Advertisement

ಸೆರೆಮನೆಯಲ್ಲಿ ಕಳೆದ ಹದಿನಾಲ್ಕು ದಿನಗಳು

10:07 PM Oct 01, 2019 | mahesh |

1995ರಲ್ಲಿ ಮೊದಲು ಮುದ್ರಣಗೊಂಡ ಕೃಪಾಕರ ಸೇನಾನಿಯ ಪುಸ್ತಕವೇ “ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’. ವೀರಪ್ಪನ್‌ ಎಂದೊಡನೆಯೇ ಕ್ರೌರ್ಯದ ಮುಖ. ಆತ ದರೋಡೆಕೋರ, ಪ್ರಾಣ ಹಂತಕ ಎಂದೆಲ್ಲಾ ಅನಿಸತೊಡಗುವುದು ಸಹಜ. ಆದರೆ ನಿಜವಾಗಿಯೂ ವೀರಪ್ಪನ್‌ ಹೇಗಿದ್ದ ಆತನ ಕಾರ್ಯಚಟುವಟಿಕೆಗಳೇನು?, ಪ್ರತಿಯೊಬ್ಬರೂ ಆತನನ್ನೂ ಕ್ರೌರ್ಯ ರೂಪಿ ಎನ್ನಲು ಕಾರಣಗಳೇನು?, ಆತನ ಯೋಚನೆಗಳು, ಯೋಜನೆಗಳು ಅವನಲ್ಲಿದ್ದ ಸೌಮ್ಯ ಸ್ವಭಾವಗಳ ಕುರಿತು ನಾವು ಕೇಳರಿಯದ ಆತನ ಉತ್ಸುಕತೆಯ ಮಾತುಗಳನ್ನು ಈ ಪುಸ್ತಕದಲ್ಲಿ ನೈಜತೆಯನ್ನು ಬಿಂಬಿಸುವಂತೆ ನೀಡಲಾಗಿದೆ. ವೀರಪ್ಪನ್‌ ಇವರಿಬ್ಬರನ್ನು ಅಪಹರಿಸಿ ಕಳೆದ 14 ದಿನಗಳ ರೋಚಕ ಕಥೆಯೇ ಸೆರೆಮನೆಯಲ್ಲಿ ಕಳೆದ ಹದಿನಾಲ್ಕು ದಿನಗಳು.

Advertisement

 ಘಟನೆ: 1
ನಡುರಾತ್ರಿಯ ಪಯಣ ತಮ್ಮನ ಕೆಲಸದಲ್ಲಿ ಮಗ್ನರಾಗಿ ಕಾಲಕಳೆಯುತ್ತಿದ್ದ ಕೃಪಾಕರ ಸೇನಾನಿ ಆ ದಿನ ರಾತ್ರಿ ದಂತಚೋರನಿಂದ ಅಪಹರಣಕ್ಕೊಳಪಡುತ್ತಾರೆ. ಆ ಕ್ಷಣ ಅವರ ಪೇಚಾಟದ ಜತೆಗೆ ಅಲ್ಲಿ ನಡೆದ ಹಾಸ್ಯಾಸ್ಪದ ಘಟನೆಗಳನ್ನು ಮೆಲುಕು ಹಾಕುತ್ತಾ ಬಂದಿರುವ ಅಪಾಯದಿಂದ ಪಾರಾಗುವ ಪ್ರಯತ್ನಗಳೆಲ್ಲಾ ವಿಫ‌ಲವಾಗಿ ಕೊನೆಗೂ ನಡುರಾತ್ರಿಯೇ ದಟ್ಟ ಅರಣ್ಯದಲ್ಲಿ ಪಯಣ ಆರಂಭ.

 ಘಟನೆ: 2
ಜಂಗಲ್‌ ಇಂಟರ್‌ವ್ಯೂ ದಾರಿಯುದ್ದಕ್ಕೂ ಇವರಿಬ್ಬರನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಮುಂದುವರಿದು ಬಂಡೀಪುರದಲ್ಲಿ ಪಯಣ ನಿಲ್ಲಿಸಿ ವಿಶ್ರಾಂತಿ ಪಡೆಯಲು ನಿಲ್ಲುತ್ತಾರೆ. ಅವರಿಗೆ ಕನ್ನಡ ಕಲಿಸುವ ಪರಿಪಾಠವನ್ನು ಇಲ್ಲಿ ಕಾಣಬಹುದು. ಜತೆಗೆ ಅಲ್ಪ ಸ್ವಲ್ಪ ತಮಿಳಿನಲ್ಲಿ ದಂತಚೋರನನ್ನು ಮನವೊಲಿಸುವ ಪ್ರಯತ್ನವೂ ಮುಂದುವರಿಯುತ್ತದೆ. ಇಲ್ಲಿವರೆಗೂ ಯಾವುದೇ ರೀತಿಯ ಹಾನಿಯನ್ನು ಆತ ಮಾಡಿರಲಿಲ್ಲ ಆತನ ಯೋಚನೆಗಳೇನೆಂದು ತಿಳಿಯುವ ಇವರುಗಳು ಸುಸ್ತಾಗಿ ಬಿಡುತ್ತಿದ್ದರೂ.

 ಘಟನೆ: 3
ಕುತೂಹಲಕಾರನಾದ ಹಂತಕ: ದಟ್ಟ ಅರಣ್ಯವಾಸಿಯಾದ ಹಂತಕನಲ್ಲೂ ಇತ್ತು ಕುತೂಹಲತೆ, ಕಾಜಾಣ ಪಕ್ಷಿಯ ಕೂಗಿನ ಇಂಚರಕ್ಕೆ ಮನಸೋತ ಆತನ ದೃಶ್ಯಗಳು ಮತ್ತು ಆನೆಗಳ ಬಗ್ಗೆ ಆತನಗಿದ್ದ ವಿಶೇಷ ಒಲವುವನ್ನು ಮತ್ತು ಆತನ ನಂಬಿಕೆಯನ್ನು ಉಳಿಸದ ಬಿಳಿಯರ ಮೇಲಿನ ಕೋಪ ಇವೆಲ್ಲವನ್ನು ಇಲ್ಲಿ ಕಾಣಬಹುದಾಗಿದೆ.

 ವಿಜಿತಾ, ಬಂಟ್ವಾಳ

Advertisement
Advertisement

Udayavani is now on Telegram. Click here to join our channel and stay updated with the latest news.

Next