Advertisement

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

05:55 PM Jun 17, 2024 | Team Udayavani |

ಮುಧೋಳ : ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಅಂದಾಜು 5,65,000 ರೂ. ಮೌಲ್ಯದ 15 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಮುಧೋಳ ನಗರದ ನಿಂಗರಾಜ ಬಿಸರಡ್ಡಿ ಎಂದು ಗುರುತಿಸಲಾಗಿದೆ.

ಆರೋಪಿಯು ಮುಧೋಳ, ಲೋಕಾಪುರ, ರಾಮದುರ್ಗ, ಸಾವಳಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 15 ಬೈಕ್ ಗಳನ್ನು ಕಳ್ಳತನ ಮಾಡಿದ್ದನೆನ್ನಲಾಗಿದೆ.

ಬೈಕ್ ಕಳ್ಳತನದ ಬಗ್ಗೆ ಪ್ರಕಾಶ ಯರಗಟ್ಟಿ‌ ಎಂಬುವರು ಕೆಲ ತಿಂಗಳುಗಳ ಹಿಂದೆ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಕಳ್ಳನನ್ನು ಹೆಡೆಮುರಿ‌ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಪಿಐ ಮಹಾದೇವ ಶಿರಹಟ್ಟಿ‌ ನೇತೃತ್ವದಲ್ಲಿ ನಡೆದ ತನಿಖಾ ತಂಡದಲ್ಲಿ ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ಕೆ.ಬಿ. ಮಾಂಗ ಸಿಬ್ಬಂದಿ ಆರ್.ಬಿಮ ಕಟಗೇರಿ, ಬೀರಪ್ಪ ಕುರಿ, ಹನಮಂತ ಮಾದರ, ಮಾರುತಿ ದಳವಾಯಿ, ಮಾರುತಿ ಅತ್ರಾವತ, ಎಸ್.ವೈ.ಐದಮನಿ, ಟಿ.ಎಸ್.ಹಿರಲಕ್ಕಿ ಭಾಗಿಯಾಗಿದ್ದರು.

Advertisement

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಡಿವೈಎಸ್ಪಿ‌ ಶಾಂತವೀರ ಅವರು ವೈಯಕ್ತಿಕ 10000 ರೂ. ಬಹುಮಾನವಾಗಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next