Advertisement
ಎನ್‌ಎಎಫ್ಎಲ್‌ಡಿಗೆ ಕಾರಣಗಳೇನು?
Related Articles
Advertisement
ಈ ಸಮಸ್ಯೆ ಎಷ್ಟು ಗಂಭೀರ?
ಜಾಗತಿಕವಾಗಿ ಶೇ. 25ರಷ್ಟು ಮಂದಿ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾಶ್ಚಾತ್ಯ ಜನಸಮುದಾಯಗಳಲ್ಲಿ ಎನ್‌ಎಎಫ್ಎಲ್‌ಡಿಯು ಅತೀ ಸಾಮಾನ್ಯವಾದ ದೀರ್ಘಕಾಲಿಕ ಪಿತ್ತಜನಕಾಂಗ ಕಾಯಿಲೆಯಾಗಿದೆ. ಇತ್ತೀಚೆಗೆ ಭಾರತ ಮತ್ತು ಏಶ್ಯದ ಇತರ ದೇಶಗಳಲ್ಲಿಯೂ ಪಿತ್ತಜನಕಾಂಗ ಕಾಯಿಲೆಗಳ ಪ್ರಮುಖ ಕಾರಣವಾಗಿ ಕಂಡುಬರುತ್ತಿದೆ. ಭಾರತ ಮತ್ತು ಏಶ್ಯದ ಇತರ ದೇಶಗಳಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಜೀವನ ಶೈಲಿ ಮತ್ತು ಆಹಾರ ಶೈಲಿ ಬದಲಾವಣೆಯಿಂದಾಗಿ ಇದು ಹೆಚ್ಚುಹೆಚ್ಚು ಪತ್ತೆಯಾಗುತ್ತಿರುವುದು ದಾಖಲಾಗುತ್ತಿದೆ.
ಭಾರತದ ಕೆಲವು ನಗರಗಳ ಜನಸಮುದಾಯಗಳಲ್ಲಿ ಇದರ ಉಪಸ್ಥಿತಿ ಶೇ. 32ರ ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಎನ್‌ಎಎಫ್ಎಲ್‌ಡಿ ಸಮಸ್ಯೆಯನ್ನು ಭಾರತ ಸರಕಾರವು ಗುರುತಿಸಿದ್ದು, ಫೆಬ್ರವರಿ 2021ರಿಂದ ಎನ್‌ಸಿಡಿ ನಿಯಂತ್ರಣ ಕಾರ್ಯಕ್ರಮದಡಿ ನಾನ್-ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯನ್ನೂ ಸೇರ್ಪಡೆಗೊಳಿಸಿದೆ.
ಎನ್‌ಎಎಫ್ಎಲ್‌ಡಿಯ ಅಪಾಯಾಂಶಗಳೇನು?
ಎನ್‌ಎಎಫ್ಎಲ್‌ಡಿಯು ಆಧುನಿಕ ಜೀವನ ಶೈಲಿಗೆ ಸಂಬಂಧಿಸಿದ ಒಂದು ಕಾಯಿಲೆಯಾಗಿದೆ. ಅತಿಯಾದ ಕ್ಯಾಲೊರಿಯುಕ್ತ ಆಹಾರ ಸೇವನೆ, ಜಡ ಜೀವನ ಶೈಲಿಗಳು ಪ್ರಧಾನವಾಗಿರುವ ಅಸಮತೋಲಿತ, ತಪ್ಪು ಜೀವನ ಕ್ರಮದಿಂದಾಗಿ ಇದು ಉಂಟಾಗುತ್ತದೆ. ವಂಶವಾಹಿ ಕಾರಣಗಳು ಮತ್ತು ಜನಾಂಗೀಯ ವ್ಯತ್ಯಾಸಗಳು ಕೂಡ ಇದಕ್ಕೆ ಕೊಡುಗೆ ನೀಡುವುದು ಕಂಡುಬಂದಿದೆ. ಎನ್‌ಎಎಫ್ಎಲ್‌ಡಿ ಉಂಟಾಗಲು ಅಪಾಯಾಂಶಗಳೆಂದರೆ, ಮಧುಮೇಹ, ಬೊಜ್ಜು, ಹೆಚ್ಚು ಕೊಲೆಸ್ಟರಾಲ್ ಮಟ್ಟ, ಅಧಿಕ ರಕ್ತದೊತ್ತಡ, ಗುÉಕೋಸ್ ಅಸಹಿಷ್ಣುತೆ – ಇವುಗಳನ್ನು ಒಟ್ಟಾಗಿ ಮೆಟಬಾಲಿಕ್ ಸಿಂಡ್ರೋಮ್ ಎನ್ನಲಾಗುತ್ತದೆ.
