Advertisement

ನಿಸ್ವಾರ್ಥದಿಂದ ಸೇವೆ ಸಲ್ಲಿಸಿ: ಹಳ್ಳಿ

03:42 PM Dec 29, 2017 | Team Udayavani |

ಯಾದಗಿರಿ: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಪ್ರಾಂಶುಪಾಲ ಚಂದ್ರಕಾಂತ ಜಿ. ಹಿಳ್ಳಿ ಹೇಳಿದರು.

Advertisement

ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವತಿಯಿಂದ ನಗರದ ರಾಜೀವಗಾಂಧಿ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಯುವಕರ ಆಲೋಚನೆ
ಬದಲಾಗಬೇಕು. ಸಮಾಜದಲ್ಲಿ ಉನ್ನತವಾದ ಸ್ಥಾನ ಪಡೆಯಬೇಕಾದರೆ ಮೊದಲು ಚಿಕ್ಕ ಚಿಕ್ಕ ಕೆಲಸ ಮಾಡಬೇಕು ಎಂದು ಹೇಳಿದರು.

ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚನ್ನಬಸ್ಸಪ್ಪ ಕುಳಗೇರಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿ ಕನಸಿನ ಕೂಸಾಗಿದೆ. ಅದಕ್ಕಾಗಿ ದೇಶದ ಪ್ರತಿಯೊಂದು ಕಾಲೇಜುಗಳಲ್ಲಿ ಎನ್‌ ಎನ್‌ಎಸ್‌ ಘಟಕ ಸ್ಥಾಪಿಸಿ ಅದರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವತ್ಛತೆ ಅರಿವು ಮೂಡಿಸಲಾಗುತ್ತಿದೆ ಎಂದು
ಹೇಳಿದರು.

ತನುಮನದಿಂದ ಯಾವುದೇ ಕಾಯಕ ಮಾಡಿದಾಗ ಅದರಿಂದ ತೃಪ್ತಿ ದೊರಕುವುದರ ಜತೆಗೆ ಜ್ಞಾನ ಪಡೆಯುಲು ಸಾಧ್ಯವಾಗುತ್ತದೆ. ನಮ್ಮ ಸುತ್ತ ಮುತ್ತ ಬಿದ್ದಿರುವ ಕಸ ಅಥವಾ ಕಾಗದದ ಚೂರುಗಳನ್ನು ತೆಗೆದು ಕಸದ ಬುಟ್ಟಿಗೆ
ಹಾಕಿದಾಗ ಸ್ವತ್ಛ ಭಾರತದ ಕನಸು ನನಸಾಗುತ್ತದೆ ಎಂದು ಹೇಳಿದರು.

ರಾಜೀವ ಗಾಂಧೀಧಿ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಗುಣಾ ನಂದ ಪೌಲ್‌ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನೆಹರು ಮೈಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕರಾದ ಶಿವಶರಣಪ್ಪ ಕೋತ್ವಾಲ, ರಾಜಶೇಖರ, ವಿಶ್ವನಾಥ ಚಿಂತನಳ್ಳಿ, ಶರಣಗೌಡ ಬಿರಾದಾರ, ಶಿಕ್ಷಕಿ ಅರ್ಚನಾ ಇದ್ದರು. ಉಪನ್ಯಾಸಕ ಶಿವಪ್ಪ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಜುಗೇರಿ ನಿರೂಪಿಸಿ , ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next