Advertisement

ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಮೂರು ಕಿ.ಮೀ ಅಂತರದ ಮಧ್ಯೆ ನಾಲ್ಕು ಅಪಘಾತ

02:54 PM Mar 07, 2022 | Team Udayavani |

ಯಲ್ಲಾಪುರ: ನಿತ್ಯವೂ ಒಂದಲ್ಲ ಒಂದು ವಾಹನ ಭಯಾನಕ ಅಪಘಾತವಾಗುವ ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ರವಿವಾರ ಎರಡು ಮೂರು ಕಿ.ಮೀ ಅಂತರದ ಮಧ್ಯೆಯೇ, ತಿರುವಿನಲ್ಲಿ ನಾಲ್ಕು ವಾಹನ ಅಪಘಾತಗಳು ಸಂಭವಿಸಿದೆ.

Advertisement

ನಾಲ್ಕೂ  ಅಪಘಾತಗಳು ಅಪಾಯಕಾರಿಯಾದ ತಿರುವಿನಲ್ಲೇ ಸಂಭವಿಸಿದೆ. ಒಂದು ತಿರುವಿನಲ್ಲಿ ಪರಸ್ಪರ ಎರಡು ಲಾರಿಗಳು ರಸ್ತೆಯ ಒಂದೊಂದು ಬದಿಗೆ ಹೋಗಿ ಪಲ್ಟಿ ಬಿದ್ದರೆ ಇನ್ನೊಂದು ತಿರುವಿನಲ್ಲಿ ಸರಕು ತುಂಬಿದ ಲಾರಿ ಹೆದ್ದಾರಿಯನ್ನು ಬಿಟ್ಟು ಕಾಡಿನ ಕಡೆ ತಗ್ಗಿಗೆ ಇಳಿದು ಅಲ್ಲಿ ಪಲ್ಟಿಬಿದ್ದಿದೆ.

ಮತ್ತೊಂದು ತಿರುವಿನಲ್ಲಿ ರಸ್ತೆಯ ಪಕ್ಕಕ್ಕೇ ಪಲ್ಟಿ ಬಿದ್ದ ಲಾರಿ ನುಜ್ಜುಗುಜ್ಜಾಗಿದೆ. ಈ ಅಪಘಾತಗಳಲ್ಲಿ ಸಾವು ನೋವು ಸಂಭವಿಸಲಿಲ್ಲ.ಮೊದಲ ತಿರುವಿನಲ್ಲಿ‌ಪಲ್ಟಿಬಿದ್ದ ವಾಹನ ಸ್ವಲ್ಪ ಕೆಳಗಡೆ ಹೋಗಿದ್ದರೆ ಸಾವಿರಾರು ಅಡಿಯಷ್ಟು ಕಂದಕಕ್ಕೆ ಹೋಗಿಬೀಳುತ್ತಿತ್ತು.ಇನ್ನೊಂದು ಇದೇ ತಿರುವಿನಲ್ಲಿ ಧರೆಗೆ ಮತ್ತು‌ವಿದ್ಯುತ್ ಕಂಬಕ್ಕೆ ಲಾರಿ ಗುದ್ದಿದ್ದು ವಿದ್ಯುತ್ ಕಂಬ ಮುರಿದು ಲಾರಿಗೆ ಅಪ್ಪಳಿಸಿದೆ.

ಸುದೈವಶಾತ್ ಅರೇಕ್ಷಣದಲ್ಲಿ ವಿದ್ಯುತ್ ಪೊರೈಕೆ ಸ್ಥಗಿತಗೊಂಡಿದ್ದರಿಂದ ಬೆಂಕಿಯ ಅನಾಹುತವಾಗಲಿ ಸಾವಿನ ಅನಾಹುತವಾಗಲ್ಲಿ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next