Advertisement

Mysore: ಸಿಎಂ ತವರಲ್ಲಿ ಜೀತಪದ್ದತಿ ಜೀವಂತ; ನೇಪಾಳ ಮೂಲದ ತಾಯಿ-ಮಕ್ಕಳ ರಕ್ಷಣೆ

11:44 AM Dec 08, 2023 | Team Udayavani |

ಮೈಸೂರು: ಜೀತಪದ್ದತಿ ನಿರ್ಮೂಲನೆಗೆ ಸರ್ಕಾರ, ಸಂಘ ಸಂಸ್ಥೆಗಳು ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ ಸಿಎಂ ತವರು ಜಿಲ್ಲೆಯಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿರುವ ಪ್ರಕರಣ ಬೆಳಕಿದೆ ಬಂದಿದೆ.

Advertisement

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ನೇಪಾಳ ದೇಶದ ತಾಯಿ ಮಕ್ಕಳನ್ನು ಜೀತ ಪದ್ದತಿಗೆ ತಳ್ಳಿ ದುಡಿಸಲಾಗುತ್ತಿತ್ತು. ಇದೀಗ ಅವರ ರಕ್ಷಣೆ ಮಾಡಲಾಗಿದೆ.

ಎಚ್.ಡಿ ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದಲ್ಲಿ ಈರೇಗೌಡ ಎಂಬಾತ ತನ್ನ ಜಮೀನಿನಲ್ಲಿ ಕೆಲಸಕ್ಕೆ ನೇಪಾಳ ಮೂಲದ ನಿರ್ಮಲಾ ಎಂಬ ಮಹಿಳೆ, ಆಕೆಯ ಪತಿ ಮತ್ತು ಮಕ್ಕಳನ್ನು ಜೀತಕ್ಕಿರಿಸಿದ್ದ. ಕಳೆದ ಒಂದೂವರೆ ವರ್ಷದಿಂದ ಜೀತ ಮಾಡಿಕೊಂಡಿದ್ದರು. ಜೀತಪದ್ಧತಿ ವಿರೋಧಿಸಿದ್ದಕ್ಕೆ ಪತ್ನಿಯಿಂದ ಪತಿಯನ್ನು ದೂರ ಮಾಡಿದ್ದ. ಪತಿಯನ್ನು ಮಡಿಕೇರಿಗೆ ಕಳುಹಿಸಿ ಪತ್ನಿ ಮತ್ತು ಮಕ್ಕಳಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು.

ತಹಸೀಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ತಾಲೂಕು ಆಡಳಿತ ದಾಳಿ ಮಾಡಿದ್ದು, ತಾಯಿ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಂಧನ ಮುಕ್ತವಾಗುತ್ತಿದ್ದಂತೆ ಮಹಿಳೆ ಕಣ್ಣೀರಿಟ್ಟಿದ್ದಾರೆ. ಬಂಧಮುಕ್ತ ಮಾಡಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Advertisement

ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ಎಡಿ ರಾಮಸ್ವಾಮಿ, ಗಿರಿಜನ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ, ಜೀವಿಕ ಸಂಘಟನೆ ಉಮೇಶ್, ಬಸವರಾಜು, ಎಎಸ್ ಐ ಸುಭಾನ್ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next