕೆಯು ಕಳೆದ ವರ್ಷ ಆಸ್ತಿ ತೆರಿಗೆ ಪಾವತಿ ಮಾಡಲು ಡಿಜಿಟಲ್‌ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸದ್ಯ ಅನೇಕ ಮಂದಿಗೆ ಆನ್‌ ಲೈನ್‌ ಮುಖೇನ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆನ್‌ಲೈನ್‌ ಮುಖೇನ ಬಳಸಿಕೊಳ್ಳಲು ವೆಬ್‌ ಅಪ್ಲಿಕೇಶನ್‌ ಸಿದ್ಧಪಡಿಸಲಾಗಿದ್ದು, ಅದರಲ್ಲಿ ಈ ಹಿಂದೆ ಸಮಸ್ಯೆ ಉಂಟಾಗುತ್ತಿತ್ತು. ಆದರೆ, ಸದ್ಯ ತಕ್ಕಮಟ್ಟಿಗೆ ಸಮಸ್ಯೆ ನಿವಾರಣೆಯಾಗುತ್ತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಏನಿದು ಇ ಖಾತಾ?

ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನ್ಸಿಪಲ್‌ ಡಾಟಾ ಸೊಸೈಟಿ ಹಾಗೂ ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ.

Advertisement

ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ ಹಾಗೂ ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು ಹಾಗೂ ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್‌ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವಕಾಶ ನೀಡಲಾಗಿದೆ.

ಸಮಸ್ಯೆ ಶೀಘ್ರ ಬಗೆಹರಿಯಲಿದೆ

ಪಾಲಿಕೆಯಲ್ಲಿ ಇ-ಖಾತ ಪಡೆದು ಕೊಳ್ಳಲು ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next