Advertisement

ಸೆರೆನಾ ವಿಲಿಯಮ್ಸ್‌ ಗೆಲುವಿನ ‘ಶತಕ

02:21 AM Sep 05, 2019 | Team Udayavani |

ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ ನಲ್ಲಿ ಆತಿಥೇಯ ನಾಡಿನ ಸೆರೆನಾ ವಿಲಿಯಮ್ಸ್‌ ಗೆಲುವಿನ ‘ಶತಕ’ ದಾಖಲಿಸಿದ್ದಾರೆ. ಕ್ವಾರ್ಟರ್‌ ಫೈನಲ್ನಲ್ಲಿ ಚೀನದ ವಾಂಗ್‌ ಕ್ವಿಯಾಂಗ್‌ ಅವರನ್ನು 6-1, 6-0 ಅಂತರದಿಂದ ಸುಲಭದಲ್ಲಿ ಸೋಲಿಸುವ ಮೂಲಕ ಸೆರೆನಾ ಈ ಸಾಧನೆ ಮಾಡಿದರು.

Advertisement

ಯುಎಸ್‌ ಓಪನ್‌ ಇತಿಹಾಸದಲ್ಲಿ 100 ಗೆಲುವು ಸಾಧಿಸಿದ ಕೇವಲ 2ನೇ ಆಟಗಾರ್ತಿ ಎಂಬುದು ಸೆರೆನಾ ಹೆಗ್ಗಳಿಕೆ. ಇದಕ್ಕೂ ಮುನ್ನ ಅಮೆರಿಕದವರೇ ಆದ ಕ್ರಿಸ್‌ ಎವರ್ಟ್‌ ಈ ಸಾಧನೆ ಮಾಡಿದ್ದರು.

37ರ ಹರೆಯದ, 8ನೇ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್‌ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದು ವಾಂಗ್‌ ಅವರನ್ನು ತಬ್ಬಿಬ್ಬುಗೊಳಿಸಿದರು. 25 ವಿನ್ನರ್‌ಗಳನ್ನು ಸಿಡಿಸಿ ಭರ್ಜರಿ ಮೇಲುಗೈ ಸಾಧಿಸಿದರು. ತವರಿನ ಅಭಿಮಾನಿಗಳ ಅಮೋಘ ಬೆಂಬಲ ಕೂಡ ಸೆರೆನಾಗೆ ಸ್ಫೂರ್ತಿ ನೀಡಿತು. ಇದು ಸೆರೆನಾ ವಿರುದ್ಧ ವಾಂಗ್‌ ಆಡಿದ ಮೊದಲ ಪಂದ್ಯವಾಗಿತ್ತು. ಹಾಗೆಯೇ ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್ ಕೂಡ ಆಗಿತ್ತು.

‘ನನಗೆ ಸೆರೆನಾ ಸವಾಲನ್ನು ಯಾವ ರೀತಿಯಲ್ಲೂ ನಿಭಾಯಿಸಲಾಗಲಿಲ್ಲ. ಇದು ನನ್ನ ಪಾಲಿನ ಅತ್ಯಂತ ಕಠಿನ ಸ್ಪರ್ಧೆ ಆಗಿತ್ತು’ ಎಂಬುದು ವಾಂಗ್‌ ಕ್ವಿಯಾಂಗ್‌ ಪ್ರತಿಕ್ರಿಯೆ.

ಸೆರೆನಾ ಎದುರಾಳಿ ಸ್ವಿಟೋಲಿನಾ
ಇದು ತನ್ನ ಕಠಿನ ಪರಿಶ್ರಮಕ್ಕೆ ಸಂದ ಗೆಲುವು ಎಂದು ಪ್ರತಿಕ್ರಿಯಿಸಿರುವ ಸೆರೆನಾ, ಸೆಮಿಫೈನಲ್ನಲ್ಲಿ ಉಕ್ರೇನಿನ ಎಲಿನಾ ಸ್ವಿಟೋಲಿನಾ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಕ್ವಾರ್ಟರ್‌ ಫೈನಲ್ನಲ್ಲಿ ಅವರು ಬ್ರಿಟನ್ನಿನ ಜೊಹಾನ್ನಾ ಕೊಂಟಾ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು.

Advertisement

ಸತತ 2ನೇ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್
ಸೆರೆನಾ-ಸ್ವಿಟೋಲಿನಾ ಈವರೆಗೆ 5 ಸಲ ಎದುರಾಗಿದ್ದು, ಅಮೆರಿಕನ್‌ ಆಟಗಾರ್ತಿ 4-1 ಮುನ್ನಡೆ ಹೊಂದಿದ್ದಾರೆ. ಇದು ಸ್ವಿಟೋಲಿನಾ ಕಾಣುತ್ತಿರುವ ಸತತ 2ನೇ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್. ಕಳೆದ ವಿಂಬಲ್ಡನ್‌ನಲ್ಲೂ ಅವರು ಈ ಹಂತ ತಲುಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next