Advertisement

ಯುಎಸ್‌ ಗ್ರ್ಯಾನ್‌ ಸ್ಲ್ಯಾಮ್‌ ನಿಂದಲೂ ಹಿಂದೆ ಸರಿದ ಸೆರೆನಾ

09:15 PM Aug 25, 2021 | Team Udayavani |

ನ್ಯೂಯಾರ್ಕ್‌: ಅಮೆರಿಕದ ಸೆರೆನಾ ವಿಲಿಯಮ್ಸ್‌ ತವರಿನ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾéಮ್‌ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

Advertisement

ಬಲಗಾಲಿನ ಮಂಡಿಯ ಸ್ನಾಯು ಸೆಳೆತದಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಟ್ವೀಟ್‌ ಮಾಡಿದ್ದಾರೆ. ಸೆರೆನಾ ಅವರ ಈ ನಿರ್ಧಾರ ತವರಿನ ಟೆನಿಸ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈಗಾಗಲೇ ರೋಜರ್‌ ಫೆಡರರ್‌, ರಫಾಯೆಲ್‌ ನಡಾಲ್‌ ಕೂಡ ವರ್ಷಾಂತ್ಯದ ಈ ಕೂಟದಿಂದ ದೂರ ಸರಿದಿದ್ದು, ಕೂಟದ ಆಕರ್ಷಣೆ ಅಷ್ಟರಮಟ್ಟಿಗೆ ಕಡಿಮೆ ಆಗಲಿದೆ.

ಮುಂದಿನ ತಿಂಗಳು 40ನೇ ವರ್ಷಕ್ಕೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್‌ಗೆ ಕಳೆದ ವಿಂಬಲ್ಡನ್‌ ಟೂರ್ನಿಯ ವೇಳೆಯೇ ಈ ಸಮಸ್ಯೆ ತಲೆದೋರಿತ್ತು. 23 ಗ್ರ್ಯಾನ್‌ಸ್ಲ್ಯಾಮ್‌ ಗೆದ್ದಿರುವ ಸೆರೆನಾ, ಇನ್ನೊಂದು ಪ್ರಶಸ್ತಿ ಜಯಿಸಿದರೆ ಮಾರ್ಗರೆಟ್‌ ಕೋರ್ಟ್‌ ಅವರ ಸಾರ್ವಕಾಲಿಕ 24 ಗ್ರ್ಯಾನ್‌ಸ್ಲ್ಯಾಮ್‌ಗಳ ದಾಖಲೆಯನ್ನು ಸರಿದೂಗಿಸುತ್ತಿದ್ದರು. ಗುರುವಾರ ಯುಎಸ್‌ ಓಪನ್‌ ಡ್ರಾ ನಡೆಯಲಿದ್ದು, ಆ. 30ರಂದು ಪಂದ್ಯಾವಳಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next