Advertisement

ICC Under 19 World Cup Final; ಭಾರತಕ್ಕೆ 254 ರನ್ ಗುರಿ ನೀಡಿದ ಆಸೀಸ್

05:25 PM Feb 11, 2024 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): ಇಲ್ಲಿ ರವಿವಾರ ನಡೆಯುತ್ತಿರುವ ಆಂಡರ್‌-19 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಭಾರತಕ್ಕೆ ಗೆಲ್ಲಲು 254 ರನ್ ಗುರಿ ನೀಡಿದೆ.

Advertisement

ಆಸ್ಟ್ರೇಲಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.50 ಓವರ್ ಗಳಲ್ಲಿ7 ವಿಕೆಟ್ ಗಳನ್ನು ಕಳೆದುಕೊಂಡು 253 ರನ್ ಗಳಿಸಿತು. ಆರಂಭಿಕ ಆಟಾಗಾರ ಸ್ಯಾಮ್ ಕಾನ್ಸ್ಟಾಸ್ ಶೂನ್ಯಕ್ಕೆ ಔಟಾದರು. ಆಬಳಿಕ ಉತ್ತಮ ಆಟವಾಡಿದ ಹ್ಯಾರಿ ಡಿಕ್ಸನ್ 42ರನ್, ನಾಯಕ ಹಗ್ ವೈಬ್ಜೆನ್ 48 ರನ್ ಗಳಿಸಿ ಔಟಾದರು. ಹರ್ಜಸ್ ಸಿಂಗ್ 55 , ರಯಾನ್ ಹಿಕ್ಸ್ 20, ಆಲಿವರ್ ಪೀಕ್ ಔಟಾಗದೆ 46 ರನ್, ರಾಫ್ ಮ್ಯಾಕ್‌ಮಿಲನ್ 2, ಚಾರ್ಲಿ ಆಂಡರ್ಸನ್ 13, ಟಾಮ್ ಸ್ಟ್ರೇಕರ್ ಔಟಾಗದೆ 8 ರನ್ ಗಳಿಸಿದರು.

ರಾಜ್ ಲಿಂಬಾನಿ 3 ವಿಕೆಟ್, ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next