ಬೊಜ್ಜು ಅಥವಾ ಮಧುಮೇಹ ಹೊಂದಿರುವವರಲ್ಲಿ ಶೇ. 70 ಮಂದಿಗೆ ಎನ್‌ಎಎಫ್ಎಲ್‌ಡಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇರುವ ಎನ್‌ಎಎಫ್ಎಲ್‌ಡಿ ಪೀಡಿತರಲ್ಲಿ ವಿಶೇಷತೆಯೊಂದಿದೆ. ಅದೆಂದರೆ, “ಲೀನ್ ಎನ್‌ಎಎಫ್ಎಲ್‌ಡಿ’ ಅಥವಾ “ಬೊಜ್ಜೆàತರ ಎನ್‌ಎಎಫ್ಎಲ್‌ಡಿ’. ಇದು ಭಾರತದಲ್ಲಿ ಎನ್‌ಎಎಫ್ಎಲ್‌ಡಿ ಹೊಂದಿರುವವರ ಪೈಕಿ ಶೇ. 10 ಮಂದಿಯಲ್ಲಿ ಕಂಡುಬರುತ್ತಿದೆ.
ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯು ಸಹಜ ದೇಹತೂಕ ಹೊಂದಿರಬಹುದು ಅಥವಾ ತೆಳ್ಳಗೆ ಇರಬಹುದು; ಆದರೆ ಆತನಲ್ಲಿ ಮಧುಮೇಹ ಉಂಟಾಗುತ್ತದೆ, ಕೊಲೆಸ್ಟರಾಲ್ ಪ್ರಮಾಣ ಅಧಿಕವಾಗುತ್ತದೆ; ದೇಹದ ಚಯಾಪಚಯ ಕ್ರಿಯೆಯಲ್ಲಿರುವ ತೊಂದರೆಯಿಂದಾಗಿ ಎನ್‌ಎಎಫ್ಎಲ್‌ಡಿ ಉಂಟಾಗುತ್ತದೆ. ಇಂತಹ ಪ್ರಕರಣಗಳಲ್ಲಿ ದೇಹವು ತೆಳ್ಳಗಿರುವುದರಿಂದಾಗಿ ಉತ್ತಮ ಆರೋಗ್ಯದಿಂದಿರುವ ತಪ್ಪು ಚಿತ್ರಣ ಉಂಟಾಗುತ್ತದೆ ಮತ್ತು ರೋಗಿಯು ಕಾಯಿಲೆಯ ಮುಂದುವರಿದ ಹಂತದಲ್ಲಷ್ಟೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತಾಗುತ್ತದೆ.
ಎನ್‌ಎಎಫ್ಎಲ್‌ಡಿನಿಭಾಯಿಸುವುದು ಹೇಗೆ?
ಫ್ಯಾಟಿ ಲಿವರ್ ಕಾಯಿಲೆ ಒಂದು ನಿರಪಾಯಕಾರಿ ಕಾಯಿಲೆ ಖಂಡಿತ ಅಲ್ಲ; ದೀರ್ಘಾವಧಿಯಲ್ಲಿ ಕೆಲವರಿಗೆ ಅದು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಸದ್ಯದ ಮಟ್ಟಿಗೆ ಇದರಿಂದ ಪಾರಾಗುವ ಅತ್ಯುತ್ತಮ ಚಿಕಿತ್ಸಾ ವಿಧಾನ ಎಂದರೆ ಆರೋಗ್ಯವಂತ ಜೀವನಕ್ರಮವನ್ನು ರೂಢಿಸಿಕೊಳ್ಳುವುದು. ವ್ಯಾಯಾಮ, ತೂಕ ಕಳೆದುಕೊಳ್ಳುವುದು, ಪೌಷ್ಟಿಕ ಆಹಾರಕ್ರಮ ಬಹಳ ಮುಖ್ಯ. ಬಿರುಸಾದ ನಡಿಗೆ, ಸೈಕಲ್ ಸವಾರಿ, ಜಾಗಿಂಗ್ ಅಥವಾ ಈಜಾಡುವಂತಹ ಏರೋಬಿಕ್ ವ್ಯಾಯಾಮಗಳಿಗೆ ಒತ್ತು ನೀಡಬೇಕು. ಕಾಬೊìಹೈಡ್ರೇಟ್ ಕಡಿಮೆ ಇರುವ, ಕೊಬ್ಬಿನಂಶ ಮಿತವಾಗಿರುವ, ಸ್ಯಾಚ್ಯುರೇಟೆಡ್ ಕೊಬ್ಬು ಇಲ್ಲದ ಮತ್ತು ಸಾಕಷ್ಟು ಪ್ರೊಟೀನ್ ಅಂಶ ಹೊಂದಿರುವ ಆಹಾರ ಕ್ರಮಕ್ಕೆ ಒತ್ತು ನೀಡಬೇಕು.
