Advertisement

ಸರಣಿ ರಜೆ: ದೇಗುಲಗಳಲ್ಲಿ  ಹೆಚ್ಚಿದ ಭಕ್ತರ ಸಂಖ್ಯೆ

11:02 AM Dec 26, 2018 | Harsha Rao |

ಬೆಳ್ತಂಗಡಿ/ಉಡುಪಿ/ಕೊಲ್ಲೂರು: ಸರಣಿ ರಜೆಯ ಹಿನ್ನೆಲೆಯಲ್ಲಿ ಕಳೆದ 4 ದಿನಗಳಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಸಾಕಷ್ಟು ಹೆಚ್ಚಿದ್ದು, ಧರ್ಮಸ್ಥಳದಲ್ಲಿ ಮಂಗಳವಾರವೂ ಹೆಚ್ಚಿನ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು.

Advertisement

ಮಂಗಳವಾರ 50 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದ ವಸತಿ ನಿಲಯಗಳು ಕೂಡ ಭರ್ತಿಯಾಗಿದ್ದವು. ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇವರ ದರ್ಶನ ಹಾಗೂ ಅನ್ನಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕೊಲ್ಲೂರು, ಉಡುಪಿ, ಕಟೀಲು ಮೊದಲಾದ ಪ್ರಮುಖ ದೇಗುಲಗಳಲ್ಲಿಯೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next