ಹೊಳೆಆಲೂರ: ಸಮಾಜದಲ್ಲಿ ಉಳ್ಳವರು ಹಾಗೂ ಧಾರ್ಮಿಕ ಸತ್ಪುರುಷರು ಸಮಾಜದ ದುರ್ಬಲ ವರ್ಗದವರ ಸೇವೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಅರ್ಪಣಾ ಮನೋಭಾವದಿಂದ ಮಾಡಿದಾಗ ಸುಂದರ ಹಾಗೂ ಸಮಾನ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ ಎಂದು ಕಾಶೀ ಸಿಂಹಾಸನದ ಜ| ಡಾ| ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಐತಿಹಾಸಿಕ ಕಾಲದಿಂದಲೂ ಭಾರತದಲ್ಲಿ ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆದುಕೊಂಡಿವೆ. ಆದರೆ ಇತ್ತೀಚೆಗೆ ಪಾಶ್ಚಿಮಾತ್ಯರ ಪ್ರಭಾವೋ ಮಾನವರ ಅತಿಯಾದ ತಿಳಿವಳಿಕೆವೋ ಮುಪ್ಪಿನ ವ್ಯವಸ್ಥೆಯಲ್ಲಿ ತಂದೆ ತಾಯಿಗಳನ್ನು ಮರಗಿಸುತ್ತಿದ್ದಾರೆ. ಮನುಷ್ಯ ತನ್ನ ಕ್ಷಣಿಕ ಆಸೆ ದುರಾಶೆಗಳಿಂದ ಭೂ ತಾಯಿಯನ್ನು ಅಗೆದು ಹಾಳು ಮಾಡುತ್ತಿದ್ದಾನೆ. ಹೀಗಾಗಿ ಅವರ ಶಾಪದಿಂದ ಪ್ರಕೃತಿ ವಿಕೋಪದ ರೂಪದಲ್ಲಿ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ ಎಂದರು.
ಸಮ್ಮಖ ವಹಿಸಿದ್ದ ನವಲಗುಂದ ಗವಿ ಮಠದ ಬಸವಲಿಂಗ ಸ್ವಾಮಿಗಳು ಮಾತನಾಡಿ, ವ್ಯಕ್ತಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಸ್ಥಾನಮಾನ ಹೊಂದಿದ್ದ ಗ್ರಾಮಗಳಲ್ಲಿರುವ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಇತ್ತೀಚೆಗೆ ಇಸ್ಪೀಟ್, ಜೂಜಿನಂತಹ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದ್ದು, ಪವಿತ್ರ ಸ್ಥಾನದಲ್ಲಿ ಕೆಟ್ಟ ಕಾರ್ಯ ಮಾಡಿದರೆ ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನೆರವಾದ ಸೇಡಂ ತಾಲೂಕಿನ ಗೌಡನಹಳ್ಳಿಯ ಬೋಜಲಿಂಗೇಶ್ವರ ಮಠದ ಪ್ರಕಾಶ ತಾತನವರನ್ನು ಗ್ರಾಮಸ್ಥರು ಸನ್ಮಾನಿಸಿದರು.
Advertisement
ಕುರುವಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಜರುಗಿದ ಕೊಪ್ಪದಾಂಬಿಕಾ ದೇವಿ ನೂತನ ದೇವಸ್ಥಾನದ ಉದ್ಘಾಟನೆ, ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವ್ಯಕ್ತಿ ಜೀವನದಲ್ಲಿ ಕೋಟಿ ಕೋಟಿ ಗಳಿಸಿದರೂ ಮರಣ ಹೊಂದಿದಾಗ ಅದನ್ನು ತೆಗೆದುಕೊಂಡು ಹೋಗಲಾಗದು. ನಾವು ಸುಖವಾಗಿರುವುದರ ಜೊತೆಗೆ ನಮ್ಮನ್ನು ನಂಬಿರುವ ಬಂಧು ಭಾಂಧವರು, ನಮ್ಮ ಸುತ್ತಲಿನ ದುರ್ಬಲರು, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡವುದರ ಮುಖಾಂತರ ಸಾಮಾಜಿಕ ಸೇವೆ ಹಾಗೂ ಮಾನಸಿಕ ನೆಮ್ಮದಿ, ಶಾಂತಿ ಪಡೆದುಕೊಳ್ಳಬೇಕು ಎಂದರು.
Related Articles
Advertisement
ಬೆನಹಾಳದ ಸದಾಶಿವ ಮಹಾಂತ ಸ್ವಾಮಿಗಳು, ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು, ಬಳಗಾನೂರ ಶಾಂತವೀರ ಸ್ವಾಮಿಗಳು, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರ ಸ್ವಾಮಿಗಳು, ಸೂಗೂರ ಹಿರೇಮಠದ ಚನ್ನರುದ್ರ ಶಿವಾಚಾರ್ಯರು, ಹೊಳೆಆಲೂರಿನ ಯಚ್ಚರೇಶ್ವರ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು.
ಗ್ರಾಪಂ ಸದಸ್ಯ ಅಡಿಯಪ್ಪ ಮೇಟಿ, ನಾಗಪ್ಪ ಕುರಿ, ಶಾಂತಪ್ಪ ಮೇಟಿ, ಮೋಹನ ಅಳಗವಾಡಿ, ಶರಣಪ್ಪ ಹವಾಜಿ, ರೇವಣಪ್ಪ ಮೇಟಿ, ಹುಸೇನಸಾನ ನದಾಫ್, ಶಿವಪ್ಪ ಮೇಟಿ ಇನ್ನಿತರರು ಇದ್ದರು.