Advertisement
ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ತಂಡವೊಂದು ಪ್ರಯೋಗ ನಡೆಸುವುದು ತಪ್ಪಲ್ಲ. ಆದರೆ ಇಲ್ಲಿ ಸರಣಿ ಗೆಲುವು ಮೊದಲ ಗುರಿಯಾಗಬೇಕಿತ್ತು ಎಂಬುದು ಅನೇಕರ ವಾದ. ಇದನ್ನೆಲ್ಲ ಆಸ್ಟ್ರೇಲಿಯ ತಂಡದಿಂದ ನೋಡಿ ಕಲಿಯಬೇಕಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರೆಲ್ಲ ಸರಣಿ ಗೆಲ್ಲಿಸಿಕೊಟ್ಟು, ಬೇಕಿದ್ದರೆ 3ನೇ ಪಂದ್ಯದಲ್ಲಿ ಹೊರಗುಳಿಯಬಹುದಿತ್ತು ಎಂಬ ತರ್ಕದಲ್ಲಿ ಹುರುಳಿಲ್ಲದಿಲ್ಲ.
ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್ ಅವರ ಫಾರ್ಮ್ ಭಾರತಕ್ಕೆ ನಿರ್ಣಾಯಕವಾಗಬೇಕಿದೆ. ಬೇಕಿದ್ದರೆ ಈ ಯಾದಿಗೆ ಶುಭಮನ್ ಗಿಲ್ ಅವರನ್ನೂ ಸೇರಿಸಿಕೊಳ್ಳಬಹುದು. ಇಲ್ಲಿನ ಮೂರೂ ಬ್ಯಾಟರ್ ಟಿ20 ಜೋಶ್ ಅನ್ನು ಏಕದಿನದಲ್ಲಿನ್ನೂ ತೋರ್ಪಡಿಸಿಲ್ಲ. ಹಾಗೆಯೇ ಉಮ್ರಾನ್ ಮಲಿಕ್ ವೇಗಕ್ಕೆ ಒತ್ತು ನೀಡುತ್ತಾರೆಯೇ ಹೊರತು ಇನ್ನೂ ವಿಕೆಟ್ ಟೇಕರ್ ಎನಿಸಿಲ್ಲ.
Related Articles
Advertisement
ಅದೆಂದರೆ, ನಮ್ಮವರು ವೆಸ್ಟ್ ಇಂಡೀಸ್ ತಂಡವನ್ನು ಕಳಪೆ ಎಂದು ತೀರ್ಮಾನಿಸಿದ್ದು! ಅವರು ಮೊದಲ ಪಂದ್ಯದಲ್ಲಿ ಆಡಿದ ರೀತಿ ಹಾಗಿತ್ತು.ಬಹುಶಃ ಉಸ್ತುವಾರಿ ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥ ಕಾರ್ಯತಂತ್ರ ರೂಪಿಸಿದ್ದರೆ ಶನಿವಾರವೇ ಭಾರತ ಸರಣಿ ಗೆಲ್ಲುವ ಸಾಧ್ಯತೆ ಇತ್ತು. ನಮ್ಮವರು ಆಡಿದ ರೀತಿ ನೋಡಿದರೆ, ಈ ಪಂದ್ಯವನ್ನು ಬಹಳ ಲಘುವಾಗಿ ತೆಗೆದುಕೊಂಡಂತಿತ್ತು. ವಿಶ್ವಕಪ್ ಅರ್ಹತೆಯನ್ನೇ ಪಡೆಯದ ತಂಡದ ವಿರುದ್ಧ ಈ ರೀತಿ ಆಡಿ ಸೋಲುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಮಂಗಳವಾರ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಹೋಪ್ ಹೊಸ ಭರವಸೆ
ದ್ವಿತೀಯ ಪಂದ್ಯದಲ್ಲಿ ಪೇಸರ್ ರೊಮಾರಿಯೊ ಶೆಫರ್ಡ್, ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ, ನಾಯಕ ಶೈ ಹೋಪ್ ಮತ್ತು ಕೇಸಿ ಕಾರ್ಟಿ ಭಾರತಕ್ಕೆ ಸಂದಿಗ್ಧ ಸ್ಥಿತಿಯನ್ನು ತಂದೊಡ್ಡಿದ್ದರು. “ನಮ್ಮ ತಂಡ ಮರಳಿ ಕಠಿನ ಹೋರಾಟ ನಡೆಸಿ ಲಯ ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ಇದನ್ನು ಪುನರಾವರ್ತಿಸುವುದು .ಮುಖ್ಯ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಸರಣಿ ಗೆಲ್ಲುವುದು ನಮ್ಮ ಯೋಜನೆ’ ಎಂಬುದಾಗಿ ನಾಯಕ ಶೈ ಹೋಪ್ ಹೇಳಿದ್ದಾರೆ. ಅಜೇಯ 63 ರನ್ ಮಾಡಿ ತಂಡವನ್ನು ದಡ ಸೇರಿಸಿದ ಹೋಪ್ ವಿಂಡೀಸ್ ತಂಡಕ್ಕೆ ಹೊಸ ಭರವಸೆ ಮೂಡಿಸಿ ರುವುದು ಸುಳ್ಳಲ್ಲ.