ದೇಹತೂಕದಲ್ಲಿ ಶೇ. 7ರಿಂದ ಶೇ. 10ರ ವರೆಗಿನ ಅಂಶವನ್ನು ಕಳೆದುಕೊಳ್ಳುವುದು ಗುರಿಯಾಗಿದ್ದು, ಇದರಿಂದ ನ್ಯಾಶ್‌ನ ಬಯಾಪ್ಸಿಯ ಫಲಿತಾಂಶಗಳು ಉತ್ತಮಗೊಳ್ಳುವುದು ಕಂಡುಬಂದಿದೆ. ರಕ್ತದ ಸಕ್ಕರೆಯ ಅಂಶದ ಉತ್ತಮ ನಿಭಾವಣೆ ಹಾಗೂ ಹೃದ್ರೋಗ ಅಪಾಯಗಳ ವಿಶ್ಲೇಷಣೆ ಮತ್ತು ಅದಕ್ಕೆ ಚಿಕಿತ್ಸೆ ಅತ್ಯಂತ ಮುಖ್ಯವಾಗಿವೆ, ಏಕೆಂದರೆ ಇದು ಹೃದ್ರೋಗ ಸಂದರ್ಭಗಳಲ್ಲಿ ಎನ್‌ಎಎಫ್ಎಲ್‌ಡಿ ರೋಗಿಗಳ ಮೃತ್ಯುವಿಗೆ ಪ್ರಧಾನ ಕಾರಣವಾಗಿರುತ್ತದೆ.
ಎನ್‌ಎಎಫ್ಎಲ್‌ಡಿಯ ಮೂರು ಹಂತಗಳಾದ- ಫ್ಯಾಟಿ ಲಿವರ್, ಫ್ಯಾಟಿ ಹೆಪಟೈಟಿಸ್ (ನ್ಯಾಶ್) ಮತ್ತು ಸಿರೋಸಿಸ್ – ಇವುಗಳಲ್ಲಿ ಮೊದಲ ಎರಡನ್ನು ಚಿಕಿತ್ಸೆ ನೀಡಿ ಸರಿಪಡಿಸುವ ಸಾಧ್ಯತೆಗಳಿವೆ ಮತ್ತು ಸರಿಪಡಿಸಲು ಸಾಧ್ಯವಾಗದ ಸಿರೋಸಿಸ್ ಹಂತಕ್ಕೆ ಪ್ರಗತಿ ಹೊಂದಲು ಸಾಕಷ್ಟು ಕಾಲಾವಕಾಶ ಇರುತ್ತದೆ. ಆದರೆ ಇಂತಹ ಸಮಸ್ಯೆ ಹೊಂದಿರುವ ಪ್ರಾಥಮಿಕ ಫ್ಯಾಟಿ ಲಿವರ್ ರೋಗಿಗಳನ್ನು ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಮನವೊಲಿಸುವುದು ಮತ್ತು ಆರೋಗ್ಯಕರ ಜೀವನ ವಿಧಾನವನ್ನು ಅನುಸರಿಸುವಂತೆ ಉತ್ತೇಜಿಸುವುದು ಸವಾಲಾಗಿರುತ್ತದೆ. ಏಕೆಂದರೆ, ಈ ಎನ್‌ಎಎಫ್ಎಲ್‌ಡಿ ಕಾಯಿಲೆಯು ಸರಿಪಡಿಸಬಹುದಾದ ಪ್ರಾರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ.
ಡಾ| ಅನುರಾಗ್ ಶೆಟ್ಟಿ
ಅಸೋಸಿಯೇಟ್ ಪ್ರೊಫೆಸರ್,
ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಂಗಳೂರು.