Advertisement

ಕೋವಿಶೀಲ್ಡ್‌ ದರ ತಾರತಮ್ಯ ವಿವಾದಕ್ಕೆ ಸ್ಪಷ್ಟನೆ ನೀಡಿದ ಸೀರಂ

08:31 PM Apr 24, 2021 | Team Udayavani |

ಪುಣೆ:  ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ 600 ರೂ…- ಕೋವಿಶೀಲ್ಡ್‌ಗೆ ಹೀಗೆ ಭಿನ್ನ ದರವನ್ನು ನಿಗದಿಪಡಿಸಿ, ವಿವಾದಕ್ಕೆ ಸಿಲುಕಿದ ಲಸಿಕೆ ಉತ್ಪಾದನಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ತನ್ನ ನಿಲುವು ಸಮರ್ಥಿಸಿಕೊಂಡಿದೆ.

Advertisement

ಬೇರೆ ದೇಶಕ್ಕೆ ಹೋಲಿಸಿದರೆ, ಭಾರತಕ್ಕೆ ಮತ್ತು ಇಲ್ಲಿನ ಸರ್ಕಾರಿ ಲಸಿಕಾ ಯೋಜನೆಗೆ ಅತ್ಯಂತ ಕಡಿಮೆ ದರ ನಿಗದಿಪಡಿಸಿದ್ದೇವೆ. ಕೇವಲ ನಿಗದಿತ ಪ್ರಮಾಣದ ಲಸಿಕೆಯನ್ನಷ್ಟೇ 600 ರೂ.ಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿದ್ದೇವೆ. ಈಗಲೂ ಲಸಿಕೆಯ ವೆಚ್ಚ, ಕೊರೊನಾ ಚಿಕಿತ್ಸೆಯ ಇತರೆ ವೈದ್ಯಕೀಯ ಸೌಲಭ್ಯದ ವೆಚ್ಚಕ್ಕಿಂತ ತೀರಾ ಕಡಿಮೆ’ ಎಂದು ಸೀರಂ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ :ಕೋವಿಡ್‌ ಹತೋಟಿಗೆ ಸಿಐಐ ಸಹಯೋಗದಲ್ಲಿ ಕಾರ್ಯಪಡೆ : ಸಚಿವ ಡಾ.ಕೆ.ಸುಧಾಕರ್‌

“ಲಸಿಕೆ ಉತ್ಪಾದನೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು, ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ನಮ್ಮ ಸಾಮರ್ಥ್ಯ ಮತ್ತಷ್ಟು ವಿಸ್ತರಿಸಲು ಇದು ಅನಿವಾರ್ಯ’ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next